ETV Bharat / bharat

ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಮನೀಶ್​ ಸಿಸೋಡಿಯಾ ಭಾವನಾತ್ಮಕ ಪತ್ರ - ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್

ಅರವಿಂದ್​ ಕೇಜ್ರಿವಾಲ್​ಗೆ ರಾಜೀನಾಮೆ ಲೆಟರ್​- ಸಿಎಂಗೆ ಭಾವನಾತ್ಮಕ ಪತ್ರ ಬರೆದ ಸಿಸೋಡಿಯಾ- ಸಿಬಿಐ ಕಸ್ಟಡಿಯಲ್ಲಿರುವ ದೆಹಲಿ ಮಾಜಿ ಡಿಸಿಎಂ ಮನೀಶ್​ ಸಿಸೋಡಿಯಾ

ಮನೀಶ್​ ಸಿಸೋಡಿಯಾ ಭಾವನಾತ್ಮಕ ಪತ್ರ
ಮನೀಶ್​ ಸಿಸೋಡಿಯಾ ಭಾವನಾತ್ಮಕ ಪತ್ರ
author img

By

Published : Mar 1, 2023, 11:56 AM IST

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಸರ್ಕಾರದ ಮಾಜಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ, ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರಿಗೆ ಭಾವನಾತ್ಮಕ ರಾಜೀನಾಮೆ ಪತ್ರ ರವಾನಿಸಿದ್ದಾರೆ. "ವಿರೋಧಿಗಳ ಗುರಿ ನಾನಲ್ಲ, ನೀವು" ಎಂದು ಅದರಲ್ಲಿ ನಮೂದಿಸಿದ್ದಾರೆ.

ಸಿಬಿಐ ಕಸ್ಟಡಿಯಲ್ಲಿರುವ ಸಿಸೋಡಿಯಾ ಆಮ್​ ಆದ್ಮಿ ಪಕ್ಷದ ನಾಯಕನಿಗೆ ಪತ್ರ ಬರೆದಿದ್ದು, ತಮ್ಮ ವಿರುದ್ಧ ಕೇಳಿ ಬಂದಿರುವ ಎಲ್ಲ ಆರೋಪಗಳು ಸುಳ್ಳು ಎಂದು ಬಣ್ಣಿಸಿದ್ದು, 8 ವರ್ಷಗಳ ಕಾಲ ಪ್ರಾಮಾಣಿಕತೆ ಮತ್ತು ಸತ್ಯದಿಂದ ಕೆಲಸ ಮಾಡಿರುವುದೇ ದುರದೃಷ್ಟಕರವಾಗಿದೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ತನಿಖಾ ಸಂಸ್ಥೆಗಳು ನನ್ನ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡಿವೆ ಎಂದು ಹೇಳಿದ್ದಾರೆ.

ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು, ಆರೋಪಗಳೆಲ್ಲ ಆಧಾರ ರಹಿತ ಮತ್ತು ಸುಳ್ಳು ಎಂಬುದು ಆ ದೇವರಿಗೆ ಮಾತ್ರ ಗೊತ್ತು. ನನ್ನ ಮೇಲಿನ ಆರೋಪಗಳು ವಾಸ್ತವವಾಗಿ ಹೇಡಿಗಳ ಮತ್ತು ದುರ್ಬಲರ ಪಿತೂರಿಯ ಸಂಕೇತವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಗುರಿ ನಾನಲ್ಲ, ನೀವು: ಪತ್ರದಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಬಗ್ಗೆ ಬರೆದಿರುವ ಸಿಸೋಡಿಯಾ, ನಮ್ಮ ವಿರೋಧಿಗಳ ಮುಖ್ಯ ಗುರಿ ನಾನಲ್ಲ, ನೀವೇ ಆಗಿದ್ದೀರಿ. ನಿಮ್ಮ ಪ್ರಾಮಾಣಿಕ ರಾಜಕಾರಣ ಅವರ ನಿದ್ದೆಗೆಡಿಸಿದೆ. ಅವರೆಲ್ಲರೂ ನಿಮಗೆ ಹೆದರುತ್ತಾರೆ. ದೆಹಲಿ ಮಾತ್ರವಲ್ಲದೆ ದೇಶವೇ ಕೇಜ್ರಿವಾಲ್ ಅವರನ್ನು ದೂರದೃಷ್ಟಿಯುಳ್ಳ ನಾಯಕರನ್ನಾಗಿ ಕಾಣುತ್ತಿದ್ದಾರೆ. ಬಡತನ, ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಮತ್ತು ಭ್ರಷ್ಟಾಚಾರದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶಕ್ಕೆ ನೀವೇ ಆಶಾಕಿರಣ ಎಂದೆಲ್ಲಾ ಬಣ್ಣಿಸಿ ಬರೆದಿದ್ದಾರೆ.

ಜಾಮೀನು ನಿರಾಕರಿಸಿದ ಸುಪ್ರೀಂ: ಫೆ.26 ರಂದು ಸಿಬಿಐ ಬಂಧನಕ್ಕೆ ಒಳಗಾಗಿರುವ ಮನೀಶ್​​ ಸಿಸೋಡಿಯಾ, ಸದ್ಯ ಕಸ್ಟಡಿಯಲ್ಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಸಿಬಿಐ ಮಾಡಿದ ಮನವಿಯನ್ನು ಪುರಸ್ಕರಿಸಿದ ಸಿಬಿಐ ವಿಶೇಷ ಕೋರ್ಟ್​ 5 ದಿನಗಳ ಕಾಲ ಸಿಸೋಡಿಯಾರನ್ನು ಕಸ್ಟಡಿಗೆ ನೀಡಿದೆ. ಬಂಧನ ಖಂಡಿಸಿ ಆಪ್​ ಕಾರ್ಯಕರ್ತರು ದೆಹಲಿ, ಪಂಜಾಬ್​ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದೇ ವೇಳೆ ತಮ್ಮ ಬಂಧನವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಸಿಸೋಡಿಯಾ ಅರ್ಜಿ ಸಲ್ಲಿಸಿದ್ದು, ಕೋರ್ಟ್​ ಜಾಮೀನು ನೀಡಲು ನಿರಾಕರಿಸಿದೆ. ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದೆ. ಹಗರಣದಲ್ಲಿ ಹೆಸರು ಕೇಳಿಬಂದಿರುವ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಕೇಜ್ರಿವಾಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಈಗ ಅವರ ರಾಜೀನಾಮೆಯನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಕಳುಹಿಸಲಾಗುವುದು ಎಂದು ತಿಳಿದು ಬಂದಿದೆ.

ಓದಿ: ಕೇಜ್ರಿವಾಲ್ ಸಂಪುಟಕ್ಕೆ ಡಿಸಿಎಂ ಸಿಸೋಡಿಯಾ, ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.