ಕಟಕ್ (ಒಡಿಶಾ): ಕಳೆದ ಒಂದು ತಿಂಗಳಿಂದ ಟೊಮೆಟೊ ದರ ಗಗನಕ್ಕೇರಿದ್ದು, ದೇಶಾದ್ಯಂತ ಟೊಮೆಟೊ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ನಡುವೆ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಎರಡು ಕೆಜಿ ಟೊಮೆಟೊ ಖರೀದಿಸಿದ ವ್ಯಕ್ತಿಯೊಬ್ಬ ಹಣ ನೀಡದೇ ಇಬ್ಬರು ಬಾಲಕರನ್ನು ಅಂಗಡಿಯಲ್ಲಿ ಒತ್ತೆಯಾಗಿಟ್ಟು ಪರಾರಿಯಾದ ಪ್ರಕರಣ ಒಡಿಶಾದಲ್ಲಿ ವರದಿಯಾಗಿದೆ.
ಕಟಕ್‌ನ ಛತ್ರ ಬಜಾರ್‌ನಲ್ಲಿ ಶನಿವಾರ ವ್ಯಕ್ತಿಯೊಬ್ಬ ಇಬ್ಬರು ಬಾಲಕರೊಂದಿಗೆ ಗ್ರಾಹಕನ ಸೋಗಿನಲ್ಲಿ ಅಂಗಡಿಯೊಂದಕ್ಕೆ ಬಂದಿದ್ದ. ಈ ವೇಳೆ 10 ಕೆಜಿ ಟೊಮೆಟೊವನ್ನು ಆತ ಖರೀದಿ ಮಾಡಿದ್ದಾನೆ. ಆದರೆ, ಹಣ ನೀಡುವಾಗ ಹಣವನ್ನು ತನ್ನ ವಾಹನದಲ್ಲಿ ಮರೆತು ಬಂದಿರುವ ರೀತಿಯಲ್ಲಿ ನಾಟಕ ಶುರು ಮಾಡಿದ್ದಾನೆ. ಅಲ್ಲದೇ, ಹಣ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ತನ್ನೊಂದಿಗೆ ಕರೆದುಕೊಂಡು ಬಂದಿದ್ದ ಇಬ್ಬರು ಬಾಲಕರನ್ನು ಅಂಗಡಿಯಲ್ಲೇ ಕೂರಿಸಿ, ಎರಡು ಕೆಜಿ ಟೊಮೆಟೊದೊಂದಿಗೆ ಅಲ್ಲಿಂದ ತೆರಳಿದ್ದಾನೆ.
ಇದನ್ನೂ ಓದಿ: Bengaluru crime: ಟೊಮೆಟೊ ತುಂಬಿದ್ದ ಬೊಲೆರೊ ವಾಹನ ಹೈಜಾಕ್ ಮಾಡಿದ ಖದೀಮರು..!
ಅಂಗಡಿಯಲ್ಲಿ ಬಾಲಕರನ್ನು ಕೂರಿಸಿ ಟೊಮೆಟೊದೊಂದಿಗೆ ತೆರಳಿದ ಆಸಾಮಿ ಸುಮಾರು ಎರಡು ಗಂಟೆ ಕಳೆದರೂ ಮರಳಿ ಬಂದಿಲ್ಲ. ಇದರಿಂದ ಅನುಮಾನಗೊಂಡ ಅಂಗಡಿ ಮಾಲೀಕ ಟೊಮೆಟೊ ತೆಗೆದುಕೊಂಡ ಹೋದ ವ್ಯಕ್ತಿ ಎಲ್ಲಿದ್ದಾನೆ ಎಂದು ಬಾಲಕರನ್ನು ವಿಚಾರಿಸಿದ್ದಾನೆ. ಆದರೆ, ಬಾಲಕರಿಗೆ ಯಾವುದೇ ಉತ್ತರವನ್ನು ನೀಡಲು ಸಾಧ್ಯವಾಗಿಲ್ಲ. ಇದರಿಂದ ಕೋಪಗೊಂಡ ವ್ಯಾಪಾರಿ ಟೊಮೆಟೊ ಹಣವನ್ನು ನೀಡುವವರಿಗೆ ನಿಮ್ಮನ್ನು ಬಿಡುವುದಿಲ್ಲ ಎಂದು ಹೇಳಿದ್ದಾನೆ.
ಬಯಲಾದ ಸತ್ಯ: ಅಂಗಡಿಯಲ್ಲಿ ತಮ್ಮನ್ನು ಕುಳಿತುಕೊಳ್ಳಲು ಹೇಳಿ ಆ ವ್ಯಕ್ತಿ ಮರಳಿ ಬರದೇ ಇರುವುದಿಂದ ಹಾಗೂ ಹಣ ನೀಡುವವರಿಗೆ ನಿಮ್ಮನ್ನು ಬಿಡುವುದಿಲ್ಲ ಎಂದು ಅಂಗಡಿ ಮಾಲೀಕ ಹೇಳಿದ್ದರಿಂದ ಬಾಲಕರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಅಷ್ಟೇ ಅಲ್ಲ, ಆ ವ್ಯಕ್ತಿ ಬಗ್ಗೆ ನಮಗೇನು ಗೊತ್ತಿಲ್ಲ ಎಂಬ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ವಾಷಿಂಗ್ ಮಷಿನ್ ಬೇರೆಡೆಗೆ ಸ್ಥಳಾಂತರ ಮಾಡಬೇಕಿದೆ. ನನ್ನೊಂದಿಗೆ ಬನ್ನಿ 300 ರೂಪಾಯಿ ಕೊಡುತ್ತೇನೆ ಎಂದು ನಮ್ಮನ್ನು ಕರೆದುಕೊಂಡು ಬಂದಿದ್ದ. ಆದರೆ, ಬಜಾರ್‌ಗೆ ಕರೆತಂದು ಬಿಟ್ಟು ಹೋಗಿದ್ದಾನೆ ಎಂದು ಬಾಲಕರು ಅಳಲು ತೋಡಿಕೊಂಡಿದ್ದಾರೆ.
ಸದ್ಯಕ್ಕೆ ಬಾಲಕರನ್ನು ಒತ್ತೆಯಾಗಿಟ್ಟು ಟೊಮೆಟೊ ತೆಗೆದುಕೊಂಡು ಹೋದ ವಂಚಕ ವ್ಯಕ್ತಿ ಯಾರೂ ಎಂಬುದು ಇನ್ನೂ ಗೊತ್ತಾಗಿಲ್ಲ. ಅಲ್ಲದೇ, ಆತ ಯಾಕೆ ಹಿಂತಿರುಗಲಿಲ್ಲ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯೂ ಇಲ್ಲ. ಮತ್ತೊಂದೆಡೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, ಅಂಗಡಿ ಮಾಲೀಕ ಈ ಘಟನೆ ಕುರಿತು ಠಾಣೆಗೆ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಟೊಮೆಟೊ ಮಾರಿದ ಹಣ ಇದೆ ಎಂದು ರೈತನ ಕೊಂದ ದುಷ್ಕರ್ಮಿಗಳು: ಚಿನ್ನಾಭರಣ ಸಮೇತ ಫ್ರಿಡ್ಜ್ನಲ್ಲಿದ್ದ ಟೊಮೆಟೊ ಕಳವು!