ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ನಡೆಸಿದ ಮನ್ ಕಿ ಬಾತ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್ನಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ಗ್ರಾಫ್ ಹಂಚಿಕೊಂಡಿದ್ದು, ಎಲ್ಲರಿಗೂ ಲಸಿಕೆ ನೀಡಿ ಎಂದು ಒತ್ತಾಯಿಸಿದ್ದಾರೆ.
ಭಾರತದಲ್ಲಿ ಲಸಿಕೆ ಅಭಿಯಾನ ಆರಂಭವಾದ 2021 ಜೂನ್ 25ರಿಂದ ಜೂನ್ 26, 2021 ರವರೆಗಿನ ಗ್ರಾಫ್ ಹಂಚಿಕೊಂಡಿದ್ದು, ವ್ಯಾಕ್ಸಿನೇಷನ್ ಯಾವ ರೀತಿ ಏರಿಳಿತಗಳನ್ನು ಕಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಎಲ್ಲಾ ಭಾರತೀಯರಿಗೆ ವ್ಯಾಕ್ಸಿನೇಷನ್ ಮಾಡಿ, ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಿದ ನಂತರವೂ ಮನ್ ಕಿ ಬಾತ್ ಮಾಡಬಹುದು ಎಂದು ಹಿಂದಿ ಭಾಷೆಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
-
बस हर देशवासी तक वैक्सीन पहुँचा दो,
— Rahul Gandhi (@RahulGandhi) June 27, 2021 " class="align-text-top noRightClick twitterSection" data="
फिर चाहे मन की बात भी सुना दो!#VaccinateIndia pic.twitter.com/IIEgzyBK61
">बस हर देशवासी तक वैक्सीन पहुँचा दो,
— Rahul Gandhi (@RahulGandhi) June 27, 2021
फिर चाहे मन की बात भी सुना दो!#VaccinateIndia pic.twitter.com/IIEgzyBK61बस हर देशवासी तक वैक्सीन पहुँचा दो,
— Rahul Gandhi (@RahulGandhi) June 27, 2021
फिर चाहे मन की बात भी सुना दो!#VaccinateIndia pic.twitter.com/IIEgzyBK61
ಇದನ್ನೂ ಓದಿ: ಲಿಂಗಾಯತರಲ್ಲಿ ಸಿಎಂ ಸ್ಥಾನಕ್ಕೆ ಅನೇಕರು ಅರ್ಹರಿದ್ದಾರೆ: ಎಂ.ಬಿ. ಪಾಟೀಲ್
ಜೂನ್ 24ರಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ ಉದ್ಯೋಗ ನೀಡುವವರೇ ನಿರುದ್ಯೋಗಿಗಳಾಗಿದ್ದಾರೆ. ಆದರೆ, ಪ್ರಧಾನಿ ಮೋದಿ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ. ಭಾರತದ ಭವಿಷ್ಯದೊಂದಿಗೆ ಮೋದಿ ಆಟವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.