ಮುಂಬೈ: ಷೇರು ಮಾರುಕಟ್ಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಬರೆದಿದ್ದು, 55,000 ದಾಟಿರುವ ಕಾರಣ ವಿವಿಧ ಷೇರುಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿವೆ. ಮುಂಬೈ ಸೂಚ್ಯಂಕ 593 ಅಂಕ ಇಳಿಕೆಯಾಗಿದೆ. ಪ್ರಮುಖವಾಗಿ ಟಿಸಿಎಸ್, ರಿಲಿಯನ್ಸ್ ಇಂಡಸ್ಟ್ರಿ, ಹೆಚ್ಡಿಎಫ್ಸಿ ಭಾರ್ತಿ ಏರ್ಟೆಲ್ ಷೇರುಗಳಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ.
54,911.95 ಪಾಯಿಂಟ್ಸ್ನೊಂದಿಗೆ ವ್ಯವಹಾರ ಆರಂಭಿಸಿದ ಸೆನ್ಸೆಕ್ಸ್ ಇಂದು 55,487.79 ಪಾಯಿಂಟ್ಸ್ನೊಂದಿಗೆ ಸಾರ್ವಕಾಲಿಕ ದಾಖಲೆ ಮುಟ್ಟಿದ್ದು, ಹೀಗಾಗಿ ನಿಫ್ಟಿಯಲ್ಲೂ 164 ಅಂಕಗಳ ಏರಿಕೆ ಕಂಡು ಬಂದಿತು.
ಫೆಬ್ರವರಿ ನಂತರ ಹೊಸ ದಾಖಲೆ ಬರೆದ ಸೆನ್ಸೆಕ್ಸ್
ಲಭ್ಯವಾಗಿರುವ ಮಾಹಿತಿ ಪ್ರಕಾರ ಇದೇ ವರ್ಷ ಸೆನ್ಸೆಕ್ಸ್ 7,685 ಅಂಕಗಳ ಏರಿಕೆ ಕಂಡಿದ್ದು, ಫೆಬ್ರವರಿ ಬಳಿಕ 5 ಸಾವಿರ ಏರಿಕೆಯಾಗಿದೆ. ಹೀಗಾಗಿ ಷೇರು ಹೂಡಿಕೆದಾರರು 3.48 ಲಕ್ಷ ಕೋಟಿ ರೂ. ಗಳಿಕೆ ಮಾಡಿದ್ದಾರೆ. ಪ್ರಮುಖವಾಗಿ ಬಜಾಜ್ ಅಟೋ, ಟಾಟಾ ಸ್ಟೀಲ್, ಭಾರ್ತಿ ಏರ್ಟೆಲ್, ಎಲ್ & ಟಿ, ರಿಲಯನ್ಸ್ ಇಂಡಸ್ಟ್ರೀ ಸೇರಿ ಅನೇಕ ಷೇರುಗಳು ದಾಖಲೆ ಮಟ್ಟದಲ್ಲಿ ಖರೀದಿಯಾದವು.
ಏರಿಕೆ ಕಂಡ ಷೇರುಗಳು
- ಟಾಟಾ ಇಂಡಸ್ಟ್ರೀ ಶೇ 4.29
- ಟಿಸಿಎಸ್ ಶೇ 3.33
- ಲಾರ್ಸನ್ ಶೇ 2.77
- ಭಾರ್ತಿ ಏರ್ಟೆಲ್ ಶೇ 2.23
- ಎಚ್ಸಿಎಲ್ ಟೆಕ್ ಶೇ 2.09
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು
- ಐಷರ್ ಮೋಟಾರ್ಸ್ ಶೇ -2.67
- ಡಾ, ರೆಡ್ಡೀಸ್ ಲ್ಯಾಬ್ಸ್ ಶೇ -1.36
- ಸಿಪ್ಲಾ ಶೇ -1.20
- ಪವರ್ ಗ್ರಿಡ್ ಕಾರ್ಪೊರೇಷನ್ ಶೇ -1.20
- ಬ್ರಿಟಾನಿಯಾ ಶೇ -1.14