ETV Bharat / bharat

Margadarsi Chit Fund: ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣದ ವರ್ಗಾವಣೆ ಸಾಧ್ಯವಿಲ್ಲ- ಸುಪ್ರೀಂ ಕೋರ್ಟ್

Margadarsi Chit Fund case: ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣದ ವರ್ಗಾವಣೆ ಸಾಧ್ಯವಿಲ್ಲ ಎಂದು ಆಂಧ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ​ ತಿಳಿಸಿದೆ.

margadarsi case update  no need to hear the applications filed by Andhra  Supreme Court  ಮಾರ್ಗದರ್ಶಿ ಪ್ರಕರಣದ ವರ್ಗಾವಣೆ  ಆಂಧ್ರ ಸರ್ಕಾರ ಸಲ್ಲಿಸಿರುವ ಅರ್ಜಿಗಳ ವಿಚಾರಣೆ  ಸುಪ್ರೀಂ ಮಹತ್ವದ ಆದೇಶ  ತೆಲಂಗಾಣದಿಂದ ಆಂಧ್ರ ಪ್ರದೇಶಕ್ಕೆ ವರ್ಗಾವಣೆ  ತೆಲಂಗಾಣ ಹೈಕೋರ್ಟ್‌ನ ಮಧ್ಯಂತರ ಆದೇಶ  ಸುಪ್ರೀಂ ಕೋರ್ಟ್ ನಿರಾಕರ  ಮಾರ್ಗದರ್ಶಿ ಅಧ್ಯಕ್ಷ ರಾಮೋಜಿ ರಾವ್
ಮಾರ್ಗದರ್ಶಿ ಪ್ರಕರಣದ ವರ್ಗಾವಣೆ
author img

By

Published : Aug 4, 2023, 1:29 PM IST

Updated : Aug 4, 2023, 7:40 PM IST

ನವದೆಹಲಿ: ಮಾರ್ಗದರ್ಶಿ ಚಿಟ್​ ಫಂಡ್​ ಕಂಪನಿ ಪ್ರಕರಣದಲ್ಲಿ ಆಂಧ್ರ ಪ್ರದೇಶ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಮಾರ್ಗದರ್ಶಿ ಅಧ್ಯಕ್ಷ ರಾಮೋಜಿ ರಾವ್ ಮತ್ತು ಎಂಡಿ ಶೈಲಜಾ ಕಿರಣ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಂತೆ ತೆಲಂಗಾಣ ಹೈಕೋರ್ಟ್‌ ಹೊರಡಿಸಿರುವ ಮಧ್ಯಂತರ ಆದೇಶದ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಇದೇ ವೇಳೆ, ತೆಲಂಗಾಣ ಹೈಕೋರ್ಟ್​ ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದೂ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

ಮಾರ್ಗದರ್ಶಿ ಚಿಟ್​ ಫಂಡ್ ಕಂಪನಿ ವಿರುದ್ಧ ಆಂಧ್ರ ಪ್ರದೇಶದ ಸಿಐಡಿ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ಆಲಿಸಲು ತನಗೆ ಅಧಿಕಾರವಿದೆ ಎಂದು ಈ ಹಿಂದೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಮಾರ್ಗದರ್ಶಿ ಅಧ್ಯಕ್ಷ ರಾಮೋಜಿ ರಾವ್ ಮತ್ತು ಎಂಡಿ ಶೈಲಜಾ ಕಿರಣ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಂತೆ ತೆಲಂಗಾಣ ಹೈಕೋರ್ಟ್‌ ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಎರಡು ರಜಾ ಕಾಲದ ಅರ್ಜಿಗಳನ್ನು (SLP) ಸಲ್ಲಿಸಿತ್ತು. ತೆಲಂಗಾಣ ಹೈಕೋರ್ಟ್​ ನ್ಯಾಯ ವ್ಯಾಪ್ತಿಯನ್ನು ಪ್ರಶ್ನಿಸಿ ಅರ್ಜಿಗಳನ್ನೂ ಸಲ್ಲಿಸಲಾಗಿತ್ತು. ಇಂದು ಈ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸುವ ಮೂಲಕ ಎರಡೂ ಅರ್ಜಿಗಳನ್ನು ವಜಾಗೊಳಿಸಿದೆ.

ಇದೇ ಸಂದರ್ಭದಲ್ಲಿ ಪ್ರಕರಣದಲ್ಲಿ ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುವ ಅಗತ್ಯವಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು ತೆಲಂಗಾಣ ಹೈಕೋರ್ಟ್​ನಲ್ಲಿಯೇ ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಿತು.

''ಹೈಕೋರ್ಟ್ ಅರ್ಜಿಯನ್ನು ಅರ್ಹತೆಯ ಆಧಾರದ ಮೇಲೆ ಪರಿಶೀಲಿಸಬೇಕು. ಅದರ ಪ್ರಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾವು ಭಾವಿಸುತ್ತೇವೆ. ಯಾವುದೇ ನಿರ್ದಿಷ್ಟ ಸಂದರ್ಭ ಎದುರಾದರೆ ಅರ್ಜಿದಾರರು (ಆಂಧ್ರಪ್ರದೇಶ ಸರ್ಕಾರ) ಈ ನ್ಯಾಯಾಲಯಕ್ಕೆ ಬರಬಹುದು. ಅಂಥ ಸಮಯದಲ್ಲಿ ಸರ್ಕಾರ ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸುವ ಸ್ವಾತಂತ್ರ್ಯ ಹೊಂದಿರುತ್ತದೆ'' ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಗ್ರಾಹಕರ ನೆಟ್‌ವರ್ಕ್‌ಗೆ ಹಾನಿ ಮಾಡುವ ದುರುದ್ದೇಶದಿಂದ ಆಂಧ್ರದ ಸಿಐಡಿ ತನಿಖೆ: ಮಾರ್ಗದರ್ಶಿ ಸಂಸ್ಥೆಯ ಹೇಳಿಕೆ

ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ತಕ್ಷಣ ನ್ಯಾಯಮೂರ್ತಿ ಮಹೇಶ್ವರಿ, ಈ ವಿಷಯಕ್ಕೆ ಸಂಬಂಧಿಸಿದ ಕೆಲ ಪ್ರಕರಣಗಳಲ್ಲಿ ಇನ್ನೂ ನೋಟಿಸ್‌ಗಳು ಬಂದಿಲ್ಲ. ಆ ಪ್ರಕರಣಗಳ ಬಗ್ಗೆ ನೋಟಿಸ್‌ಗಳು ಬಂದ ನಂತರ ಮುಂದಿನ ವಾದ ಆಲಿಸುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಂಧ್ರ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್, ಪ್ರಕರಣದ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಕಳುಹಿಸಲಾಗುವುದು ಎಂದರು.

ನ್ಯಾ.ಮಹೇಶ್ವರಿ ಮಧ್ಯಪ್ರವೇಶಿಸಿ, ವರ್ಗಾವಣೆ ಅರ್ಜಿ ಬಾಕಿ ಇರುತ್ತದೆ. ಮಧ್ಯಂತರ ಆದೇಶದ ಮೇಲಿನ ಉಳಿದ ಎರಡು ಅರ್ಜಿಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ನ್ಯಾ.ಕೆ.ವಿ.ವಿಶ್ವನಾಥನ್, "ಇದು ಕಾನೂನು ವ್ಯಾಪ್ತಿಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ನೀವು ಸಲ್ಲಿಸಿರುವ ಪ್ರಕರಣಕ್ಕೆ ಅನುಮತಿ ಇದ್ದರೆ ಅರ್ಹತೆಯ ಆಧಾರದ ಮೇಲೆ ನಿಮ್ಮ ವಾದ ಮಂಡಿಸಿ" ಎಂದು ಸೂಚಿಸಿದರು.

ಮುಂದುವರೆದು, "ತೆಲಂಗಾಣ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಹೇಳಲಾಗಿಲ್ಲವೇ?, ಅಲ್ಲಿ ಪ್ರಕರಣವನ್ನು ತಿರಸ್ಕರಿಸಿದರೆ ಹೆಚ್ಚಿನ ಪ್ರಶ್ನೆಗಳು ಉದ್ಭವಿಸುವುದಿಲ್ಲ. ಅರ್ಜಿಯನ್ನು ಅನುಮತಿಸಿದರೆ, ಕಾನೂನು ನ್ಯಾಯವ್ಯಾಪ್ತಿಯಲ್ಲಿ ನಿಮ್ಮ ವಾದಗಳನ್ನು ಮಂಡಿಸಲು ನೀವು ಇಲ್ಲಿಗೆ ಬರಬಹುದು" ಎಂದು ಸ್ಪಷ್ಟಪಡಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮಾರ್ಗದರ್ಶಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, "ಪ್ರಕರಣದ ಕೆಲವು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಈಗಾಗಲೇ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿದೆ" ಎಂದು ನ್ಯಾಯಪೀಠದ ಗಮನ ಸೆಳೆದರು.

ಆಂಧ್ರ ಸರ್ಕಾರದ ಪರವಾಗಿ ಮತ್ತೊಬ್ಬ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ವಾದಿಸಿ, ''ಆಂಧ್ರಪ್ರದೇಶದ ವಿಚಾರಣಾ ನ್ಯಾಯಾಲಯವು ಆರೋಪಗಳನ್ನು ನಿಗದಿಪಡಿಸುತ್ತದೆ. ಮತ್ತೊಂದೆಡೆ, ತೆಲಂಗಾಣ ಹೈಕೋರ್ಟ್ ಎಫ್‌ಐಆರ್‌ಗಳನ್ನು ಪರಿಶೀಲಿಸುತ್ತಿದೆ. ಎಫ್‌ಐಆರ್‌ನಲ್ಲಿ ದಾಖಲಾಗಿರುವ ಪ್ರತಿಯೊಂದು ಆರೋಪವೂ ಆಂಧ್ರಪ್ರದೇಶಕ್ಕೆ ಸಂಬಂಧಿಸಿದೆ. ಅದರಲ್ಲಿ ತೆಲಂಗಾಣ ಹೈಕೋರ್ಟ್ ಹೇಗೆ ಹಸ್ತಕ್ಷೇಪ ಮಾಡುತ್ತದೆ?'' ಎಂದರು. ಇಬ್ಬರೂ ನ್ಯಾಯಮೂರ್ತಿಗಳು ಈ ವಾದವನ್ನು ಒಪ್ಪಲು ನಿರಾಕರಿಸಿದರು.

Last Updated : Aug 4, 2023, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.