ಕಾಲಹಾಂಡಿ(ಒಡಿಶಾ) : ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಗ್ರಾಮಸ್ಥರೊಬ್ಬರನ್ನು ಮಾವೋವಾದಿಗಳು ಹತ್ಯೆ ಮಾಡಿರುವ ಘಟನೆ ಕಾಲಹಾಂಡಿ ಜಿಲ್ಲೆಯ ಭಾವೈಪಟ್ನಾ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಜುಗಸಾಪಟ್ನ ಗ್ರಾಮ ಪಂಚಾಯತ್‌ನ ತಾಲಾ ಪಂಚಕುಲ್ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಲಾಲಾಬತಿ ಮಾಝಿ ಎಂದು ಗುರುತಿಸಲಾಗಿದೆ. ಮಾಝಿಯನ್ನು ಕೊಂದ ನಂತರ ಈ ಮಾವೋವಾದಿಗಳು ಅದೇ ಪ್ರದೇಶದ ಕೆಲವು ಸ್ಥಳಗಳಲ್ಲಿ "ತಮ್ಮ ವಿರುದ್ಧ ಕೃತ್ಯ ಎಸೆಗುವ ಗ್ರಾಮಸ್ಥರನ್ನು ಕೊಲ್ಲಲಾಗುವುದು" ಎಂದು ಜೀವ ಬೆದರಿಕೆಯ ಪೋಸ್ಟರ್‌ಗಳನ್ನು ಸಹ ಅಂಟಿಸಿದ್ದಾರೆ.
ಆ ಪೋಸ್ಟರ್‌ಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಸಿಪಿಐನ ಬಿಜಿಎನ್ ವಿಭಾಗೀಯ ಸಮಿತಿಯು ಅವುಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 2018ರಲ್ಲಿ ಮಹಿಳೆ ಕೊಂದ ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸರು