ETV Bharat / bharat

ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್​ ಸಂಸ್ಥೆಯ 60ನೇ ವರ್ಷಾಚರಣೆ - ಎಂಡಿ ಶೈಲಜಾ ಕಿರಣ್

ಮಾರ್ಗದರ್ಶಿ ಚಿಟ್‌ಫಂಡ್ ಸಂಸ್ಥೆ 61ನೇ ವರ್ಷಕ್ಕೆ ಕಾಲಿಟ್ಟ ಸುಸದಂರ್ಭದಲ್ಲಿ ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಕೇಕ್ ಕತ್ತರಿಸಿ, ಸಂಸ್ಥೆಯ ಎಲ್ಲ ಸಿಬ್ಬಂದಿ ಮತ್ತು ಗ್ರಾಹಕರನ್ನು ಅಭಿನಂದಿಸಿದರು

Margadarsi Chit Fund  60th Anniversary Celebrations at Ramoji Film City
ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್​ ಸಂಸ್ಥೆಯ 60ನೇ ವರ್ಷಾಚರಣೆ
author img

By

Published : Oct 1, 2022, 3:24 PM IST

Updated : Oct 1, 2022, 4:53 PM IST

ಹೈದರಾಬಾದ್​ (ತೆಲಂಗಾಣ): ಈನಾಡು, ಈಟಿವಿ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ರಾಮೋಜಿ ರಾವ್ ಅವರು ಸ್ಥಾಪಿಸಿದ ಮಾರ್ಗದರ್ಶಿ ಚಿಟ್​ ಫಂಡ್​ ಸಂಸ್ಥೆಗೆ ಇಂದು 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ 60ನೇ ವರ್ಷಾಚರಣೆ ಮಾಡಲಾಯಿತು.

ಸಾವಿರಾರು ಜನರ ಬಾಳಿನಲ್ಲಿ ಆರ್ಥಿಕ ಬೆಳಕು ಮೂಡಿಸಿದ ಮಾರ್ಗದರ್ಶಿ ಸಂಸ್ಥೆ ಆರು ದಶಕಗಳ ಸುದೀರ್ಘ ಇತಿಹಾಸ ಹೊಂದಿದೆ. ಇಂದು ನಡೆದ 60ನೇ ವರ್ಷಾಚರಣೆ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ರಾಮೋಜಿ ರಾವ್, ಎಂಡಿ ಶೈಲಜಾ ಕಿರಣ್, ಈನಾಡು ಎಂಡಿ ಕಿರಣ್, ರಾಮೋಜಿ ರಾವ್ ಅವರ ಕುಟುಂಬ ಸದಸ್ಯರು ಹಾಗೂ ಸಂಸ್ಥೆಯ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್​ ಸಂಸ್ಥೆಯ 60ನೇ ವರ್ಷಾಚರಣೆ

1962ರಲ್ಲಿ ಕೇವಲ ಇಬ್ಬರು ಉದ್ಯೋಗಿಗಳೊಂದಿಗೆ ಪ್ರಾರಂಭವಾಗಿದ್ದ ಮಾರ್ಗದರ್ಶಿ ಚಿಟ್​ ಫಂಡ್​ ಸಂಸ್ಥೆ ಪ್ರಸ್ತುತ 4,300 ಉದ್ಯೋಗಿಗಳನ್ನು ಹೊಂದಿದೆ. ತೆಲಂಗಾಣ, ಆಂಧ್ರ ಪ್ರದೇಶದ ಜೊತೆಗೆ ತಮಿಳುನಾಡು, ಕರ್ನಾಟಕದಲ್ಲೂ ಉತ್ತಮ ಖ್ಯಾತಿ ಗಳಿಸಿವೆ. ಒಟ್ಟಾರೆ 108 ಶಾಖೆಗಳೊಂದಿಗೆ ಇದು ಪ್ರಮುಖ ಕಂಪನಿಯಾಗಿ ಹೊರಹೊಮ್ಮಿದ್ದು, 60 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ.

ಮಾರ್ಗದರ್ಶಿ ಚಿಟ್‌ಫಂಡ್ ಸಂಸ್ಥೆ 61ನೇ ವರ್ಷಕ್ಕೆ ಕಾಲಿಟ್ಟ ಸುಸದಂರ್ಭದಲ್ಲಿ ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಕೇಕ್ ಕತ್ತರಿಸಿ, ಸಿಬ್ಬಂದಿ ಮತ್ತು ಗ್ರಾಹಕರನ್ನು ಅಭಿನಂದಿಸಿದರು. ಸಂಸ್ಥೆಗೆ ಸದಾ ಮಾರ್ಗದರ್ಶಿಯಾಗಿ ನಿಂತ ರಾಮೋಜಿ ರಾವ್ ಅವರಿಗೆ ಮಾರ್ಗದರ್ಶಿ ಎಂಡಿ ಶೈಲಜಾ ಕಿರಣ್ ಅವರು ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: 60ರ ಸಂಭ್ರಮಾಚರಣೆಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್​.. ಚಂದಾದಾರರಿಗೆ ಧನ್ಯವಾದ

Last Updated : Oct 1, 2022, 4:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.