ETV Bharat / bharat

ಮಣಿಪುರ ಹಿಂಸಾಚಾರ: ಪರಿಸ್ಥಿತಿ ನಿಯಂತ್ರಣದಲ್ಲಿದೆ- ಭಾರತೀಯ ಸೇನೆ

ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರಲಾಗುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

manipur violence
ಮಣಿಪುರ ಹಿಂಸಾಚಾರ
author img

By

Published : May 5, 2023, 10:56 AM IST

ಇಂಫಾಲ್ ( ಮಣಿಪುರ) : ಪರಿಶಿಷ್ಟ ಪಂಗಡದ ಮೀಸಲಾತಿ ಸ್ಥಾನಮಾನ ವಿಚಾರವಾಗಿ ಮಣಿಪುರದಲ್ಲಿ ಬುಡಕಟ್ಟು ಮತ್ತು ಬಹುಸಂಖ್ಯಾತ ಮೈಟೀಸ್ ಸಮುದಾಯದ ನಡುವೆ ಉಂಟಾದ ಸಂಘರ್ಷ ಹಿಂಸಾಚಾರಕ್ಕೆ ತಿರುಗಿತ್ತು. ಇದೀಗ ಮೊರೆಹ್ ಮತ್ತು ಕಾಂಗ್‌ಪೋಕ್ಪಿ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಇಂಫಾಲ್ ಮತ್ತು ಚುರಾಚಂದ್‌ಪುರ ಪ್ರದೇಶದಲ್ಲಿಯೂ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸರ್ವ ಪ್ರಯತ್ನ ನಡೆಸಲಾಗುತ್ತಿದೆ. ಚುರಾಚಂದ್​ಪುರ ಸೇರಿದಂತೆ ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ ನಡೆಯುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

"ಮೊರೆಹ್ ಮತ್ತು ಕಾಂಗ್‌ಪೋಕ್ಪಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇಂಫಾಲ್ ಮತ್ತು ಚುರಾಚಂದ್‌ಪುರದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನ ನಡೆಯುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಮಣಿಪುರದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಭಾರತೀಯ ವಾಯುಪಡೆಯು ಅಸ್ಸಾಂನ ಎರಡು ಏರ್‌ಫೀಲ್ಡ್‌ಗಳಿಂದ C17 ಗ್ಲೋಬ್‌ ಮಾಸ್ಟರ್ ಮತ್ತು AN 32 ವಿಮಾನಗಳನ್ನು ಬಳಸಿಕೊಳ್ಳುವ ಮೂಲಕ ನಿರಂತರ ಹಾರಾಟ ಕಾರ್ಯಚರಣೆ ಕೈಗೊಂಡಿದೆ. ಸಂಘರ್ಷ ಪ್ರದೇಶಗಳಿಂದ ಎಲ್ಲ ಸಮುದಾಯಗಳ ನಾಗರಿಕರ ಸ್ಥಳಾಂತರಿಸುವಿಕೆಯು ರಾತ್ರಿಯಿಡೀ ಮುಂದುವರೆಯಿತು ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

  • #Manipur 𝙐𝙥𝙙𝙖𝙩𝙚(1/2)
    Situation in Moreh & Kangpokpi brought under control and stable. All efforts underway to restore normalcy in Imphal & CC'Pur. Precautionary build up of additional troops in Manipur to continue. Additional columns also re-deployed from Nagaland@adgpi

    — SpearCorps.IndianArmy (@Spearcorps) May 4, 2023 " class="align-text-top noRightClick twitterSection" data=" ">

ಮಣಿಪುರದಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅರುಣಾಚಲ ಪ್ರದೇಶ ಸರ್ಕಾರವು ಸಮನ್ವಯ ಸಮಿತಿಯನ್ನು ರಚಿಸಿದೆ ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೆ ಮಣಿಪುರದಲ್ಲಿ ಸೇನೆ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ : ಮಣಿಪುರದಲ್ಲಿ ಭುಗಿಲೆದ್ದ 'ಮೀಸಲಾತಿ' ಹಿಂಸಾಚಾರ: 7,500 ಜನರ ಸ್ಥಳಾಂತರ.. ಸಿಎಂ​ ಜೊತೆ ಶಾ ಮಾತುಕತೆ

ತ್ರಿಪುರಾ ಸರ್ಕಾರವು ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ತೊಂದರೆಗೊಳಗಾದ ನಿವಾಸಿಗಳಿಗೆ ಬೆಂಬಲ ನೀಡಲು ಸಹಾಯವಾಣಿಗಳನ್ನು ತೆರೆದಿದೆ ಎಂದು ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ, ಈಶಾನ್ಯ ಫ್ರಾಂಟಿಯರ್ ರೈಲ್ವೆ ಶನಿವಾರದವರೆಗೆ ಮಣಿಪುರಕ್ಕೆ ಹೋಗುವ ನಾಲ್ಕು ರೈಲುಗಳ ಸಂಚಾರವನ್ನು ನಿಲ್ಲಿಸಿದೆ ಎಂದು ಉತ್ತರ ರೈಲ್ವೆಯ ಸಿಪಿಆರ್​ಒ ಸಬ್ಯಸಾಚಿ ಡಿ. ಮಾಧ್ಯಮಗಳಿಗೆ ತಿಳಿಸಿದ್ದಾರೆ.

  • #Manipur Update
    Situation brought under control through coordinated actions by all stakeholders. IAF undertook continuous sorties from two airfields in Assam employing C17 Globemaster & AN 32 aircrafts. @adgpi @easterncomd

    — SpearCorps.IndianArmy (@Spearcorps) May 5, 2023 " class="align-text-top noRightClick twitterSection" data=" ">

ಘಟನೆಯ ಹಿನ್ನೆಲೆ: ರಾಜ್ಯದ ಮೈಟೀಸ್‌ ಸಮುದಾಯವು ಎಸ್​ಟಿ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದೆ. ಇದು ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗದವರನ್ನು ಕೆರಳಿಸಿದೆ. ಇದನ್ನು ವಿರೋಧಿಸಿ ಬುಧವಾರ (ಮೇ 3 ರಂದು ) ಅಖಿಲ ಬುಡಕಟ್ಟು ವಿದ್ಯಾರ್ಥಿ ಸಂಘವು ಗುಡ್ಡಗಾಡು ಜಿಲ್ಲೆಗಳಲ್ಲಿ ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ ಹಮ್ಮಿಕೊಂಡಿತ್ತು. ಚುರಾಚಂದ್‌ಪುರ ಜಿಲ್ಲೆಯ ಟೊರ್ಬಂಗ್ ಪ್ರದೇಶದಲ್ಲಿ ಘರ್ಷಣೆ ಉಂಟಾಗಿದೆ. ಬಳಿಕ, ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಇದು ರಾಜ್ಯಾದ್ಯಂತ ಹಿಂಸಾಚಾರ ಉಂಟಾಗಲು ಕಾರಣವಾಯಿತು. ಬಳಿಕ, ಸಂಘರ್ಷವನ್ನ ಹತೋಟಿಗೆ ತರಲು ಮಣಿಪುರ ಪೊಲೀಸರೊಂದಿಗೆ ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್​ ಪಡೆಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ : ಮಣಿಪುರ ಹಿಂಸಾಚಾರ : ಇಂಟರ್​ನೆಟ್​ ಬಂದ್, ಕರ್ಫ್ಯೂ ಜಾರಿ.. ಕಂಡಲ್ಲಿ ಗುಂಡು ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.