ETV Bharat / bharat

India Women's Hockey: ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಲು ಜೋರ್ಡ್ ಮರಿಜ್ನೆ ನಿರ್ಧಾರ

ಭಾರತದ ಮಹಿಳಾ ಹಾಕಿ ಟೀಂ ಐತಿಹಾಸಿಕ ಸಾಧನೆಯ ಹೊರತಾಗಿಯೂ ಸೋಲನುಭವಿಸಿದೆ. ಇದರಿಂದ ನೊಂದಿರುವ ಭಾರತೀಯ ವನಿತೆಯರ ಹಾಕಿ ತಂಡದ ಕೋಚ್​ ಜೋರ್ಡ್​ ಮರಿಜ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.

Marijne says Tokyo Olympics was last assignment as coach with India women's hockey team
India Women's Hockey: ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಲು ಜೋರ್ಡ್ ಮರಿಜ್ನೆ ನಿರ್ಧಾರ
author img

By

Published : Aug 7, 2021, 8:08 AM IST

ನವದೆಹಲಿ: ಭಾರತೀಯ ವನಿತೆಯರ ಹಾಕಿ ತಂಡ ಪದಕ ಗೆಲ್ಲಲು ವಿಫಲವಾದರೂ ಕೂಡಾ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಬೆನ್ನಲ್ಲೇ ಜೋರ್ಡ್​ ಮರಿಜ್ನೆ ಹಾಕಿ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತೀಯ ವನಿತೆಯರ ತಂಡ ಗ್ರೇಟ್​ ಬ್ರಿಟನ್​ನೊಂದಿಗೆ ಹೋರಾಡಿ ಕಂಚು ಪಡೆಯುವಲ್ಲಿ ವಿಫಲವಾಗಿದ್ದು, ಈ ಪಂದ್ಯವೇ ಭಾರತೀಯ ಮಹಿಳಾ ಹಾಕಿ ತಂಡದೊಂದಿಗೆ ನನಗೆ ಕೊನೆಯ ಪಂದ್ಯ ಎಂದು ಜೋರ್ಡ್​ ಮರಿಜ್ನೆ ಸ್ಪಷ್ಟನೆ ನೀಡಿದ್ದಾರೆ.

ನಾನು ಯಾವುದೇ ಪ್ಲಾನ್ ಅನ್ನು ಹೊಂದಿಲ್ಲ. ಗ್ರೇಟ್ ಬ್ರಿಟನ್​ನೊಂದಿಗಿನ ಪಂದ್ಯವೇ ನನಗೆ ಕೊನೆಯ ಪಂದ್ಯವಾಗಿದೆ. ಮುಂದಿನ ಹೊಣೆ ಮಹಿಳೆಯರ ಹಾಕಿ ತಂಡದ ಮತ್ತೋರ್ವ ತರಬೇತುದಾರರಾದ ಜನ್ನೇಕಾ ಶಾಪ್‌ಮನ್​ಗೆ ಬಿಟ್ಟಿದ್ದು ಎಂದು ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.

ಜೋರ್ಡ್​ ಮರಿಜ್ನೆ ಮತ್ತು ತಂಡದ ಜನ್ನೆಕಾ ಶಾಪ್‌ಮನ್ ಅವರ ಕೋಚ್ ಅವಧಿಯನ್ನು ವಿಸ್ತರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಅವಕಾಶ ನೀಡಿದ್ದರೂ, ವೈಯಕ್ತಿಕ ಕಾರಣಗಳಿಂದ ಈ ಅವಕಾಶವನ್ನು ಇಬ್ಬರೂ ತರಬೇತುದಾರರು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

47 ವರ್ಷದ ಜೋರ್ಡ್​ ಮರಿಜ್ನೆ ಅವರ ಗಡಿಯಲ್ಲಿ ಭಾರತೀಯ ಮಹಿಳೆಯರ ಹಾಕಿ ತಂಡ ಅತ್ಯುನ್ನತ ಪ್ರದರ್ಶನ ತೋರಲು ಸಾಧ್ಯವಾಗಿದ್ದು, ಟೋಕಿಯೋ ಒಲಿಂಪಿಕ್ಸ್​ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಇದನ್ನೂ ಓದಿ: ಆ.15ರಂದು ಧ್ವಜಾರೋಹಣ ಮಾಡಲು ಬಿಡುವುದಿಲ್ಲ: ಯುಪಿ ಸಿಎಂ ಯೋಗಿಗೆ ಬೆದರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.