ETV Bharat / bharat

ಪಬ್​ಜಿ ಪಾರ್ಟನರ್ ಜತೆ ಲವ್​​ನಲ್ಲಿ ಬಿದ್ದ ವಿವಾಹಿತೆ... ಭೇಟಿಗಾಗಿ ಹಿಮಾಚಲದಿಂದ ವಾರಣಾಸಿಗೆ ಬಂದಳು: ಮುಂದೆ!? - ಲವ್​ನಲ್ಲಿ ಬಿದ್ದ ವಿವಾಹಿತ ಮಹಿಳೆ

ಪಬ್​ಜಿ ಆಟದಲ್ಲಿ ಸಹ ಪಾರ್ಟನರ್​ನೊಂದಿಗೆ ಲವ್​ನಲ್ಲಿ ಬಿದ್ದ ವಿವಾಹಿತ ಮಹಿಳೆಯೋರ್ವಳು ಆತನ ಭೇಟಿಗೋಸ್ಕರ ಹಿಮಾಚಲ ಪ್ರದೇಶದಿಂದ ವಾರಣಾಸಿಗೆ ಬಂದಿರುವ ಘಟನೆ ನಡೆದಿದೆ.

married woman kangra news
married woman kangra news
author img

By

Published : Feb 25, 2021, 9:28 PM IST

ಕಾಂಗ್ರಾ(ಹಿಮಾಚಲ ಪ್ರದೇಶ): ಮೊಬೈಲ್​​ನಲ್ಲಿ ಪಬ್​ಜಿ ಅಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಪ್ರೀತಿಯಲ್ಲಿ ಬಿದ್ದು, ಮನೆ ಬಿಟ್ಟು ಹೋಗಿರುವ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ.

ಪಬ್​ಜಿ ಆಡುವಾಗ ಸಹ ಪಾರ್ಟನರ್​ ಆಗಿದ್ದ 12ನೇ ತರಗತಿ ವಿದ್ಯಾರ್ಥಿ ಜತೆ ಲವ್​ನಲ್ಲಿ ಬಿದ್ದಿದ್ದು, ಆತನ ಭೇಟಿ ಮಾಡುವ ಉದ್ದೇಶದಿಂದ ಕಾಂಗ್ರಾದಿಂದ ವಾರಣಾಸಿಗೆ ಆಗಮಿಸಿದ್ದಾಳೆ. ಈ ವೇಳೆ ಆಕೆಯನ್ನು ವಶಕ್ಕೆ ಪಡೆದ ಪೊಲೀಸರು, ಕುಟುಂಬಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ನಲ್ಲಿ ನಂ.1 ಸ್ಥಾನಕ್ಕೇರಿದ ಭಾರತ... ರೇಸ್​​ನಿಂದ ಹೊರಬಿದ್ದ ಇಂಗ್ಲೆಂಡ್​!

ಫೆಬ್ರವರಿ ಮೊದಲ ವಾರದಲ್ಲಿ ಪಬ್​ಜಿ ಪಾರ್ಟನರ್​(ಲವರ್​) ಭೇಟಿಯಾಗುವ ಉದ್ದೇಶದಿಂದ ಮನೆ ಬಿಟ್ಟಿದ್ದಾಳೆ. ಈ ವೇಳೆ ಸಂಬಂಧಿಕರು ಎಲ್ಲೆಡೆ ಹುಡುಕಿದರೂ ಆಕೆ ಪತ್ತೆಯಾಗಿಲ್ಲ. ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ವಿವಾಹಿತ ಮಹಿಳೆ ವಾರಣಾಸಿಯಲ್ಲಿ ಕಾಣಸಿಗುತ್ತಿದ್ದಂತೆ ಆಕೆಯನ್ನು ವಶಕ್ಕೆ ಪಡೆದು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಹಿಳೆ ಪಬ್​ಜಿ ಆಟ ಆಡುತ್ತಿದ್ದಳು. ಈ ವೇಳೆ ಪರಿಚಯವಾದ ಪಬ್​ಜಿ ಪಾರ್ಟನರ್​ನೊಂದಿಗೆ ಲವ್​ನಲ್ಲಿ ಬಿದ್ದಿದ್ದಾಳೆ. ಆತನ ಭೇಟಿ ಮಾಡಲು ವಾರಣಾಸಿಗೆ ಬಂದಿದ್ದಾಳೆ. ಈ ವೇಳೆ ಆತ 12ನೇ ತರಗತಿ ವಿದ್ಯಾರ್ಥಿ ಎಂಬುದು ಗೊತ್ತಾಗುತ್ತಿದ್ದಂತೆ ಖುದ್ದಾಗಿ ಮಹಿಳೆ ಕುಟುಂಬಸ್ಥರಿಗೆ ಫೋನ್ ಮಾಡಿ ತನ್ನ ಕರೆದುಕೊಂಡು ಹೋಗುವಂತೆ ವಿನಂತಿ ಮಾಡಿದ್ದಾಳೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.