ETV Bharat / bharat

ಜಾರ್ಖಂಡ್‌ ಬಿಜೆಪಿ ಮಾಜಿ ಶಾಸಕನ ಮೇಲೆ ನಕ್ಸಲ್‌ ದಾಳಿ: ಇಬ್ಬರು ಅಂಗರಕ್ಷಕರ ಹತ್ಯೆ - Maoists attack on MLA Gurcharan Nayak

ಬಿಜೆಪಿಯ ಮಾಜಿ ಶಾಸಕನನ್ನು ಗುರಿಯಾಗಿಸಿಕೊಂಡು ಮಾವೋವಾದಿಗಳು ದಾಳಿ ನಡೆಸಿದ್ದು, ಈ ವೇಳೆ ಅವರ ಇಬ್ಬರು ಅಂಗರಕ್ಷಕರು ಹತ್ಯೆ ಮಾಡಿದ್ದಾರೆ.

former MLA Gurcharan Nayak
former MLA Gurcharan Nayak
author img

By

Published : Jan 4, 2022, 8:35 PM IST

ರಾಂಚಿ(ಜಾರ್ಖಂಡ್​): ಭಾರತೀಯ ಜನತಾ ಪಾರ್ಟಿಯ ಮಾಜಿ ಶಾಸಕ ಗುರುಚರಣ್​ ನಾಯಕ ಮೇಲೆ ನಕ್ಸಲರು ದಾಳಿ ನಡೆಸಿದ್ದು, ಈ ವೇಳೆ ಅವರ ಇಬ್ಬರು ಅಂಗರಕ್ಷಕರನ್ನು ಹತ್ಯೆಗೈದಿದ್ದಾರೆ.

ಗೋಯೆಲ್ಕೆರಾದ ತುನಿಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಫುಟ್ಬಾಲ್​ ಸ್ಪರ್ಧೆಯಲ್ಲಿ ಗುರುಚರಣ್​ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ದಾಳಿ ನಡೆಸಲಾಗಿದ್ದು, ಮಾಜಿ ಶಾಸಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: SA vs IND 2nd Test: ವಾಂಡರರ್ಸ್‌ನಲ್ಲಿ ಹರಿಣಗಳ ಮೇಲೆ 'ಶಾರ್ದೂಲ' ದಾಳಿ; 7 ವಿಕೆಟ್‌ ಪಡೆದು ಮಿಂಚಿದ ಭಾರತೀಯ ವೇಗಿ

ಅಂಗರಕ್ಷಕರಾದ ಶಂಕರ್​ ನಾಯಕ್ ಮತ್ತು ಹೆಂಬ್ರಾಮ್ ಠಾಕೂರ್ ಸಾವಿಗೀಡಾಗಿದ್ದು, ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಮಾವೋಗಳು ಲೂಟಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಸೇನಾ ಪಡೆಗಳನ್ನು ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.