ನವದೆಹಲಿ: ಮುಂದಿನ ವರ್ಷ ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಅಕಾಲಿ ದಳ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಂಡಿದ್ದಾರೆ. ಇಂದು ಬೆಳಗ್ಗೆ ಅಷ್ಟೇ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದರು.
-
Shiromani Akali Dal leader and Delhi Sikh Gurdwara Management Committee president Manjinder Singh Sirsa joins BJP in the presence of Union Ministers Dharmendra Pradhan and Gajendra Singh Shekhawat. pic.twitter.com/56l3mzerwp
— ANI (@ANI) December 1, 2021 " class="align-text-top noRightClick twitterSection" data="
">Shiromani Akali Dal leader and Delhi Sikh Gurdwara Management Committee president Manjinder Singh Sirsa joins BJP in the presence of Union Ministers Dharmendra Pradhan and Gajendra Singh Shekhawat. pic.twitter.com/56l3mzerwp
— ANI (@ANI) December 1, 2021Shiromani Akali Dal leader and Delhi Sikh Gurdwara Management Committee president Manjinder Singh Sirsa joins BJP in the presence of Union Ministers Dharmendra Pradhan and Gajendra Singh Shekhawat. pic.twitter.com/56l3mzerwp
— ANI (@ANI) December 1, 2021
ಪಂಜಾಬ್ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕಾರಣ ಮಂಜಿಂದರ್ ಸಿಂಗ್ ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿದ್ದು, ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆ ಇದೆ.
ಇದನ್ನೂ ಓದಿರಿ: ವಾರ್ನರ್ ಕೈಬಿಟ್ಟ ಹೈದರಾಬಾದ್:'Chapter closed' ಎಂದು ಟ್ವೀಟ್ ಮಾಡಿದ ಸ್ಫೋಟಕ ಬ್ಯಾಟರ್!
ಮಂಜಿಂದರ್ ಸಿಂಗ್ ಸಿರ್ಸಾ ಅವರನ್ನ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪಕ್ಷಕ್ಕೆ ಬರಮಾಡಿಕೊಂಡಿದ್ದು, ಅವರಿಗೆ ಪಕ್ಷದ ಶಾಲ್ ಹೊಂದಿಸಿ ಸ್ವಾಗತಿಸಿದರು. ಈ ವೇಳೆ ಮತ್ತೋರ್ವ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉಪಸ್ಥಿತರಿದ್ದರು.