ETV Bharat / bharat

ಗನ್​ ತೋರಿಸಿ ಮಹಿಳಾ ಕಾನ್ಸ್​ಟೇಬಲ್​​​ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ : ಪ್ರಕರಣ ದಾಖಲು - ಅತ್ಯಾಚಾರ

ಮಹಿಳಾ ಕಾನ್ಸ್​ಸ್ಟೇಬಲ್​ ಮೇಲೆ ಸಹೋದ್ಯೋಗಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

many-times-on-the-gun-point-in-pune
ಗನ್​ ತೋರಿಸಿ ಮಹಿಳಾ ಕಾನ್ಸ್​ಸ್ಟೇಬಲ್​ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ : ಪ್ರಕರಣ ದಾಖಲು
author img

By ETV Bharat Karnataka Team

Published : Sep 5, 2023, 8:22 PM IST

ಪುಣೆ (ಮಹಾರಾಷ್ಟ್ರ) : ಮಹಿಳಾ ಪೊಲೀಸ್​ ಪೇದೆ ಮೇಲೆ ಸಹೋದ್ಯೋಗಿಯೇ ಹಲವು ಬಾರಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಲ್ಲಿನ ಸ್ವರ್ಗೇಟ್​ ಪೊಲೀಸ್​ ಕಾಲೋನಿಯನ್ನು ಗನ್​ನಿಂದ ಬೆದರಿಸಿ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​​​​​ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಮಹಿಳಾ ಪೊಲೀಸ್ ಪೇದೆಯು ಆರೋಪಿ ವಿರುದ್ಧ ಖಡಕ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ದೀಪಕ್​ ಸೀತಾರಾಮ್​ ಮೋಘೆ ಅವರನ್ನು ಪುಣೆಯ ಮಾರ್ಕೆಟ್​ ಯಾರ್ಡ್​ ಪೊಲೀಸ್​ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಜೊತೆಗೆ ಸಂತ್ರಸ್ತ ಮಹಿಳಾ ಪೊಲೀಸ್​ ಪೇದೆಯನ್ನೂ ಇಲ್ಲಿನ ಠಾಣೆಗೆ ನೇಮಿಸಲಾಗಿತ್ತು. ಈ ಇಬ್ಬರು ಸ್ವರ್ಗೇಟ್​ ಪೊಲೀಸ್​ ಕಾಲೋನಿಯಲ್ಲಿ ವಾಸವಿದ್ದರು. ಈ ವೇಳೆ ಆರೋಪಿ ಮಹಿಳಾ ಪೊಲೀಸ್​ ಪೇದೆ ಮನೆಗೆ ನುಗ್ಗಿ ಪಿಸ್ತೂಲ್​ ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂತ್ರಸ್ತ ಮಹಿಳಾ ಪೊಲೀಸ್​ ದೂರಿನ ಪ್ರಕಾರ, ಆರೋಪಿ ದೀಪಕ್ ಸೀತಾರಾಮ್​ ಮೋಘೆ ಮಾರ್ಕೆಟ್ ಯಾರ್ಡ್​ ಪೊಲೀಸ್​ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೀಪಕ್​ ಮೋಘೆ ಕಳೆದ 2020ರಿಂದ ಆಗಸ್ಟ್​ 1, 2023ರವರೆಗೆ ಹಲವು ಬಾರಿ ಪುಣೆಯ ಪೊಲೀಸ್​ ಕಾಲೋನಿ ಮತ್ತು ಖಡಕ್​ವಾಸ್ಲಾದ ಲಾಡ್ಜ್​ವೊಂದರಲ್ಲಿ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.

ಕಳೆದ ಲಾಕ್​ ಡೌನ್​ ಸಂದರ್ಭದಲ್ಲಿ ಆರೋಪಿ ದೀಪಕ್​ ಮಹಿಳೆ ಪೇದೆಯನ್ನು ಪರಿಚಯಿಸಿಕೊಂಡಿದ್ದನು. ಬಳಿಕ ಆರೋಪಿ ಮಹಿಳಾ ಪೇದೆ ಮನೆಗೆ ಊಟಕ್ಕೆ ಬರುತ್ತಿದ್ದನು. ಈ ನಡುವೆ ಆರೋಪಿ ಮಹಿಳಾ ಪೇದೆಗೆ ಮತ್ತು ಬರುವ ಔಷಧ ನೀಡಿದ್ದಾನೆ. ಇದರಿಂದಾಗಿ ಅವರು ಪ್ರಜ್ಞೆ ತಪ್ಪಿದ್ದು, ಬಳಿಕ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ತನ್ನ ಹೇಯ ಕೃತ್ಯವನ್ನು ಚಿತ್ರೀಕರಿಸಿದ್ದು, ಈ ಬಗ್ಗೆ ಬಾಯಿ ಬಿಟ್ಟರೆ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆ ಬಳಿಕವೂ ಆರೋಪಿ ನಿರಂತರ ಮಹಿಳಾ ಪೊಲೀಸ್​ ಪೇದೆಗೆ ಗನ್​ನಿಂದ ಬೆದರಿಕೆ ಹಾಕಿ ದೌರ್ಜನ್ಯ ನಡೆಸಿರುವುದಾಗಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿ ದೀಪಕ್​ ಮೋಘೆ ಸಂತ್ರಸ್ತೆಯ ಪತಿಗೂ ಕೊಲೆ ಬೆದರಿಕೆ ಹಾಕಿದ್ದಾನೆ.

ಚಿನ್ನಾಭರಣ, ಲ್ಯಾಪ್​ಟಾಪ್​, ಮೊಬೈಲ್​ನೊಂದಿಗೆ ಪರಾರಿ : ಆರೋಪಿ ದೀಪಕ್​ ಮೋಘೆ ಮಹಿಳಾ ಪೇದೆಯ ಮನೆಯಲ್ಲಿದ್ದ ಚಿನ್ನಾಭರಣ, ಲ್ಯಾಪ್​ಟಾಪ್​, ಮೊಬೈಲ್​ ಫೋನ್​ ಬಲವಂತವಾಗಿ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಮಹಿಳಾ ಪೇದೆ ಒತ್ತಾಯಿಸಿದ್ದಾರೆ. ಕಳೆದ ದಿನ ಪುಣೆಯಲ್ಲಿ ಮಹಿಳಾ ಪೊಲೀಸ್​ ಪೇದೆ ಮೇಲೆ ಪೊಲೀಸ್​ ಅಧಿಕಾರಿಯೊಬ್ಬರು ದೌರ್ಜನ್ಯ ಎಸಗಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ಪೊಲೀಸ್​ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.