ETV Bharat / bharat

ಮನ್​ ಕಿ ಬಾತ್​ ದೇಶದ ಕೋಟ್ಯಂತರ ಜನರ ಧ್ವನಿ: ಪ್ರಧಾನಿ ಮೋದಿ

author img

By

Published : Apr 30, 2023, 1:06 PM IST

100 ನೇ ಸಂಚಿಕೆಯ ಮನ್​ ಕಿ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮ ಶತಸಂಚಿಕೆ ಪೂರೈಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ರೇಡಿಯೋ ಕಾರ್ಯಕ್ರಮವಾದ ಮನ್​ ಕಿ ಬಾತ್​ ಇದು ನನ್ನ ಮಾತಲ್ಲ, ಕೋಟ್ಯಂತರ ಭಾರತೀಯರ ಧ್ವನಿ. ಇದೊಂದು ಒಳ್ಳೆಯತನ ಮತ್ತು ಸಕಾರಾತ್ಮಕತೆಯ ಹಬ್ಬ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್​ ಕಿ ಬಾತ್​ನ 100 ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ 'ಮನ್ ಕಿ ಬಾತ್' 100 ನೇ ಸಂಚಿಕೆಯಾಗಿದೆ. ಈ ರೇಡಿಯೋ ಕಾರ್ಯಕ್ರಮ ಕೋಟ್ಯಂತರ ಭಾರತೀಯರ "ಮನದಾಳದ ಮಾತಾಗಿದೆ". ಇದು ಅವರ ಭಾವನೆಗಳ ಅಭಿವ್ಯಕ್ತಿಗೆ ವೇದಿಕೆಯಾಗಿದೆ ಎಂದು ಹೇಳಿದರು.

ರೇಡಿಯೋ ಭಾಷಣಕ್ಕಾಗಿ ಜನರಿಂದ ಸಾವಿರಾರು ಪತ್ರಗಳು ಮತ್ತು ಸಂದೇಶಗಳನ್ನು ಸ್ವೀಕರಿಸಿದ್ದೇನೆ. ಅವುಗಳನ್ನು ಓದುವಾಗ ಭಾವನೆಗಳು ಉಕ್ಕಿ ಬರುತ್ತವೆ. ಅಕ್ಟೋಬರ್ 3, 2014 ರಂದು ಪ್ರಾರಂಭವಾದ ರೇಡಿಯೋ ಮಾಸಿಕ ಕಾರ್ಯಕ್ರಮ ಶತಕ ಬಾರಿಸುತ್ತಿರುವುದಕ್ಕೆ ನಾಡಿನ ಜನತೆಯನ್ನು ಅಭಿನಂದಿಸುವುದಾಗಿ ಹೇಳಿದರು.

"ಮನ್ ಕಿ ಬಾತ್​​ನ 100ನೇ ಸಂಚಿಕೆಗೆ ಸಾವಿರಾರು ಪತ್ರಗಳು, ಲಕ್ಷಗಟ್ಟಲೆ ಸಂದೇಶಗಳು ಬಂದಿವೆ. ಅವುಗಳಲ್ಲಿ ಸಾಧ್ಯವಾದಷ್ಟು ಓದಲು ಪ್ರಯತ್ನಿಸಿದ್ದೇನೆ. ಈ ವಿಶೇಷ ಸಂಚಿಕೆಯಂದು ಹಲವರು ನನ್ನನ್ನು ಅಭಿನಂದಿಸಿದ್ದೀರಿ. ಆದರೆ, ಎಲ್ಲಾ ಶ್ರೋತೃಗಳು, ದೇಶವಾಸಿಗಳು ಅಭಿನಂದನೆಗೆ ಅರ್ಹರು ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: 'ಮಗುವನ್ನು ಹೊಂದುವ ಆಸೆಯಿತ್ತು'.. ಮದುವೆ, ಮಕ್ಕಳ ಬಗ್ಗೆ ಮಾತನಾಡಿದ ಬಾಲಿವುಡ್​​ ಬ್ಯಾಚುಲರ್​​ ಸಲ್ಲು

"ಮನ್ ಕಿ ಬಾತ್ ಕಾರ್ಯಕ್ರಮವು ನಾಗರಿಕರ ವ್ಯಕ್ತಿತ್ವವಾಗಿದೆ. ಇಲ್ಲಿ ನಾವು ಸಕಾರಾತ್ಮಕತೆ ಮತ್ತು ಜನರ ಭಾಗವಹಿಸುವಿಕೆಯನ್ನು ಆಚರಿಸುತ್ತೇವೆ. ಕಾರ್ಯಕ್ರಮವು ಇತರರ ಸಾಧನೆಗಳನ್ನು ಆಚರಿಸುವ ಮಾರ್ಗವಾಗಿದೆ. ಇತರರಿಂದ ಕಲಿಯುವ ಸಂದರ್ಭವಾಗಿದೆ ಎಂದು ಇದೇ ವೇಳೆ ತಿಳಿಸಿದರು.

ದೇಶಾದ್ಯಂತ ಪಸರಿಸಿದ ಧ್ವನಿ: ಪ್ರಧಾನಿ ಮೋದಿ ಅವರ ಮನ್​ ಕಿ ಬಾತ್​ ಕಾರ್ಯಕ್ರಮದ 100 ನೇ ಸಂಚಿಕೆಯನ್ನು ದೇಶಾದ್ಯಂತ ಪಸರಿಸಲಾಯಿತು. ಕಾರ್ಯಕರ್ತರು ಮತ್ತು ಜನ ಸಾಮಾನ್ಯರಿಗೆ ಪ್ರಧಾನಿ ಭಾಷಣವನ್ನು ಕೇಳಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಅವರು ಕೊಪ್ಪಳದಲ್ಲಿ ಆಲಿಸಿದರೆ, ಉತ್ತರಾಖಂಡ ಸಿಎಂ ಪುಷ್ಕರ್​ ಸಿಂಗ್​ ಧಾಮಿ ನೈನಿತಾಲ್​ನಲ್ಲಿ ಭಾಷಣ ಕೇಳಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ದಾವಣಗೆರೆಯಲ್ಲಿ ಪಿಎಂ ಮಾತು ಕೇಳಿಸಿಕೊಂಡರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸೇರಿದಂತೆ ಮತ್ತಿತರರು ಮಹಾರಾಷ್ಟ್ರದ ಮುಂಬೈನಲ್ಲಿ ಮನ್​ ಕಿ ಬಾತ್​ನ 100 ನೇ ಸಂಚಿಕೆಯನ್ನು ಆಲಿಸಿದರು.

22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳಲ್ಲಿ ಮನ್ ಕಿ ಬಾತ್ ಪ್ರಸಾರವಾಗುತ್ತದೆ. ಇದಲ್ಲದೇ, ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ದರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿಯೂ ಪ್ರಸಾರವಾಗುತ್ತದೆ. ಆಕಾಶವಾಣಿಯ 500ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳಲ್ಲಿ ಮನ್ ಕಿ ಬಾತ್ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: ಮನ್​ ಕಿ ಬಾತ್​ಗೆ 100 ರ ಸಂಭ್ರಮ: ವಿಶ್ವಸಂಸ್ಥೆಯಲ್ಲಿಂದು ಮನದಾಳದ ಮಾತು ಪ್ರಸಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.