ನವದೆಹಲಿ: ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣುವ ಮೂಲಕ ಮತ್ತಷ್ಟು ಮುಖಭಂಗಕ್ಕೊಳಗಾಗಿದೆ. ಇದರ ಬೆನ್ನಲ್ಲೇ ಪಕ್ಷದ ಭಿನ್ನಮತೀಯ ನಾಯಕರು ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದರು. ಪಕ್ಷದ ಹಿರಿಯ ಮುಖಂಡರಾದ ಕಪಿಲ್ ಸಿಬಲ್ ಹಾಗೂ ಮನೀಷ್ ಸಿಸೋಡಿಯಾ ಸಂಜೆ ಗುಲಾಂ ನಬಿ ಆಜಾದ್ ಅವರ ನಿವಾಸಕ್ಕೆ ಭೇಟಿ ನೀಡಿದರು.
-
Delhi | Senior Congress leaders Manish Tewari and Kapil Sibal arrive at the residence of party leader Ghulam Nabi Azad. pic.twitter.com/SPEKtAPw4t
— ANI (@ANI) March 11, 2022 " class="align-text-top noRightClick twitterSection" data="
">Delhi | Senior Congress leaders Manish Tewari and Kapil Sibal arrive at the residence of party leader Ghulam Nabi Azad. pic.twitter.com/SPEKtAPw4t
— ANI (@ANI) March 11, 2022Delhi | Senior Congress leaders Manish Tewari and Kapil Sibal arrive at the residence of party leader Ghulam Nabi Azad. pic.twitter.com/SPEKtAPw4t
— ANI (@ANI) March 11, 2022
ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಗೋವಾ, ಉತ್ತರಾಖಂಡದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದ್ದು, ಇದರ ಬೆನ್ನಲ್ಲೇ ಪಕ್ಷದಲ್ಲಿ ಮತ್ತೊಮ್ಮೆ ಭಿನ್ನಮತೀಯ ಸ್ಫೋಟ ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಕಪಿಲ್ ಸಿಬಲ್, ಮನೀಷ್ ಸಿಸೋಡಿಯಾ ಹಾಗೂ ಗುಲಾಂ ನಬಿ ಆಜಾದ್ ಸಭೆ ನಡೆಸಿದರು.
ಪಂಚರಾಜ್ಯ ಸೋಲಿನ ಬಗ್ಗೆ ಈಗಾಗಲೇ ಕೆಲ ಕಾಂಗ್ರೆಸ್ ನಾಯಕರು ಪಕ್ಷದ ನಾಯಕತ್ವದ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಅವಶ್ಯಕತೆ ಇದೆ ಎಂದು ಶಶಿ ತರೂರ್ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಭಿನ್ನಮತೀಯ ನಾಯಕರೆಂದು ಗುರುತಿಸಲ್ಪಟ್ಟಿರುವ ಕಪಿಲ್ ಸಿಬಲ್, ಮನೀಶ್ ತಿವಾರಿ ಹಾಗೂ ಗುಲಾಂ ನಬಿ ಆಜಾದ್ ಮಹತ್ವದ ಸಭೆ ನಡೆಸಿದರು.