ETV Bharat / bharat

ಘೋರ ದುರಂತ: ಹೆಂಡತಿ ಶವ ಮನೆಗೆ ತರುವಾಗ ನಡೆದ ಅಪಘಾತದಲ್ಲಿ ಪತಿ ದುರ್ಮರಣ

author img

By

Published : Jun 5, 2021, 4:57 AM IST

ಹೆಂಡತಿ ಶವವನ್ನು ಅಂತಿಮ ಸಂಸ್ಕಾರಕ್ಕಾಗಿ ಆ್ಯಂಬುಲೆನ್ಸ್ ಮೂಲಕ ತಮ್ಮ ಊರಿಗೆ ತರುತ್ತಿದ್ದ ವೇಳೆ, ವಾಹನ ನಿಯಂತ್ರಣ ತಪ್ಪಿ ಪಾಟ್ನಾಗರ್ ಬಳಿಯ ಝುಲೆಂಬರ್​ ಬಳಿ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಬಿಪಿನ್ ಮೃತಪಟ್ಟರೆ, ಆ್ಯಂಬುಲೆನ್ಸ್​ ಡ್ರೈವರ್​ ಹಾರಿದ್ದು, ಅಲ್ಲಿಂದ ಪರಾರಿಯಾಗಿದ್ದಾನೆ.

ಹೆಂಡತಿ ಶವ ಮನೆಗೆ ತರುವ ಮೊದಲೇ ಅಪಘಾತದಲ್ಲಿ ಪತಿ ದುರ್ಮರಣ

ಒಡಿಶಾ: ಒಂದೇ ದಿನ ಕುಟುಂಬದಲ್ಲಿ ಎರಡು ದುರಂತ ನಡೆದಿದೆ. ಆಸ್ಪತ್ರೆಯಲ್ಲಿ ಖಾಯಿಲೆಯಿಂದ ಮೃತಪಟ್ಟ ಪತ್ನಿಯನ್ನು ಆ್ಯಂಬುಲೆನ್ಸ್​ನಲ್ಲಿ ಮನೆಗೆ ತರುವ ವೇಳೆ ನಡೆದ ಅಪಘಾತದಲ್ಲಿ ಪತಿಯೂ ಸಾವೀಗೀಡಾಗಿರುವ ದಾರುಣ ಘಟನೆ ಒಡಿಶಾದ ಬೋಲಂಗಿರಿ ಜಿಲ್ಲೆಯ ಪಟ್ನಾಗರ್​ ಪ್ರದೇಶದಲ್ಲಿ ನಡೆದಿದೆ.

ಬಿಪಿನ್ ಸೇತ್​ ಎಂಬಾತನ ಪತ್ನಿ ಬರ್ಲಾ ಆಸ್ಪತ್ರೆಯಲ್ಲಿ ಪ್ಯಾರಾಲಿಸಿಸ್​ಗೆ​ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಅಸು ನೀಗಿದ್ದರು. ಅವರ ಶವವನ್ನು ಅಂತಿಮ ಸಂಸ್ಕಾರಕ್ಕಾಗಿ ಆ್ಯಂಬುಲೆನ್ಸ್ ಮೂಲಕ ತಮ್ಮ ಊರಿಗೆ ತರುತ್ತಿದ್ದ ವೇಳೆ, ವಾಹನ ನಿಯಂತ್ರಣ ತಪ್ಪಿ ಪಾಟ್ನಾಗರ್ ಬಳಿಯ ಝುಲೆಂಬರ್​ ಬಳಿ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಬಿಪಿನ್ ಮೃತಪಟ್ಟರೆ, ಆ್ಯಂಬುಲೆನ್ಸ್​ ಡ್ರೈವರ್​ ಹಾರಿದ್ದು, ಅಲ್ಲಿಂದ ಪರಾರಿಯಾಗಿದ್ದಾನೆ.

ಮಾಹಿತಿ ತಿಳಿದ ಪಟ್ನಾಗರ್ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ವಾಹನವನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. " ಮೃತ ಕುಟಂಬಸ್ಥರು ಘಟನೆ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ಈ ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ. ನಾವು ತಲೆಮರೆಸಿಕೊಂಡಿರುವ ಆ್ಯಂಬುಲೆನ್ಸ್​ ಚಾಲಕನನ್ನು ಆದಷ್ಟು ಬೇಗ ಬಂಧಿಸವ ಪ್ರಯತ್ನದಲ್ಲಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನು ಓದಿ:ಜೇನು ಮಾರುತ್ತಿದ್ದ ಒಂದೇ ಕುಟುಂಬದ ಆರು ಮಂದಿ ಅನುಮಾನಾಸ್ಪದ ಸಾವು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.