ETV Bharat / bharat

ಅಕ್ರಮ ಸಂಬಂಧ ಶಂಕಿಸಿ ಅತ್ತಿಗೆ, ಇಬ್ಬರು ಮಕ್ಕಳ ಕೊಲೆಗೈದ ದುರುಳ

ಅನೈತಿಕ ಸಂಬಂಧ ಶಂಕಿಸಿ ವ್ಯಕ್ತಿಯೊಬ್ಬ ಅತ್ತಿಗೆ ಮತ್ತು ಆಕೆಯ ಮಕ್ಕಳನ್ನು ಕೊಂದು ಸುಟ್ಟು ಹಾಕಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

man-strangles-sister-in-law-and-two-minor-children-and-sets-fire-to-bodies-in-pune
ಅಕ್ರಮ ಸಂಬಂಧ ಶಂಕೆ: ಅತ್ತಿಗೆ ಮತ್ತು ಇಬ್ಬರು ಮಕ್ಕಳ ಕೊಲೆ ಮಾಡಿದ ದುಷ್ಕರ್ಮಿ
author img

By

Published : Apr 6, 2023, 10:02 PM IST

ಪುಣೆ (ಮಹಾರಾಷ್ಟ್ರ): ತನ್ನ ಅತ್ತಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡ ವ್ಯಕ್ತಿಯೊಬ್ಬ ಅತ್ತಿಗೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ಶವಗಳನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಪುಣೆಯ ಕೊಂಡ್ವಾ ಪ್ರದೇಶದಲ್ಲಿ ನಿನ್ನೆ (ಬುಧವಾರ) ನಡೆದಿದೆ. ಮೃತರನ್ನು ಆಮ್ರಪಾಲಿ (25), ರೋಶ್ನಿ (6) ಮತ್ತು ಆದಿತ್ಯ (4) ಎಂದು ಗುರುತಿಸಲಾಗಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ನಿನ್ನೆ ಬೆಳಗ್ಗೆ ಆರೋಪಿ ಮತ್ತು ಆತನ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧದ ವಿಚಾರವಾಗಿ ಜಗಳವಾಡಿದ್ದಾನೆ. ನಂತರ ಕೋಪಗೊಂಡು ಮಹಿಳೆಯನ್ನು ಮತ್ತು ಆಕೆಯ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಮೃತದೇಹಗಳನ್ನು ಬೆಡ್​ಶೀಟ್​​ನಲ್ಲಿ ಸುತ್ತಿ ಕೊಡ್ವಾದ ಪಿಸೋಲಿ ಎಂಬ ಪ್ರದೇಶದಲ್ಲಿ ಶವಗಳನ್ನು ಸುಟ್ಟಿದ್ದಾನೆ. ಮಹಿಳೆಯ ಸಂಬಂಧಿ ದೂರು ನೀಡಿದ ನಂತರ ವಿಷಯ ಬೆಳಕಿಗೆ ಬಂದಿದೆ.

ಕೃತ್ಯ ಎಸಗಿದ ಆರೋಪಿಯನ್ನು ಐಪಿಸಿ ಸೆಕ್ಷನ್​ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷ್ಯಧಾರಗಳ ನಾಶ) ಸೆಕ್ಷನ್​ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಲಾತೂರ್ ​ಜಿಲ್ಲೆಯ ಔಸ ತಾಲೂಕಿನ ವೈಭವ್​ ರುಪ್ಸೇನ್​ ವಾಘಮಾರೆ ಎಂದು ಗುರುತಿಸಲಾಗಿದೆ. ಪುಣೆಯಲ್ಲಿ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆಮ್ರಪಾಲಿ ಕಳೆದ ಒಂದು ವರ್ಷದಿಂದ ಗಂಡನಿಂದ ಬೇರ್ಪಟ್ಟು ಮಕ್ಕಳೊಂದಿಗೆ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಪ್ರಿಯಕರಿನಿಂದ ಹತ್ಯೆಯಾದ ಮಹಿಳೆ: ಪ್ರಿಯಕರನೋರ್ವ ಮಹಿಳೆಯನ್ನು ಹತ್ಯೆಗೈದ ಬಳಿಕ ದೇಹವನ್ನು ಸುಟ್ಟು ಪರಾರಿಯಾಗಿರುವ ಘಟನೆ ನಗರದ ಆನೇಕಲ್​​ ತಾಲೂಕಿನ ಸಂಪಿಗೆ ನಗರದಲ್ಲಿ ಏ.6 ರಂದು ನಡೆದಿತ್ತು. ಮೃತ ಮಹಿಳೆಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತರನ್ನು ಮಂಜುಳಾ (32) ಎಂದು ಗುರುತಿಸಲಾಗಿದೆ. ನಾರಾಯಣ ಕೊಲೆಗೈದು ಪರಾರಿಯಾದ ವ್ಯಕ್ತಿ.

ಪತಿಯಿಂದ ವಿಚ್ಛೇದನ ಪಡೆದಿದ್ದ ಮಂಜುಳಾ ಕಳೆದ ಹತ್ತು ವರ್ಷಗಳಿಂದ ನಾರಾಯಣನ ಜೊತೆ ವಾಸವಿದ್ದರು. ಅಪಾರ್ಟ್​ಮೆಂಟ್​ ಒಂದರಲ್ಲಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ನಾರಾಯಣ ಮಂಜುಳಾ ಮೇಲೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ಮಾಡುತ್ತಿದ್ದನು ಮತ್ತು ಹೌಸ್​ ಕೀಪಿಂಗ್​ ಕೆಲಸ ತೊರೆಯುಂತೆಯೂ ಒತ್ತಡ ಹಾಕುತ್ತಿದ್ದನಂತೆ. ಆದರೆ ಮಂಜುಳಾ ಕೆಲಸ ತೊರೆಯುವುದಿಲ್ಲ ಎಂದು ಹಠ ಹಿಡಿದಿದ್ದು ಇದರಿಂದ ನಾರಾಯಣ ಕೋಪಗೊಂಡು ಕಳೆದ ಮಾರ್ಚ್​ 29 ರಂದು ಮಾತನಾಡುವ ನೆಪದಲ್ಲಿ ಮಂಜುಳಾರನ್ನು, ಇಬ್ಬರೂ ಯಾವಾಗಲೂ ಬರುತ್ತಿದ್ದ ಜಾಗಕ್ಕೆ ಕರೆದುಕೊಂಡು ಬಂದು, ಬಳಿಕ ಕೊಲೆ ಮಾಡಿ ದೇಹವನ್ನು ಸುಟ್ಟು ಪರಾರಿಯಾಗಿದ್ದನು.

ಇದನ್ನೂ ಓದಿ: ಆಕಾಂಕ್ಷಾ ದುಬೆ ಆತ್ಮಹತ್ಯೆ ಪ್ರಕರಣ: ಗಾಯಕ ಸಮರ್ ಸಿಂಗ್ ವಿರುದ್ಧ ಲುಕ್ ಔಟ್ ನೋಟಿಸ್..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.