ETV Bharat / bharat

ಬೀದಿ ನಾಯಿ ಮೇಲೆ ಅತ್ಯಾಚಾರ: ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು - rape

ಬೀದಿ ನಾಯಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

man-rapes-street-dog-in-bihars-patna-video-goes-viral-hunt-on-to-trace-accused
ಬಿಹಾರ: ಬೀದಿ ನಾಯಿಯ ಮೇಲೆ ವ್ಯಕ್ತಿ ಅತ್ಯಾಚಾರ, ಆರೋಪಿ ಪತ್ತೆಗೆ ಶೋಧ
author img

By

Published : Mar 25, 2023, 9:09 PM IST

ಪಾಟ್ನಾ (ಬಿಹಾರ): ವಿಕೃತ ಕಾಮುಕನೊಬ್ಬ ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿರು ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾರ್ಚ್​ 8 ಹೋಳಿ ಹಬ್ಬದ ದಿನದಂದು ಈ ವಿಲಕ್ಷಣ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿತ್ತು ಎಂದು ತಿಳಿದು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್​ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸೆರೆಯಾದ ವಿಡಿಯೋದಲ್ಲಿ ಇಲ್ಲಿನ ಪುಲ್ವಾರಿಶರೀಫ್‌ನ ಕಾಲೋನಿಯ ವ್ಯಕ್ತಿಯೊಬ್ಬ ಬೀದಿ ನಾಯಿಯ ಮೇಲೆ ಅತ್ಯಾಚಾರ ಎಸಗಿರುವುದು ಕಂಡುಬಂದಿದೆ. ಈ ಬಗ್ಗೆ ನಿಧಿ ಭೂರಿ ಫೌಂಡೇಶನ್ ಎಂಬ ಎನ್​ಜಿಓ ಸಂಸ್ಥೆಯು ಪುಲ್ವಾರಿಶರೀಫ್ ಪೊಲೀಸ್ ಠಾಣೆಗೆ ದೂರು ನೀಡಿದೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ಹುಡುಕಾಟ ಆರಂಭಿಸಿದ್ದಾರೆ. ರಾತ್ರಿ ಹೊತ್ತು ನಿರ್ಜನ ಪ್ರದೇಶದಲ್ಲಿ ಆರೋಪಿಯು ಅಮಾಯಕ ಪ್ರಾಣಿಯೊಂದಿಗೆ ಅಸಹಜ ಕ್ರಿಯೆ ನಡೆಸುತ್ತಿದ್ದ. ಇಂತಹ ಅಮಾನವೀಯ ಕೃತ್ಯದ ವಿರುದ್ಧ ಪ್ರಾಣಿಗಳ ರಕ್ಷಣೆಗಾಗಿ ಕೆಲಸ ಮಾಡುವ ಎನ್‌ಜಿಒ, ಆರೋಪಿಯ ವಿರುದ್ಧ ದೂರು ದಾಖಲಿಸಿದೆ.

ಆರೋಪಿಗಳ ವಿರುದ್ಧ ಪ್ರಾಣಿ ಕಾಯ್ದೆ ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎನ್‌ಜಿಒ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ನಾವು ವಿಡಿಯೋ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳನ್ನು ಗುರುತಿಸಲು ಮತ್ತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಫುಲ್ವಾರಿಶರೀಫ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶಫೀರ್ ಆಲಂ ತಿಳಿಸಿದರು.

ಇದನ್ನೂ ಓದಿ: ಇನ್​ಸ್ಟಾಗ್ರಾಂ ಮೂಲಕ ಪರಿಚಯವಾದ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಶಿಕ್ಷೆ

ಬಾಲಕನಿಂದ ನಡೆದಿತ್ತು ಹಸುವಿನ ಮೇಲೆ ಅತ್ಯಾಚಾರ : ಇಂತಹುದ್ದೇ ಮತ್ತೊಂದು ಪ್ರಕರಣ ಸಹ ಇತ್ತೀಚಿಗಷ್ಟೇ ಮಹಾರಾಷ್ಟ್ರದಲ್ಲಿ ವರದಿಯಾಗಿತ್ತು. 16 ವರ್ಷದ ಬಾಲಕ ಹಸುವಿನ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದ. ಬಾಲಕನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಫರ್ಸುಂಗಿ ಗ್ರಾಮದ ಬಾಲಕ ಬಯಲಿನಲ್ಲಿ ಹಸುವಿನ ಕಾಲುಗಳನ್ನು ಕಟ್ಟಿಹಾಕಿ ಹಸುವಿನ ಜೊತೆ ಅಸಹಜ ಕ್ರಿಯೆ ನಡೆಸುತ್ತಿದ್ದ ಎಂದು ಅಲ್ಲಿನ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಪ್ರತ್ಯಕ್ಷದರ್ಶಿಗಳು ನೀಡಿದ್ದ ದೂರಿನ ಮೇಲೆ ಪೊಲೀಸರು ಬಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ಮತ್ತು ಪ್ರಾಣಿ ಹಿಂಸೆ ಪ್ರಕರಣ ದಾಖಲಿಸಿಕೊಂಡು 16 ವರ್ಷದ ಆರೋಪಿಯನ್ನು ಬಂಧಿಸಿದ್ದರು. ಈ ಘಟನೆಯಿಂದ ಅಲ್ಲಿನ ಜನ ಬೇಸ್ತು ಬಿದ್ದಿದ್ದರು. ಅಲ್ಲದೇ ಬಾಲಕನಿಗೆ ಹಿಡಿ ಶಾಪ ಕೂಡಾ ಹಾಕಿದ್ದರು.

ಇತ್ತೀಚಿಗೆ ಕಾಮುಕನೊಬ್ಬ ಹಸುವಿನ ಕರು ಕಟ್ಟಿ ಹಾಕಿ ಅತ್ಯಾಚಾರ ಮಾಡಿರುವ ವಿಚಿತ್ರ ಘಟನೆ ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿತ್ತು. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕಸಬಾ ಲಿಂಗಸೂಗೂರು ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿತ್ತು. 25 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದ.

ಇದನ್ನೂ ಓದಿ : ವಿಜಯಪುರ ಹೋಟೆಲ್​ ರೂಮ್‌ನಲ್ಲಿ ಇಬ್ಬರ ಶವ ಪತ್ತೆ: ಜೊತೆಗಾರನ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.