ಚಿತ್ತೂರು(ಆಂಧ್ರಪ್ರದೇಶ): ಕೊರೊನಾದಿಂದ ಚೇತರಿಸಿಕೊಂಡು ಚಿತ್ತೂರು ಜಿಲ್ಲೆಯ ಕುಪ್ಪಂನಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ವ್ಯಕ್ತಿ ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಚಿತ್ತೂರು ಜಿಲ್ಲೆಯ ಗುಡಿಪಲ್ಲೆ ಸಮೀಪದ ಮಿಡ್ಡೂರ್ ಗ್ರಾಮದವರಾದ ಚಂದ್ರಶೇಖರ್ ಮೃತ ವ್ಯಕ್ತಿ. ಇವರು ಹೆಂಡತಿಯೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಕೊರೊನಾ ಸೋಂಕು ಕಾಣಸಿಕೊಂಡಿದ್ದರಿಂದ ಕುಪ್ಪಂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.
ಇದನ್ನುಓದಿ:ಬೆಳಗ್ಗೆ ಸೋಂಕಿತನ ಪತ್ನಿ ಹೈಡ್ರಾಮಾ: ಸಿಎಂ ನಿವಾಸದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ!
ನಂತರ ರೈಲಿನ ಮುಖಾಂತರ ಬೆಂಗಳೂರಿಗೆ ತೆರಳಲು ಯೋಜಿಸಿದ್ದರು. ಆದರೆ ಪ್ಲಾಟ್‌ಫಾರ್ಮ್‌ನಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ ಚಂದ್ರಶೇಖರ್ ತಮ್ಮ ಪತ್ನಿ ಮಡಿಲಲ್ಲೇ ಉಸಿರು ಚೆಲ್ಲಿದ್ದಾರೆ. ಗಂಡನನ್ನು ಕಳೆದುಕೊಂಡ ಪತ್ನಿ ಆಕ್ರಂದನ ದೃಶ್ಯ ಕರುಳು ಹಿಂಡುವಂತಿತ್ತು.