ETV Bharat / bharat

ಮಣಿಪುರದಲ್ಲಿ ಹಿಂಸಾಚಾರ: ಅಸ್ಸೋಂ ರೈಫಲ್ಸ್ ನಿಂದ 'ಆಪರೇಷನ್ ಕೊಹಿಮಾ ಕಾಲಿಂಗ್' - Operation Kohima Calling

ಮಣಿಪುರದಲ್ಲಿ ಸಿಲುಕಿಕೊಂಡಿರುವ ನಾಗಾಲ್ಯಾಂಡ್ ಜನರನ್ನು ಅಸ್ಸೋಂ ರೈಫಲ್ಸ್​ ರಕ್ಷಿಸಲು ಮುಂದಾಗಿದೆ.

ಅಸ್ಸಾಂ ರೈಫಲ್ಸ್ ನಿಂದ 'ಆಪರೇಷನ್ ಕೊಹಿಮಾ ಕಾಲಿಂಗ್'

author img

By

Published : May 10, 2023, 4:31 PM IST

ತೇಜ್‌ಪುರ (ಅಸ್ಸೋಂ ): ಮಣಿಪುರದಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆ ನಾಗಾಲ್ಯಾಂಡ್‌ನ ಅನೇಕ ಜನರು ಮಣಿಪುರದಲ್ಲಿ ಸಿಲುಕಿಕೊಂಡಿದ್ದಾರೆ. ಈ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು, ಅಸ್ಸೋಂ ರೈಫಲ್ಸ್ ಸ್ಪಿಯರ್ ಕಾರ್ಪ್ಸ್ ಅಡಿ ಎರಡು ಹಂತಗಳಲ್ಲಿ 'ಆಪರೇಷನ್ ಕೊಹಿಮಾ ಕಾಲಿಂಗ್' ಅನ್ನು ಕೈಗೊಂಡಿತು. 1ನೇ ಹಂತದಲ್ಲಿ 676 ವ್ಯಕ್ತಿಗಳು ಮತ್ತು 2ನೇ ಹಂತದಲ್ಲಿ 553 ವ್ಯಕ್ತಿಗಳನ್ನು ಸ್ಥಳಾಂತರಿಸಲಾಗಿದೆ.

2ನೇ ಹಂತದಲ್ಲಿ ಯೊರಿಪೋಕ್‌ನ 47 ಕೊನ್ಯಾಕ್ ಹುಡುಗಿಯರು ಸೇರಿದ್ದಾರೆ. ಈ ಬಾಲಕಿಯರನ್ನು ಹೊರತೆಗೆಯಲು ರಕ್ಷಣಾ ತಂಡ ತೌಬಲ್ ಜಿಲ್ಲೆಯ ಒಳಭಾಗಗಳಿಗೆ ತೆರಳಿದೆ. ಅವರೆಲ್ಲರೂ ವೆನೀರ್ ಕಾರ್ಖಾನೆಯಲ್ಲಿ ಗಂಟೆಯ ವೇತನದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.

ಮ್ಯಾನ್ಮಾರ್​​ನಿಂದ ಅಕ್ರಮವಾಗಿ ವಲಸೆ ಬರುತ್ತಿರುವರಿಂದಲೇ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಪೀಪಲ್ಸ್​ ಅಲೆಯನ್ಸ್ ಫಾರ್​ ಪೀಸ್​ ಅಂಡ್​ ಪ್ರೊಗ್ರೆಸ್​ ಮಣಿಪುರ ಮತ್ತು ದೆಹಲಿ ಮಣಿಪುರ ಆರೋಪಿಸಿದೆ. ಮ್ಯಾನ್ಮಾರ್​​ದಿಂದ ಅಕ್ರಮವಾಗಿ ಬಂದ ಕುಕಿ ಸಮುದಾಯದ ಜನರು ಕೇಂದ್ರ ಸರ್ಕಾರದಲ್ಲಿ ಅಕ್ರಮವಾಗಿ ಉದ್ಯೋಗ ಪಡೆದಿದ್ದಾರೆ ಎಂದು ದೆಹಲಿ ಮಣಿಪುರಿ ಸೊಸೈಟಿ ಮತ್ತು ಜವಹಾರ್​ ಲಾಲ್​ ನೆಹರು ಯುನಿವರ್ಸಿಟಿಯ ಪ್ರೊಫೆಸರ್​​ ಭಗತ್​ ಒನಿಮ್​ ದೂರಿದ್ದಾರೆ.

ಬುಡಕಟ್ಟು ಸ್ಥಾನಮಾನಕ್ಕೆ ಒತ್ತಾಯ : ಮಣಿಪುರ ಚುನಾವಣಾ ರಾಜಕೀಯದಲ್ಲಿ ಕುಕಿ ಸಮುದಾಯ ಪ್ರಭಾವಶಾಲಿಯಾಗಿದೆ ಎಂದಿರುವ ಒನಿಮ್​, ಕುಕಿಗಳು ಬೇರೆ ದೇಶದಿಂದ ಇಲ್ಲಿಗೆ ವಲಸೆ ಬಂದಿದ್ದು, ತಮ್ಮನ್ನು ತಾವು ಇಲ್ಲಿನ ಮತದಾರರು ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ ಇದೀಗ ಅವರು ಇಲ್ಲಿ ಇತರ ಜನಾಂಗದವರ ಮೇಲೆ ತಮ್ಮ ಪ್ರಾಬಲ್ಯವನ್ನು ಸಾಧಿಸಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಈ ನಿರ್ದಿಷ್ಟ ಸಮುದಾಯದ ಮಂದಿಯನ್ನು ಗುರಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಮಣಿಪುರದಲ್ಲಿ ನಡೆದಿರುವ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೂ ಸುಮಾರು 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಹಿಂಸಾಚಾರದಲ್ಲಿ ಸುಮಾರು 60 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಿರೇನ್ ಸಿಂಗ್ ಹೇಳಿದ್ದಾರೆ. ಈ ಹಿಂಸಾಚಾರದಲ್ಲಿ ಇದುವರೆಗೆ 231 ಜನರು ಗಾಯಗೊಂಡಿದ್ದಾರೆ. ಅಲ್ಲದೆ ಮೇ 3ರಂದು ಭುಗಿಲೆದ್ದ ಈ ಗಲಭೆಯಲ್ಲಿ 1700 ಮನೆಗಳು ಸುಟ್ಟು ಹೋಗಿವೆ. ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಸಹಕರಿಸುವಂತೆ ಸಿಎಂ ಬಿರೇನ್ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

ಈ ವೇಳೆ ಗಲಭೆಯಿಂದಾಗಿ ಆಯಾ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ಅವರವರ ಸ್ಥಳಗಳಿಗೆ ಕರೆದೊಯ್ಯುವ ಕಾರ್ಯ ಆರಂಭವಾಗಿದೆ ಎಂದು ಮಾಹಿತಿ ನೀಡಿದರು. ಸುಪ್ರೀಂ ಕೋರ್ಟ್‌ನ ಸೂಚನೆ ನಂತರ ರಾಜ್ಯದ ಸಿಎಂ ಅವರ ಈ ಹೇಳಿಕೆ ಮುನ್ನೆಲೆಗೆ ಬಂದಿದೆ. ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಹಲವು ಮಂದಿ ಬಲಿಯಾಗಿದ್ದು, ರಾಜ್ಯದಲ್ಲಿ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿತ್ತು.

ಶೇಕಡ 53ರಷ್ಟಿರುವ ಮೇತಿ ಸಮುದಾಯ: ಮಣಿಪುರದಲ್ಲಿ ಬುಧವಾರ ಬುಡಕಟ್ಟು ಜನಾಂಗದವರು ಮೇತಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನದ ಬೇಡಿಕೆಯ ವಿರುದ್ಧ ಪ್ರತಿಭಟನೆ ನಡೆಸಿದಾಗ ಜಾತಿ ಘರ್ಷಣೆ ಪ್ರಾರಂಭವಾಯಿತು. ಈ ಸಂಘರ್ಷದ ಸಮಯದಲ್ಲಿ 23000 ಜನರು ಸ್ಥಳಾಂತರಗೊಂಡಿದ್ದಾರೆ. ಮಣಿಪುರದ ಒಟ್ಟು ಜನಸಂಖ್ಯೆಯ ಶೇಕಡ 53ರಷ್ಟನ್ನು ಮೇತಿ ಸಮುದಾಯವಿದೆ. ಈ ಸಮುದಾಯವು ಹೆಚ್ಚಾಗಿ ಇಂಫಾಲ್ ಕಣಿವೆಯ ಸುತ್ತ ವಾಸವಾಗಿದೆ. ಬುಡಕಟ್ಟು ಜನಾಂಗದ ನಾಗಾ ಮತ್ತು ಕುಕಿ ಬೆಟ್ಟಗಳ ಜಿಲ್ಲೆಯಲ್ಲಿ ವಾಸಿಸುವ ಮಣಿಪುರದ ಜನಸಂಖ್ಯೆಯ ಸುಮಾರು 40 ಪ್ರತಿಶತದಷ್ಟಿದ್ದಾರೆ.

ಇದನ್ನೂ ಓದಿ: ಮ್ಯಾನ್ಮಾರ್​ನ ಅಕ್ರಮ ವಲಸಿಗರಿಂದ ಮಣಿಪುರದಲ್ಲಿ ಹಿಂಸಾಚಾರ: ಮೆತೈ ಸಮುದಾಯ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.