ETV Bharat / bharat

ಪೊಲೀಸ್ ಮಾಹಿತಿದಾರ ಎಂದು ಶಂಕಿಸಿ ಬುಡಕಟ್ಟು ಯುವಕನನ್ನ ಕೊಂದ ಮಾವೋವಾದಿಗಳು

ಒಂದೆರಡು ದಿನದ ಹಿಂದೆ, ಕಂದಮಾಲ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಮಾವೋವಾದಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳು ಕಂಡು ಬಂದಿವೆ. ಬ್ಯಾನರ್‌ಗಳಲ್ಲಿ ಮಾವೋವಾದಿಗಳು ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ.

ಮಾವೋವಾದಿಗಳು
ಮಾವೋವಾದಿಗಳು
author img

By

Published : Feb 15, 2022, 7:09 PM IST

ಒಡಿಶಾ: ಕಂಧಮಾಲ್ ಜಿಲ್ಲೆಯಲ್ಲಿ ಬುಡಕಟ್ಟು ಯುವಕನೊಬ್ಬನನ್ನು ಪೊಲೀಸ್ ಮಾಹಿತಿದಾರ ಎಂದು ಶಂಕಿಸಿ ಮಾವೋವಾದಿಗಳು ಹತ್ಯೆ ಮಾಡಿದ್ದಾರೆ. ಮೃತರನ್ನು ಕಪಿಲ್ ಮಾಝಿ (32) ಎಂದು ಗುರುತಿಸಲಾಗಿದೆ.

ಕಂಧಮಾಲ್ ಜಿಲ್ಲೆಯ ತುಮುಡಿಬಂದ್ ಬ್ಲಾಕ್‌ನ ಭಂಡರಂಗಿ ಪಂಚಾಯತ್ ವ್ಯಾಪ್ತಿಯ ಗುಮಿ ಗ್ರಾಮದಲ್ಲಿ ಶಸ್ತ್ರಸಜ್ಜಿತ ಮಾವೋವಾದಿಗಳು ಕಪಿಲ್​​​ನನ್ನು ಕೊಂದಿದ್ದಾರೆ. ಪಂಚಾಯಿತಿ ಚುನಾವಣೆಗೂ ಮುನ್ನವೇ ಇಂತಹ ಹಿಂಸಾಚಾರ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ.

ಒಂದೆರಡು ದಿನದ ಹಿಂದೆ, ಕಂದಮಾಲ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಮಾವೋವಾದಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳು ಕಂಡು ಬಂದಿವೆ. ಬ್ಯಾನರ್‌ಗಳಲ್ಲಿ ಮಾವೋವಾದಿಗಳು ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ.

ಕೆಲ ದಿನಗಳ ಹಿಂದೆ ಭಂಡರಂಗಿಯಲ್ಲಿ ಯುವಕನನ್ನ ಉಗ್ರರು ಬರ್ಬರವಾಗಿ ಕೊಂದಿದ್ದರು. ಇನ್ನೂ ಜಿಲ್ಲೆಯ ಫಿರಿಂಗಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಕಿಯಾಮುಂಡಾ ಗ್ರಾಮದಲ್ಲಿ ರಸ್ತೆ ನಿರ್ಮಿಸಲು ಗುತ್ತಿಗೆದಾರರು ಬಳಸುತ್ತಿದ್ದ ಜೆಸಿಬಿ ಯಂತ್ರ ಮತ್ತು ಟ್ರ್ಯಾಕ್ಟರ್‌ಗಳನ್ನು ಸುಟ್ಟು ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.