ಕರೀಂಗಂಜ್ (ಅಸ್ಸೋಂ): ಮಾರುತಿ ಸ್ವಿಫ್ಟ್ ಕಾರನ್ನು ಐಷಾರಾಮಿ ಲಂಬೋರ್ಗಿನಿ ಮಾದರಿಯಲ್ಲಿ ಬದಲಿಸಿ, ಅದನ್ನು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ವ್ಯಕ್ತಿಯೊಬ್ಬರು ಉಡುಗೊರೆಯಾಗಿ ನೀಡಿದ್ದಾರೆ. ಮೆಕ್ಯಾನಿಕ್ ಕೈಚಳಕದಲ್ಲಿ ಮೂಡಿದ ಈ ವಿಶೇಷ ಕಾರು ಕಂಡು ಅಸ್ಸೋಂ ಸಿಎಂ ಖುಷ್ ಆಗಿದ್ದಾರೆ.
ಕರೀಂಗಂಜ್ ಜಿಲ್ಲೆಯ ಮೋಟಾರ್ ಮೆಕ್ಯಾನಿಕ್ ಆಗಿರುವ ನೂರುಲ್ ಹಕ್ ಲಂಬೋರ್ಗಿನಿಯ ನಿರ್ಮಾತೃ. ದುಬಾರಿ ಮತ್ತು ಐಷಾರಾಮಿಯಾದ ಲಂಬೋರ್ಗಿನಿ ಕಾರನ್ನು ಓಡಿಸಬೇಕೆಂಬ ಅವರ ಆಸೆಯು ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಬದಲಿಸುವ ಐಡಿಯಾ ಕೊಟ್ಟಿದೆ.
ಬದಲಿಗಾಗಿ 10 ಲಕ್ಷ ರೂಪಾಯಿ ಖರ್ಚು: ಈ ಹಿಂದೆ ಸ್ಪೋಟ್ಸ್ ಕಾರನ್ನು ರೂಪಿಸಿದ ಅನುಭವವಿತ್ತು. ಲಂಬೋರ್ಗಿನಿ ಕಾರಿನ ತದ್ರೂಪವನ್ನೇ ರೂಪಿಸುವ ಇಚ್ಛೆಯೊಂದಿಗೆ ಯೋಜಿಸಿ 10 ಲಕ್ಷ ರೂಪಾಯಿ ಖರ್ಚು ಮಾಡಿ, ವಿವಿಧ ಬಿಡಿಭಾಗಗಳನ್ನು ಖರೀದಿಸಿ 4 ತಿಂಗಳಲ್ಲಿ ಐಷಾರಾಮಿ ಕಾರಿನಂತೆಯೇ ನಿರ್ಮಾಣ ಮಾಡಿದೆ ಎಂದು ನೂರುಲ್ ಹೇಳಿದರು.
18 ವರ್ಷಗಳಿಂದ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ನೂರುಲ್ ಹಳೆಯ ಕಾರುಗಳಿಗೆ ಮರುಜೀವ ನೀಡಿ, ಅವುಗಳು ಹೊಸ ರೂಪ ಪಡೆಯುವಂತೆ ಮಾಡುತ್ತಾರೆ. ಈಗ ರೂಪಿಸಿರುವ ಲಂಬೋರ್ಗಿನಿ ಕಾರನ್ನು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
-
Wrapped up my day at Silchar with a walk from Itkhola to Circuit House along with our karyakartas. Happy to meet a lot of warm-hearted along the way.
— Himanta Biswa Sarma (@himantabiswa) November 29, 2022 " class="align-text-top noRightClick twitterSection" data="
Also had the thrill of being at the wheel of a 'Lamborghini' assembled by Nurul Haque, a car enthusiast from Karimganj. pic.twitter.com/7EMsG4MtbT
">Wrapped up my day at Silchar with a walk from Itkhola to Circuit House along with our karyakartas. Happy to meet a lot of warm-hearted along the way.
— Himanta Biswa Sarma (@himantabiswa) November 29, 2022
Also had the thrill of being at the wheel of a 'Lamborghini' assembled by Nurul Haque, a car enthusiast from Karimganj. pic.twitter.com/7EMsG4MtbTWrapped up my day at Silchar with a walk from Itkhola to Circuit House along with our karyakartas. Happy to meet a lot of warm-hearted along the way.
— Himanta Biswa Sarma (@himantabiswa) November 29, 2022
Also had the thrill of being at the wheel of a 'Lamborghini' assembled by Nurul Haque, a car enthusiast from Karimganj. pic.twitter.com/7EMsG4MtbT
ಮೆಕ್ಯಾನಿಕ್ ನೂರುಲ್ ಫೆರಾರಿ ಮಾದರಿಯಲ್ಲಿ ಮತ್ತೊಂದು ಕಾರನ್ನು ರೂಪಿಸಲು ಯೋಜಿಸಿದ್ದೇನೆ. ಸರ್ಕಾರ ಈ ಕೆಲಸಕ್ಕೆ ನೆರವು ನೀಡಿದರೆ, ಮತ್ತಷ್ಟು ಕಾರುಗಳನ್ನು ಬದಲಿಸಿ ಹೊಸ ರೂಪ ನೀಡುವೆ ಎಂದು ಹೇಳಿದರು.
ಸಿಎಂ ಹಿಮಂತ್ ಖುಷ್: ಲಂಬೋರ್ಗಿನಿಯಾಗಿ ಮಾರ್ಪಾಡಾದ ಹಳೆಯ ಮಾರುತಿ ಸ್ವಿಫ್ಟ್ ಅನ್ನು ಕಂಡು ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು ಅಚ್ಚರಿಯ ಜೊತೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮೆಕ್ಯಾನಿಕ್ ನೂರುಲ್ರಿಂದ ಗುವಾಹಟಿಯಲ್ಲಿ ಕಾರು ಪಡೆದು ಅದರಲ್ಲಿ ಕುಳಿತು ಆನಂದಿಸಿದರು. ಕಾರಿನ ಮಾದರಿ ಥ್ರಿಲ್ ನೀಡಿತು. ಥೇಟ್ ಲಂಬೋರ್ಗಿನಿಯಂತೆಯೇ ಇದು ಕಾಣುತ್ತದೆ ಎಂದು ಕಾರಿನ ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಓದಿ: ಲಾರಿ-ಕಂಟೈನರ್ ಮಧ್ಯೆ ಭೀಕರ ರಸ್ತೆ ಅಪಘಾತ.. ಚಾಲಕರು ಸೇರಿ ನಾಲ್ವರು ಸಜೀವ ದಹನ