ವಿಕಾರಾಬಾದ್: ಮುಂದುವರಿದ ಪ್ರೀತಿ ಮತ್ತು ವಿವಾಹೇತರ ಸಂಬಂಧಕ್ಕೆ ಬ್ಯಾಂಕ್ ಉದ್ಯೋಗಿಯೊಬ್ಬ ಬರ್ಬರ ಕೊಲೆಯಾಗಿರುವ ಘಟನೆ ಜಿಲ್ಲೆಯ ಮಂದಾನಪಲ್ಲಿ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ: ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಮಂದಾನಪಲ್ಲಿ ಗ್ರಾಮದ ನಿವಾಸಿ ಅಕುಲ ವೆಂಕಟಯ್ಯ ಮತ್ತು ಪೆಂಟಮ್ಮ ದಂಪತಿಗೆ ಭಾಗ್ಯಮ್ಮ ಮತ್ತು ಪೂರ್ಣಮ್ಮ ಎಂಬ ಇಬ್ಬರು ಹೆಣ್ಮಕ್ಕಳು. ಇವರಿಗೆ 10 ಎಕರೆ ಜಮೀನಿದೆ. ನಾಲ್ಕು ವರ್ಷಗಳ ಹಿಂದೆ ಇದೇ ಗ್ರಾಮದ ನಿವಾಸಿ ನರೇಶ್ ಭಾಗ್ಯ ಅವರನ್ನು ಮದುವೆಯಾಗಿದ್ದರು. ಆದರೆ, ಆಸ್ತಿಗೆ ಆಸೆಪಟ್ಟು ಎರಡು ವರ್ಷಗಳ ಹಿಂದೆ ಎಲ್ಲರ ಒಪ್ಪಿಗೆ ಪಡೆದು ಗುರು - ಹಿರಿಯರ ಮಧ್ಯೆ ಪೂರ್ಣಾಳನ್ನು ಮದುವೆ ಮಾಡಿಕೊಂಡರು.
ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ: ತಮಿಳುನಾಡು ಜಲಸಂಪನ್ಮೂಲ ಸಚಿವ
ಪೂರ್ಣಳಿಗೆ ಸಂತಾನ ಭಾಗ್ಯವಿಲ್ಲ. ಆದರೆ ಆಕೆಯ ಸಹೋದರಿ ಭಾಗ್ಯಮ್ಮಗೆ ಇಬ್ಬರು ಹೆಣ್ಮಕ್ಕಳಿವೆ. ಇನ್ನು ಪೂರ್ಣಾ ಮದುವೆಗೂ ಮುನ್ನ ಇದೇ ಗ್ರಾಮದ ನಿವಾಸಿ ಜನಾರ್ದನ ಜೊತೆ ಪ್ರೇಮದಲ್ಲಿದ್ದಳು. ಆದರೆ ಅವರಿಬ್ಬರ ಪ್ರೀತಿ ವಿಫಲವಾಯಿತು. ಹೀಗಾಗಿ ಜನಾರ್ದನ್ ಸಂಗಾರೆಡ್ಡಿ ಜಿಲ್ಲೆಯ ಕೋಹಿರ್ ತಾಲೂಕಿನ ನಿವಾಸಿ ವಿಜಯಲಕ್ಷ್ಮಿಯನ್ನು ಮದುವೆಯಾಗಿದ್ದ. ಇನ್ನು ಜನಾರ್ದನ ದಂಪತಿಗೆ ಒಬ್ಬ ಮುದ್ದಾದ ಮಗನಿದ್ದಾನೆ. ಆದರೆ, ಪೂರ್ಣಾ ಮತ್ತು ಜನರ್ದಾನ್ ಮಧ್ಯೆ ಪ್ರೀತಿ ಸಾಗುತ್ತಲೇ ಇತ್ತು. ಅವರ ಪ್ರೀತಿ ವಿವಾಹೇತರ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು.
ಇವರಿಬ್ಬರ ವಿವಾಹೇತರ ಸಂಬಂಧ ಮನೆಯಲ್ಲಿ ತಿಳಿದಿತ್ತು. ಅದೆಷ್ಟೋ ಬಾರಿ ಪೂರ್ಣಾಳಿಗೆ ತಿಳಿ ಹೇಳಿದ್ರೂ ಸಹ ಉಪಯೋಗವಾಗಲಿಲ್ಲ. ಇದೇ ವಿಷಯಕ್ಕಾಗಿ ತಿಂಗಳ ಹಿಂದೆ ಹಿರಿಯರ ಮಧ್ಯೆ ಪಂಚಾಯಿತಿ ನಡೆಯಿತು. ಪಂಚಾಯಿತಿಯಲ್ಲಿ ಬುದ್ದಿ ಹೇಳಿದ್ರೂ ಸಹ ಪೂರ್ಣ ತನ್ನ ಚಾಳಿ ಮುಂದುವರಿಸಿದ್ದಳು. ಜನಾರ್ದನ್ ಜೊತೆ ತನ್ನ ಆಟ ಮುಂದುವರಿಸಿದ್ದನು, ಇದನ್ನು ಅರಿತ ಗಂಡ ನರೇಶ್ ತನ್ನ ಸ್ನೇಹಿತರೊಡನೆ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದನು.
ಓದಿ: ಎಕ್ಸಿಟ್ ಪೋಲ್: ಉತ್ತರ ಪ್ರದೇಶದಲ್ಲಿ ಭವಿಷ್ಯ ನಿಜವಾಗುವುದೇ?, ಏನಿದರ ಲೆಕ್ಕಾಚಾರ?
ಮಂಗಳವಾರ ಕಾರ್ಯ ಮುಗಿಸಿಕೊಂಡು ಬರುತ್ತಿದ್ದ ಜನಾರ್ದನ್ ಬೈಕ್ಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಜನಾರ್ದನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದರು. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಜನಾರ್ದನ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ದಾರಿ ಮಧ್ಯೆದಲ್ಲೇ ಜನಾರ್ದನ್ ಮೃತಪಟ್ಟಿದ್ದಾನೆ. ಇದರಿಂದ ಕುಪಿತಗೊಂಡ ಸಂಬಂಧಿಕರು ಮತ್ತು ಗ್ರಾಮಸ್ಥರು ನರೇಶ್ಗೆ ಸೇರಿದ ಜೆಸಿಬಿ ಮತ್ತು ಟ್ರ್ಯಾಕ್ಟರ್ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.