ಚಂಡೀಗಢ: ಯುವತಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವವರೆಗೂ ಹಿಂದೂ ಪುರುಷನೊಂದಿಗೆ ನಡೆದ ಮದುವೆ ಅಮಾನ್ಯವಾಗಿರಲಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 18 ವರ್ಷದ ಮುಸ್ಲಿಂ ಯುವತಿ ಮತ್ತು 25 ವರ್ಷದ ಹಿಂದೂ ಯುವಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ತೀರ್ಪು ನೀಡಿದೆ. ಜನವರಿ ತಿಂಗಳಲ್ಲಿ ಶಿವ ದೇವಸ್ಥಾನದಲ್ಲಿ ಇವರು ಮದುವೆ ಮಾಡಿಕೊಂಡಿದ್ದರು. ಇದಾದ ಬಳಿಕ ಇವರಿಗೆ ಕುಟುಂಬಸ್ಥರಿಂದ ಬೆದರಿಕೆ ಹಾಕಲಾಗಿತ್ತು.
ಇದರ ವಿಚಾರಣೆ ನಡೆಸಿದ ಕೋರ್ಟ್ ಈ ಅಭಿಪ್ರಾಯಪಟ್ಟಿದ್ದು, ವಯಸ್ಕರಾದ ಕಾರಣ ಅವರು ಒಮ್ಮತದ ಸಂಬಂಧ ಹೊಂದಬಹುದು ಎಂದಿದೆ. ಅರ್ಜಿದಾರರು ತಮ್ಮ ಕುಟುಂಬಗಳಿಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಜತೆಗೆ ತಮಗೆ ಭದ್ರತೆ ಒದಗಿಸುವಂತೆ ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು.
ಇದೀಗ ದಂಪತಿಗೆ ಭದ್ರತೆ ಒದಗಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಆದರೆ ಯುವತಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವವರೆಗೆ ಹಿಂದೂ ಪುರುಷನೊಂದಿಗಿನ ವಿವಾಹ ಅಮಾನ್ಯವಾಗಿರಲಿದೆ ಎಂದು ಹೇಳಿದೆ.