ಹೈದರಾಬಾದ್ : ಹೈದರಾಬಾದ್‌ನ ಇಡ್ಲಿ ಪ್ರಿಯರೊಬ್ಬರು ಕಳೆದ ಒಂದು ವರ್ಷದಲ್ಲಿ ಇಡ್ಲಿಗಾಗಿ ಸುಮಾರು 6 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇವರು ತಾವು ಇಡ್ಲಿ ತಿನ್ನಲು, ತಮ್ಮ ಪ್ರಿಯರಿಗೆ ಇಡ್ಲಿ ತಿನ್ನಿಸಲು ಒಂದು ವರ್ಷದಲ್ಲಿ ಇಷ್ಟೊಂದು ಹಣ ಖರ್ಚು ಮಾಡಿದ್ದಾರೆ. ದೇಶದ ಪ್ರಮುಖ ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿ ಗುರುವಾರ ಈ ವಿಶೇಷ ಗ್ರಾಹಕರ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಇಡ್ಲಿ ಪ್ರಿಯರು ಬೆಂಗಳೂರು ಮತ್ತು ಚೆನ್ನೈ ಮುಂತಾದ ನಗರಗಳಿಗೆ ಪ್ರಯಾಣಿಸಿದ್ದು, ಅಲ್ಲಿಂದಲೇ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಮಾಡಿದ ಆರ್ಡರ್‌ಗಳು ಸೇರಿದಂತೆ 8,428 ಪ್ಲೇಟ್ ಇಡ್ಲಿಗಳನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದಾರೆ.
ವಿಶ್ವ ಇಡ್ಲಿ ದಿನದ ಸಂದರ್ಭದಲ್ಲಿ (ಮಾರ್ಚ್ 30), ಸ್ವಿಗ್ಗಿ ತನ್ನ ಮಾರ್ಚ್ 30, 2022 ರಿಂದ ಮಾರ್ಚ್ 25, 2023 ರವರೆಗಿನ ಅವಧಿಯ ಇಡ್ಲಿ ಮಾರಾಟದ ವಿಶೇಷತೆಗಳನ್ನು ಬಿಡುಗಡೆ ಮಾಡಿದೆ. ಇದು ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾದ ಇಡ್ಲಿಯ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಒದಗಿಸುತ್ತದೆ. ಸ್ವಿಗ್ಗಿ ಕಳೆದ 12 ತಿಂಗಳುಗಳಲ್ಲಿ 33 ಮಿಲಿಯನ್ ಪ್ಲೇಟ್ ಇಡ್ಲಿಗಳನ್ನು ಡೆಲಿವರಿ ಮಾಡಿದೆ. ಇದು ಗ್ರಾಹಕರಲ್ಲಿ ಈ ಖಾದ್ಯದ ಅಪಾರ ಜನಪ್ರಿಯತೆಯನ್ನು ಸೂಚಿಸುತ್ತದೆ.
ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಇಡ್ಲಿಗಳನ್ನು ಅತಿ ಹೆಚ್ಚು ಆರ್ಡರ್ ಮಾಡಿದ ಮೊದಲ ಮೂರು ನಗರಗಳಾಗಿವೆ. ಮುಂಬೈ, ಕೊಯಮತ್ತೂರು, ಪುಣೆ, ವೈಜಾಗ್, ದೆಹಲಿ, ಕೋಲ್ಕತ್ತಾ ಮತ್ತು ಕೊಚ್ಚಿ ಇತರ ನಗರಗಳು ಸಹ ಇಡ್ಲಿಗಳ ಮಾರಾಟ ಜೋರಾಗಿದೆ. ಇಡ್ಲಿಗಳನ್ನು ಆರ್ಡರ್ ಮಾಡುವ ಅತ್ಯಂತ ಜನಪ್ರಿಯ ಸಮಯವೆಂದರೆ ಬೆಳಿಗ್ಗೆ 8 ರಿಂದ 10 ರವರೆಗೆ. ಚೆನ್ನೈ, ಹೈದರಾಬಾದ್, ಬೆಂಗಳೂರು, ಕೊಯಮತ್ತೂರು ಮತ್ತು ಮುಂಬೈನ ಗ್ರಾಹಕರು ಊಟದ ಸಮಯದಲ್ಲಿ ಇಡ್ಲಿಗಳನ್ನು ಆರ್ಡರ್ ಮಾಡುತ್ತಾರೆ ಎಂದು ವಿಶ್ಲೇಷಣೆಯು ಬಹಿರಂಗಪಡಿಸಿದೆ.
ಎಲ್ಲಾ ನಗರಗಳಲ್ಲಿ ನಾರ್ಮಲ್ ಇಡ್ಲಿಯೇ ಅತ್ಯಂತ ಜನಪ್ರಿಯವಾದ ಖಾದ್ಯವಾಗಿದೆ. ಎರಡು ನಾರ್ಮಲ್ ಇಡ್ಲಿಗಳನ್ನು ಒಳಗೊಂಡಿರುವ ಒಂದು ಪ್ಲೇಟ್ ಇಡ್ಲಿ ಜನಪ್ರಿಯವಾಗಿದೆ. ರವಾ ಇಡ್ಲಿಯು ಇತರ ಯಾವುದೇ ನಗರಗಳಿಗಿಂತ ಬೆಂಗಳೂರಿನಲ್ಲಿ ಹೆಚ್ಚು ಜನಪ್ರಿಯವಾಗಿದೆ, ಆದರೆ ತುಪ್ಪ/ ನೇಯಿ ಕರಮ್ ಪೋಡಿ ಇಡ್ಲಿಯು ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ನಗರಗಳಲ್ಲಿ ಜನಪ್ರಿಯವಾಗಿದೆ. ತಟ್ಟೆ ಇಡ್ಲಿ ಮತ್ತು ಮಿನಿ ಇಡ್ಲಿಗಳು ಎಲ್ಲಾ ನಗರಗಳಾದ್ಯಂತ ಇಡ್ಲಿ ಆರ್ಡರ್‌ಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತವೆ.
ಇಡ್ಲಿಗಳು ಕೇವಲ ಜನಪ್ರಿಯ ಉಪಹಾರ ಮಾತ್ರವಲ್ಲದೆ ಆರೋಗ್ಯಕರವೂ ಆಗಿವೆ. ಇದು ದಿನದ ಮುಖ್ಯ ಊಟದಲ್ಲಿ ಸ್ಥಾನ ಪಡೆದುಕೊಂಡಿದೆ. ಮಸಾಲಾ ದೋಸೆಯ ನಂತರ ಇಡ್ಲಿಗಳು ಸ್ವಿಗ್ಗಿಯಲ್ಲಿ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಉಪಹಾರ ವಸ್ತುವಾಗಿದೆ ಎಂದು ವಿಶ್ಲೇಷಣೆ ಬಹಿರಂಗಪಡಿಸಿದೆ. ಗ್ರಾಹಕರು ತಮ್ಮ ಇಡ್ಲಿಗಳೊಂದಿಗೆ ಸಾಂಬಾರ್, ತೆಂಗಿನಕಾಯಿ ಚಟ್ನಿ, ಕರಂಪುರಿ, ಮೇದು ವಡಾ, ಸಾಗು, ತುಪ್ಪ, ಕೆಂಪು ಚಟ್ನಿ, ಜೈನ್ ಸಾಂಬಾರ್, ಚಹಾ, ಕಾಫಿ ಮುಂತಾದ ಇತರ ಭಕ್ಷ್ಯಗಳನ್ನು ಆರ್ಡರ್ ಮಾಡುತ್ತಾರೆ ಎಂದು ಸ್ವಿಗ್ಗಿ ಹೇಳಿದೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ನೂತನ ಹೆದ್ದಾರಿ ಎಫೆಕ್ಟ್.. ಇತಿಹಾಸ ಪುಟ ಸೇರುತ್ತಿದೆ ಬಿಡದಿ ಇಡ್ಲಿ