ETV Bharat / bharat

ಕೊಚ್ಚಿ ವಿಮಾನನಿಲ್ದಾಣದಲ್ಲಿ ಪ್ರಯಾಣಿಕನ ಕಿರಿಕ್; ತಪಾಸಣೆಗೆ ಸಿಟ್ಟಾಗಿ ಬ್ಯಾಗಲ್ಲಿ 'ಬಾಂಬ್'​ ಇದೆ ಎಂದ! - ಕೊಚ್ಚಿನ್​ ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಯಾಣಿಕ

ವಿಮಾನ ನಿಲ್ದಾಣದಲ್ಲಿನ ಬಿಗಿ ತಪಾಸಣೆಗೆ ಕೋಪಗೊಂಡು ತಮ್ಮ ಬ್ಯಾಗ್​ನಲ್ಲಿ ಬಾಂಬ್ ಇದೆ ಎಂದು ಹೇಳಿ ಆತಂಕ ಮೂಡಿಸಿದ್ದ ದಂಪತಿಯನ್ನು ಬಂಧಿಸಿ, ಬಳಿಕ ಸ್ಟೇಷನ್​ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಕೊಚ್ಚಿ ವಿಮಾನನಿಲ್ದಾಣದಲ್ಲಿ ಪ್ರಯಾಣಿಕನ ಕಿರಿಕ್

author img

By

Published : Jul 3, 2022, 7:20 AM IST

ಕೊಚ್ಚಿ(ಕೇರಳ): ವಿಮಾನ ನಿಲ್ದಾಣದಲ್ಲಿ ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ತಪಾಸಣೆ ನಡೆಸುವುದು ಸಹಜ. ಕೊಚ್ಚಿನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ತೆರಳುತ್ತಿದ್ದ ದಂಪತಿಯ ಬ್ಯಾಗ್​ ತಪಾಸಣೆ ವೇಳೆ ಅದರಲ್ಲಿ 'ಬಾಂಬ್​' ಇದೆ ಎಂದು ಹೇಳಿ ಆತಂಕ ಮೂಡಿಸಿದ ಘಟನೆ ನಡೆದಿದೆ.

ವಿದೇಶಕ್ಕೆ ತೆರಳಲು ಕೊಚ್ಚಿನ್​ ವಿಮಾನ ನಿಲ್ದಾಣಕ್ಕೆ ರಾತ್ರಿ 1.30 ಹೊತ್ತಿಗೆ ಬಂದ ಗಂಡ-ಹೆಂಡತಿಯನ್ನು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಚೆಕ್​ಇನ್​ ಕೌಂಟರ್​ನಲ್ಲಿ ಬ್ಯಾಗ್​ ಪರಿಶೀಲನೆಗಾಗಿ, ಅದರಲ್ಲಿ ಏನಿದೆ ಎಂದು ಕೇಳಿದಾಗ ಸಿಟ್ಟಾದ ದಂಪತಿ ಬಾಂಬ್​ ಇದೆ ಎಂದಿದ್ದಾರೆ!.

ಇದರಿಂದ ಆತಂಕಕ್ಕೊಳಗಾದ ಭದ್ರತಾ ಸಿಬ್ಬಂದಿ ದಂಪತಿಯನ್ನು ಪ್ರಯಾಣಕ್ಕೆ ಅನುಮತಿಸದೇ ತಮ್ಮ ವಶಕ್ಕೆ ಪಡೆದಿದ್ದಾರೆ. ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ರವಾನಿಸಿದರು. ವಿಚಾರಣೆಯ ವೇಳೆ ದಂಪತಿ ಹೆಚ್ಚಿನ ತಪಾಸಣೆ ನಡೆಸಿದ್ದಕ್ಕೆ ಕೋಪಗೊಂಡು ಈ ರೀತಿ ವರ್ತಿಸಿದ್ದಾರೆ ಎಂದು ತಿಳಿಸಿದ್ದಾರೆ. ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ಸ್ಟೇಷನ್​ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿಯಿಂದ ಜಬಲ್​ಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಹೊಗೆ.. ತುರ್ತು ಭೂಸ್ಪರ್ಶ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.