ETV Bharat / bharat

'ಮದುವೆ ಧರ್ಮನಿಷ್ಠ, ಆಧ್ಯಾತ್ಮಿಕ ಬಂಧ': ವಿವಾಹ ವಿಚ್ಚೇದನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ ವ್ಯಾಖ್ಯಾನ - ಸುಪ್ರೀಂಕೋರ್ಟ್​ ವಿವಾಹ ಬಂಧನ ವ್ಯಾಖ್ಯಾನ

89 ವರ್ಷದ ವ್ಯಕ್ತಿ ತನ್ನ 82ರ ಪ್ರಾಯದ ಪತ್ನಿಯಿಂದ ವಿಚ್ಚೇದನ ಕೋರಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ ವಿವಾಹ ಬಂಧನದ ಬಗ್ಗೆ ಬಹುಮುಖ್ಯ ವ್ಯಾಖ್ಯಾನ ನೀಡಿದೆ.

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
author img

By ETV Bharat Karnataka Team

Published : Oct 11, 2023, 10:53 PM IST

ನವದೆಹಲಿ: ವಿವಾಹ ಸಂಬಂಧ ಭಾರತೀಯ ಸಂಸ್ಕೃತಿಯಲ್ಲಿ ಅಚಲವಾಗಿದೆ. ಇದರಿಂದಲೇ ಹಲವಾರು ಸಂಬಂಧಗಳು ಹುಟ್ಟಿಕೊಂಡಿವೆ. ವಿವಾಹ ಪತಿ-ಪತ್ನಿಯರ ನಡುವಿನ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಅಮೂಲ್ಯವಾದ ಭಾವನಾತ್ಮಕ ಸೆಳೆತ. ಇದನ್ನು ಸಂವಿಧಾನದ 142 ನೇ ವಿಧಿಯ ಅನುಸಾರ ವಿಘಟನೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿತು.

ನ್ಯಾಯಾಲಯಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ಹೊರತಾಗಿಯೂ, ವೈವಾಹಿಕ ಸಂಬಂಧಗಳು ಇನ್ನೂ ಗಟ್ಟಿಯಾಗಿವೆ. ಕಾನೂನಿನ ಅಡಿಯಲ್ಲಿ ನಾವು ಸದೃಢ ಸಂಬಂಧವಾದ 'ಮದುವೆ ಬಂಧ'ವನ್ನು ಬೇರ್ಪಡಿಸುವುದು ಅಸಾಧ್ಯ ಎಂದು ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರಿದ್ದ ಪೀಠ ಹೇಳಿದೆ.

89 ವರ್ಷದ ವ್ಯಕ್ತಿ ತನ್ನ 82 ವರ್ಷದ ಪತ್ನಿಯಿಂದ ವಿಚ್ಛೇದನ ಕೋರಿದ ಅರ್ಜಿಯ ವಿಚಾರಣೆಯ ವೇಳೆ ವೈವಾಹಿಕ ಸಂಬಂಧದ ಗಟ್ಟಿತನದ ಬಗ್ಗೆ ಕೋರ್ಟ್​ ಈ ವ್ಯಾಖ್ಯಾನ ನೀಡಿತು. ಪ್ರಕರಣದಲ್ಲಿ ಮಹಿಳೆ ತಾನು ಈ ವಯಸ್ಸಿನಲ್ಲಿ ಗಂಡನಿಂದ ದೂರವಾಗಲು ಇಚ್ಚಿಸದೇ, ಸಹಬಾಳ್ವೆ ನಡೆಸಲು ಮನವಿ ಮಾಡಿದ್ದರಿಂದ ಪುರುಷ ಸಲ್ಲಿಸಿದ ವಿಚ್ಚೇದನ ಅರ್ಜಿಯನ್ನು ವಜಾ ಮಾಡಿತು.

ಕಾನೂನು ಬಂಧ ಕಡಿಯಬೇಕೇ?: ಭಾರತ ಸಂವಿಧಾನದ 142 ನೇ ವಿಧಿಯು ವಿಚ್ಚೇದನಕ್ಕೆ ಅವಕಾಶ ನೀಡಿದೆ. ಹಾಗಂತ ವಿಘಟಿಸಲಾಗದ ಬಂಧವಾದ ವೈವಾಹಿಕ ಬಂಧವನ್ನು ಕಾನೂನನಡಿ ತುಂಡರಿಸುವ ಅಗತ್ಯವಿದೆಯೇ?. ಮದುವೆ ಎಂಬುದು ಸಮಾಜದಲ್ಲಿ ತನ್ನದೇ ಆದ ಗೌರವಯುತ ಸ್ಥಾನ ಹೊಂದಿದೆ. ಅದನ್ನು ವಿಚ್ಚೇದನವೆಂಬ ಪ್ರಕ್ರಿಯೆಯಿಂದ ದೂರ ಮಾಡುವುದೇ ಆಧಾರವಾಗಬಾರದು ಎಂದು ಕೋರ್ಟ್​ ತಿಳಿಸಿತು.

ಮದುವೆ ಅದ್ಭುತ ಭಾವನೆಗಳ ನಂಟು: ವಿವಾಹ ನಂಟಿನ ಬಗ್ಗೆ ವಿವರಿಸಿದ ನ್ಯಾಯಮೂರ್ತಿ ತ್ರಿವೇದಿ ಅವರು, ನ್ಯಾಯಾಲಯಗಳಲ್ಲಿ ವಿಚ್ಛೇದನದ ಅರ್ಜಿಗಳು ಹೆಚ್ಚುತ್ತಿವೆ. ಅದರ ನಡುವೆಯೂ ವಿವಾಹದ ನಂಟು ಇನ್ನೂ ಪತಿ- ಪತ್ನಿಯರ ನಡುವಿನ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಬೇರ್ಪಡಿಸಲಾಗದ ಭಾವನಾತ್ಮಕ ನಂಟು ಹೊಂದಿದೆ. ಭಾರತೀಯ ಸಮಾಜದಲ್ಲಿ ಕಾನೂನಿನ ಮುಂದೆ ಮಾತ್ರವಲ್ಲದೆ ಸಾಮಾಜಿಕ ಮಾನದಂಡಗಳಿಂದಲೂ ವಿವಾಹವನ್ನು ಎತ್ತಿಹಿಡಿಯಲ್ಪಡುತ್ತದೆ. ಉಳಿದೆಲ್ಲಾ ಸಂಬಂಧಗಳು ವೈವಾಹಿಕ ಸಂಬಂಧಗಳಿಂದಲೇ ಹುಟ್ಟಿಕೊಂಡಿವೆ. ಅವು ಇನ್ನೂ ಮುಂದುವರಿಯುತ್ತಿವೆ ಎಂದು ಹೇಳಿದರು.

ವಿಚ್ಚೇದನ ಅರ್ಜಿ ವಜಾ: ಪ್ರಸ್ತುತ ಪ್ರಕರಣದಲ್ಲಿ ಪತಿಗೆ ಸುಮಾರು 89 ವರ್ಷಗಳು ಮತ್ತು ಪತ್ನಿಯ ವಯಸ್ಸು ಸುಮಾರು 82 ವರ್ಷಗಳಾಗಿವೆ. ಇಬ್ಬರೂ 1963 ರಲ್ಲಿ ವಿವಾಹವಾಗಿದ್ದು, ಪತ್ನಿ ತನ್ನ ಜೀವನದುದ್ದಕ್ಕೂ ಪವಿತ್ರ ಸಂಬಂಧವನ್ನು ಉಳಿಸಿಕೊಂಡಿದ್ದಾಳೆ. ತನ್ನ ಮೂವರು ಮಕ್ಕಳನ್ನು ಪೊರೆಯುತ್ತಿದ್ದಾಳೆ. ಈ ಮಧ್ಯೆ ಪತಿ- ಪತ್ನಿಯರ ನಡುವೆ ವೈಮನಸ್ಸು ಉಂಟಾಗಿ ಪತಿ ವಿಚ್ಚೇದನ ಕೋರಿದ್ದರು.

ಆದರೆ, ಪತ್ನಿ ತನ್ನ ಗಂಡನೊಂದಿಗೆ ಜೀವನ ಮುಂದುವರಿಸಲು ಬಯಸಿದ್ದು, ತನ್ನ ಪತಿಯನ್ನು ನೋಡಿಕೊಳ್ಳಲೂ ಸಿದ್ಧಳಿದ್ದಾಳೆ. ಜೀವನದ ಈ ಹಂತದಲ್ಲಿ ಒಂಟಿಯಾಗಿರಲು ಮತ್ತು 'ವಿಚ್ಛೇದಿತ' ಮಹಿಳೆ ಎಂಬ ಕಳಂಕದೊಂದಿಗೆ ಸಾಯಲು ಬಯಸುವುದಿಲ್ಲ ಎಂದು ಆಕೆ ತಿಳಿಸಿದ್ದಾಳೆ. ಇದರಿಂದ ಸಮಾಜದಲ್ಲಿ ಆಕೆಗೆ ಕಳಂಕ ಅಂಟಬಾರದು. ಇಲ್ಲಿ ನಾವು ಪ್ರತಿವಾದಿಯ ಭಾವನೆಗಳಿಗೆ ಮನ್ನಣೆ ನೀಡುತ್ತೇವೆ ಎಂದು ಹೇಳಿದ ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರ ಪೀಠ ಅರ್ಜಿಯನ್ನು ವಜಾ ಮಾಡಿತು.

ಇದನ್ನೂ ಓದಿ: ರಾಜಸ್ಥಾನ ವಿಧಾನಸಭಾ ಚುನಾವಣೆ: ಸಾವಿರಾರು ಮದುವೆಗಳ ಕಾರಣಕ್ಕಾಗಿ ಮತದಾನದ ದಿನಾಂಕವೇ ಬದಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.