ETV Bharat / bharat

ಊಟಕ್ಕೆ ಸಾಂಬಾರು ಮಾಡಿ, ಅನ್ನಕ್ಕಿಡದ ಪತ್ನಿ.. ಕೋಪದಲ್ಲಿ ಹೆಂಡ್ತಿಯನ್ನ ಕೊಂದೇಬಿಟ್ಟ ಪತಿ! - ಈಟಿವಿ ಭಾರತ ಕನ್ನಡ

ಸಾಂಬಾರು ಮಾಡಿ, ಅನ್ನ ಮಾಡಿಲ್ಲ ಎಂದು ಕೋಪಗೊಂಡ ಪತಿಯೋರ್ವ ಪತ್ನಿಗೆ ಇಟ್ಟಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಸಂಬಲ್​​ಪುರ ಎಂಬಲ್ಲಿ ನಡೆದಿದೆ.

man-killed-wife-for-not-cooking-rice-with-curry
ಸಂಬಾರು ಮಾಡಿ..ಅನ್ನ ಇಟ್ಟಿಲ್ಲ ಎಂದು ಪತ್ನಿಯನ್ನು ಕೊಲೆಗೈದ ಪತಿ
author img

By

Published : May 9, 2023, 5:13 PM IST

ಸಂಬಲ್‌ಪುರ (ಒಡಿಶಾ): ಸಾಂಬಾರು ಮಾತ್ರ ತಯಾರಿಸಿ ಅನ್ನ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನೇ ಇಟ್ಟಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಒಡಿಶಾದ ಸಂಬಲ್​​ಪುರ ಎಂಬಲ್ಲಿ ನಡೆದಿದೆ. ಜಮನಕಿರಾ ಪೊಲೀಸ್ ಠಾಣಾ ವ್ಯಾಪ್ತಿಯ ನುವಾಧಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸನಾತನ ಧಾರುವ ಎಂದು ಗುರುತಿಸಲಾಗಿದ್ದು, ಮೃತರನ್ನು ಪುಷ್ಪಾ ಧಾರುವ(35) ಎಂದು ಗುರುತಿಸಲಾಗಿದೆ.

ಅಂದು ನಡೆದಿದ್ದೇನು?.. ಭಾನುವಾರ ತಡರಾತ್ರಿ ಸನಾತನ ಧಾರುವಾ ತನ್ನ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ಕೇವಲ ಸಾಂಬಾರು ಮಾಡಿದ್ದು, ಅನ್ನ ಮಾಡಿರಲಿಲ್ಲ. ಇದರಿಂದ ಕುಪಿತಗೊಂಡ ಸನಾತನ ಪತ್ನಿಯೊಂದಿಗೆ ಕ್ಯಾತೆ ತೆಗೆದಿದ್ದಾನೆ. ಈ ಸಂಬಂಧ ಇಬ್ಬರ ನಡುವಿನ ವಾಗ್ವಾದ ಜಗಳಕ್ಕೆ ತಿರುಗಿ ಅದು ತಾರಕಕ್ಕೇರಿದೆ. ಈ ವೇಳೆ ಸನಾತನ ಇಟ್ಟಿಗೆಯಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಮೃತ ಮಹಿಳೆಯ ಮಗ ಮನೆಗೆ ಬಂದಾಗ ತಾಯಿ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಬಳಿಕ ಈತ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜೊತೆಗೆ ಆರೋಪಿ ಸನಾತನ ಧಾರುವಾನನ್ನು ಬಂಧಿಸಿದ್ದಾರೆ.

ಸನಾತನ ಧಾರುವ ಮತ್ತು ಪುಷ್ಪ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಕುಚಿಂಡಾದಲ್ಲಿ ಮನೆಗೆಲಸ ಮಾಡುತ್ತಿದ್ದಾಳೆ. ಮಗ ಗೆಳೆಯರ ಮನೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಈ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಕಾರ್‌ನ ಡಿಕ್ಕಿಯಲ್ಲಿತ್ತು 3 ಕೋಟಿ ರೂಪಾಯಿ, ಹಣ ಎಣಿಕೆ ಯಂತ್ರ: ಪುಣೆ ಪೊಲೀಸರಿಂದ ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.