ಹೈದರಾಬಾದ್: ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ನಲ್ಲಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ತಯಾರಿಸಿದ ಕಿಕ್ - ಸ್ಟಾರ್ಟಿಂಗ್ ಜೀಪ್‌ನ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಜೀಪ್‌ಗೆ ಒದ್ದು ಕಿಕ್ ಸ್ಟಾರ್ಟ್ ಮಾಡುತ್ತಿದ್ದಾರೆ. ವಿಡಿಯೋ ನೋಡಿದ ನಂತರ ಆನಂದ್ ಮಹೀಂದ್ರಾ ಈ ವ್ಯಕ್ತಿಯ ಅಭಿಮಾನಿಯಾಗಿದ್ದಾರೆ.
ಈ ವಿಶಿಷ್ಟ ಜೀಪ್ನ್ನು ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಎಂಬ ವ್ಯಕ್ತಿ ನಿರ್ಮಿಸಿದ್ದು, ಇದಕ್ಕೆ 60 ಸಾವಿರ ರೂ. ತಗುಲಿದೆ ಎನ್ನಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಳಸುವ ಕಿಕ್ ಸ್ಟಾರ್ಟ್ ಮಾದರಿಯನ್ನು ಇದರಲ್ಲಿ ಬಳಸಲಾಗಿದೆ.
ಈ ಕುರಿತು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಬರೆದುಕೊಂಡಿರುವ ಅವರು, 'ನಿಸ್ಸಂಶಯವಾಗಿ ಇದು ಯಾವುದೇ ನಿಯಮಗಳಿಗೆ ಹೊಂದಿಕೆಯಾಗುವುದಿಲ್ಲ. ಆದರೆ, ನಮ್ಮ ಜನರ ಜಾಣ್ಮೆ ಮತ್ತು ಕನಿಷ್ಠ ಸಂಪನ್ಮೂಲಗಳನ್ನು ನಾನು ಪ್ರಶಂಸಿಸುತ್ತೇನೆ. ಹೆಚ್ಚು ಹೆಚ್ಚು ಸಾಮರ್ಥ್ಯಗಳನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿರುವ ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.
ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಇಂತಹ ವಿಡಿಯೋಗಳನ್ನು ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದರಲ್ಲಿ ಅವರು ಕಡಿಮೆ ಅಥವಾ ಸೀಮಿತ ಸಂಪನ್ಮೂಲಗಳ ಉತ್ತಮ ಬಳಕೆ ಅಥವಾ ಹೊಸದನ್ನು ಮಾಡಲು ಹೆಚ್ಚಾಗಿ ಪ್ರೋತ್ಸಾಹಿಸುತ್ತಾರೆ.
-
Local authorities will sooner or later stop him from plying the vehicle since it flouts regulations. I’ll personally offer him a Bolero in exchange. His creation can be displayed at MahindraResearchValley to inspire us, since ‘resourcefulness’ means doing more with less resources https://t.co/mibZTGjMPp
— anand mahindra (@anandmahindra) December 22, 2021 " class="align-text-top noRightClick twitterSection" data="
">Local authorities will sooner or later stop him from plying the vehicle since it flouts regulations. I’ll personally offer him a Bolero in exchange. His creation can be displayed at MahindraResearchValley to inspire us, since ‘resourcefulness’ means doing more with less resources https://t.co/mibZTGjMPp
— anand mahindra (@anandmahindra) December 22, 2021Local authorities will sooner or later stop him from plying the vehicle since it flouts regulations. I’ll personally offer him a Bolero in exchange. His creation can be displayed at MahindraResearchValley to inspire us, since ‘resourcefulness’ means doing more with less resources https://t.co/mibZTGjMPp
— anand mahindra (@anandmahindra) December 22, 2021
ಹಳೆ ಕಾರಿಗೆ ಬೊಲೆರೊ ಎಕ್ಸ್ಚೇಂಜ್:
ಈ ವಿಡಿಯೋ ಹಂಚಿಕೊಂಡ ನಂತರ ಮತ್ತೊಂದು ಟ್ವೀಟ್ ಮಾಡಿರುವ ಅವರು, ವಾಹನವು ನಿಯಮಗಳನ್ನು ಅನುಸರಿಸದ ಕಾರಣ ಸ್ಥಳೀಯ ಅಧಿಕಾರಿಗಳು ಅದನ್ನು ರಸ್ತೆಗಳಲ್ಲಿ ಓಡಿಸುವುದನ್ನು ತಡೆಯುತ್ತಾರೆ ಎಂದು ಅವರು ಹೇಳಿದ್ದಾರೆ. ಅವರ ನವೀನ ರಚನೆಗಾಗಿ ಅವರನ್ನು ಪುರಸ್ಕರಿಸುತ್ತಾ, ಲೋಹರ್ ಅವರಿಗೆ ಹಳೆಯ ವಾಹನದ ಬದಲಾಗಿ ಬೊಲೆರೊವನ್ನು ನೀಡಲಾಗುತ್ತದೆ ಮತ್ತು ಅವರ ಈ ವಿಶಿಷ್ಟ ಕಾರನ್ನು ಇತರರಿಗೆ ಸ್ಫೂರ್ತಿಯಾಗಿ ಮಾಡುವ ಉದ್ದೇಶದಿಂದ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಪ್ರದರ್ಶಿಸಲಾಗುತ್ತದೆ ಎಂದಿದ್ದಾರೆ.
ಓದಿ: ಪ್ರಿಯಾಂಕಾ ಗಾಂಧಿ ಮಕ್ಕಳ ಇನ್ಸ್ಟಾಗ್ರಾಮ್ ಹ್ಯಾಕ್ ಆರೋಪ.. ದೂರು ದಾಖಲಿಸಿಕೊಂಡ ಕೇಂದ್ರ ಸರ್ಕಾರ