ETV Bharat / bharat

ಭೂಕುಸಿತದ ಭಯಾನಕ ವಿಡಿಯೋ: ಪರ್ವತದಿಂದ ಉರುಳಿದ ಬಂಡೆಗಳಿಗೆ 9 ಪ್ರವಾಸಿಗರು ಬಲಿ - ಸಾಂಗ್ಲಾ ಕಣಿವೆಯಲ್ಲಿ ಭೂಕುಸಿತ

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಬಟ್ಸೆರಿಯಲ್ಲಿ ದೊಡ್ಡ ದೊಡ್ಡ ಬಂಡೆಗಲ್ಲುಗಳು ಪರ್ವತದಿಂದ ಉರುಳಿಬಿದ್ದ ಪರಿಣಾಮ ಒಂಬತ್ತು ಜನ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಪರ್ವತದಿಂದ ಉರುಳಿಬಿದ್ದ ಬಂಡೆಗೆ 9 ಜನ ಬಲಿ
ಪರ್ವತದಿಂದ ಉರುಳಿಬಿದ್ದ ಬಂಡೆಗೆ 9 ಜನ ಬಲಿ
author img

By

Published : Jul 25, 2021, 5:14 PM IST

Updated : Jul 25, 2021, 7:53 PM IST

ಕಿನ್ನೌರ್: ಹಿಮಾಚಲ ಪ್ರದೇಶದ ಸಾಂಗ್ಲಾ ಕಣಿವೆಯಲ್ಲಿ ಇಂದು ಸಾಂಗ್ಲಾ-ಚಿಟ್ಕುಲ್ ರಸ್ತೆಯ ಬಟ್ಸೆರಿ ಬಳಿ ಭೂಕುಸಿತ ಸಂಭವಿಸಿದೆ. ದುರ್ಘಟನೆಯಲ್ಲಿ 9 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.

ಭೂಕುಸಿತದ ಭಯಾನಕ ವಿಡಿಯೋ

ಭೂ ಕುಸಿತದ ಭಯಾನಕ ವಿಡಿಯೋದಲ್ಲಿ, ದೊಡ್ಡ ದೊಡ್ಡ ಬಂಡೆಗಲ್ಲುಗಳು ಪರ್ವತದಿಂದ ಉರುಳಿ ಬರುತ್ತಿರುವುದನ್ನು ಕಾಣಬಹುದು. ಬಂಡೆಯೊಂದು ಉರುಳಿಬಂದು ಸೇತುವೆಯ ಮೇಲೆ ಬಿದ್ದ ಪರಿಣಾಮ ಸೇತುವೆಯ ಒಂದು ಭಾಗ ಸಂಪೂರ್ಣ ಧ್ವಂಸಗೊಂಡಿದೆ.

ಕಿನ್ನೌರ್ ಜಿಲ್ಲೆಯ ಬಟ್ಸೆರಿಯಲ್ಲಿ ಬೆಟ್ಟದಿಂದ ಬಂಡೆಗಲ್ಲುಗಳು ಉರುಳಿ ಬಿದ್ದಿದ್ದು, ಬಟ್ಸೆರಿ ಗ್ರಾಮವನ್ನು ಸಂಪರ್ಕಿಸುವ ಸೇತುವೆ ಹಾನಿಗೊಳಗಾಗಿದೆ. ಇದಲ್ಲದೆ ದೊಡ್ಡ ವಾಹನಕ್ಕೂ ಹಾನಿಯಾಗಿದೆ.

ಸಾಂಗ್ಲಾ ಪೊಲೀಸ್ ಠಾಣೆಯ ಪ್ರಕಾರ, ಬಟ್ಸೆರಿಯ ಬೆಟ್ಟಗಳಿಂದ ಬಂಡೆಗಳು ಉರುಳಿ ಬಿದ್ದವು. ಈ ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ವೈದ್ಯರ ತಂಡ ಸ್ಥಳದಲ್ಲಿಯೇ ಬೀಡು ಬಿಟ್ಟಿದೆ.

9 ಪ್ರವಾಸಿಗರು ಬಲಿ
9 ಪ್ರವಾಸಿಗರು ಬಲಿ, ಇಬ್ಬರಿಗೆ ಗಾಯ

11 ಜನರಿದ್ದ ಟೆಂಪೊ ಟ್ರಾವೆಲರ್​ ಮೇಲೆ ಬೃಹತ್ ಬಂಡೆಗಳು ಬಿದ್ದಿವೆ. ಅವರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿಯ ಘಟನೆಯಲ್ಲಿ, ಕಿನ್ನೌರ್ ಜಿಲ್ಲೆಯ ಮತ್ತೊಂದು ಭೂಕುಸಿತದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.

ಭಾರೀ ಮಳೆಯ ಕಾರಣದಿಂದ ಹವಾಮಾನ ಇಲಾಖೆ ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಎಚ್ಚರಿಕೆ ನೀಡಿತ್ತು. ಕಳೆದ ಕೆಲವು ವರ್ಷಗಳಲ್ಲಿ, ಕಣಿವೆ ರಾಜ್ಯದಲ್ಲಿ ಭೂಕುಸಿತ ಸಾಮಾನ್ಯವೆಂಬಂತೆ ನಡೆಯುತ್ತಿದೆ.

ಮೃತರ ಕುಟುಂಬಕ್ಕೆ ಕೇಂದ್ರದ ಪರಿಹಾರ:

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಟ್ವಿಟರ್​ ಖಾತೆಯಲ್ಲಿ ದುರ್ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಮೃತರಿಗೆ ಸಂತಾಪ ಸೂಚಿಸಿದ್ದಾರೆ.

  • किन्नौर, हिमाचल प्रदेश में हुए भूस्खलन हादसे में कई लोगों की मृत्यु के समाचार से बहुत दुख हुआ। शोक संतप्त परिवारों के प्रति मैं गहरी संवेदना व्यक्त करता हूं और घायल हुए लोगों के शीघ्र स्वस्थ होने की कामना करता हूँ।

    — President of India (@rashtrapatibhvn) July 25, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಮಹಾಬಲೀಪುರಂನಲ್ಲಿ ಭೀಕರ ಅಪಘಾತ: ನಟಿ ಯಶಿಕಾ ಆನಂದ್‌ ಆರೋಗ್ಯ ಸ್ಥಿತಿ ಗಂಭೀರ

Last Updated : Jul 25, 2021, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.