ETV Bharat / bharat

ಗೋವಾ ಪ್ರಯಾಣದ ವೇಳೆ ರಸ್ತೆ ಅಪಘಾತ: ನಟಿ, ಬಾಯ್‌ಫ್ರೆಂಡ್‌ ದುರ್ಮರಣ - ರಸ್ತೆ ಅಪಘಾತ ಮರಾಠಿ ನಟಿ ಸಾವು

ರಜೆ ನಿಮಿತ್ಯ ಗೋವಾಕ್ಕೆ ತೆರಳಿದ್ದ ಮರಾಠಿ ನಟಿ ಹಾಗೂ ಆಕೆಯ ಬಾಯ್​ಫ್ರೆಂಡ್​ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ದುರಂತ ನಡೆದಿದೆ.

Marathi actress Ishwari
Marathi actress Ishwari
author img

By

Published : Sep 21, 2021, 5:35 PM IST

Updated : Sep 21, 2021, 5:44 PM IST

ಪಣಜಿ(ಗೋವಾ): ಮರಾಠಿ ನಟಿ ಹಾಗೂ ಆಕೆಯ ಬಾಯ್​ಫ್ರೆಂಡ್​ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಗೋವಾದ ಅರ್ಪೋರಾ ಗ್ರಾಮದ ಬಳಿ ಘಟನೆ ಸಂಭವಿಸಿದೆ.

ಬಾಗಾ-ಕ್ಯಾಲಂಗೂಟ್​ ಮಾರ್ಗದ ಸೇತುವೆ ಬಳಿ ಕಾರು ಕಂದಕಕ್ಕೆ ಉರುಳಿಬಿದ್ದಿದೆ. ಪರಿಣಾಮ ನಟಿ ಹಾಗೂ ಆಕೆಯ ಸ್ನೇಹಿತ ಸಾವನ್ನಪ್ಪಿದ್ದು ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಈಗಾಗಲೇ ಇಬ್ಬರ ಮೃತದೇಹವನ್ನು ಹೊರತೆಗೆಯಲಾಗಿದೆ. ಮೃತ ನಟಿಯನ್ನು ಈಶ್ವರಿ ದೇಶಪಾಂಡೆ (25) ಹಾಗೂ ಆಕೆಯ ಸ್ನೇಹಿತ ಶುಭಂ(28) ಎಂದು ಗುರುತಿಸಲಾಗಿದೆ. ನಟಿ ಈಶ್ವರಿ ದೇಶಪಾಂಡೆ ಇತ್ತೀಚೆಗೆ ಹಿಂದಿ ಹಾಗೂ ಮಾರಾಠಿ ಚಿತ್ರವೊಂದರಲ್ಲಿ ನಟಿಸಿದ್ದರು.

ಇದನ್ನೂ ಓದಿ: ದೇವಸ್ಥಾನಕ್ಕೆ ತೆರಳಿದ್ದ ವಿವಾಹಿತೆ ಮೇಲೆ ಗ್ಯಾಂಗ್​ರೇಪ್​, ಕೊಲೆ : ಗಂಡನ ಸಂಬಂಧಿಕರಿಂದಲೇ ಕೃತ್ಯ

ರಜೆಯ ಪ್ರಯುಕ್ತ ಇಬ್ಬರು ಸೆಪ್ಟೆಂಬರ್​​ 15ರಂದು ಗೋವಾಕ್ಕೆ ತೆರಳಿದ್ದರು. ಅರ್ಪೋಲಾ ಹಳ್ಳಿಯ ಕಿರಿದಾದ ರಸ್ತೆಯಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಕಂದಕಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಕಾರು ಒಳಗಡೆಯಿಂದ ಲಾಕ್​ ಆಗಿರುವ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.

ಈಶ್ವರಿ ಹಾಗೂ ಶುಭಂ ಕಳೆದ ಕೆಲ ವರ್ಷಗಳಿಂದ ಪರಿಚಯವಿದ್ದರು. ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಬೇಕಾಗಿತ್ತು. ಇದರ ಮಧ್ಯೆ ಈ ದುರ್ಘಟನೆ ನಡೆದಿದೆ. ಘಟನೆಯಿಂದಾಗಿ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ದೊಡ್ಡ ಆಘಾತವಾಗಿದ್ದು, ಗೋವಾ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ.

Last Updated : Sep 21, 2021, 5:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.