ETV Bharat / bharat

ಸಾವನ್ನಪ್ಪಿದೆ ಎಂದು ಪರಿಶೀಲಿಸಲು ಹೋದ ಉರಗ ರಕ್ಷಕ.. ಆತನ ಪ್ರಾಣವನ್ನೇ ತೆಗೆಯಿತು ವಿಷ ಸರ್ಪ! - Mantralayam latest News

ಕರ್ನೂಲ್​ನ ಮಂತ್ರಾಲಯ ಮಂಡಲದ ಮಾಲಪಲ್ಲಿ ಎಂಬಲ್ಲಿ ಹಾವು ಕಚ್ಚಿ ವ್ಯಕ್ತಿವೋರ್ವ ಸಾವನ್ನಪ್ಪಿದ್ದಾನೆ. ಹಾವು ಸಾವನ್ನಪ್ಪಿದೆ ಎಂದು ಮುಟ್ಟಿ ನೋಡಲು ಹೋದಾಗ ಈ ದುರಂತ ಸಂಭವಿಸಿದೆ.

manthralayam
ಪ್ರಾಣವನ್ನೇ ಕಸಿಯಿತು ಹಾವು
author img

By

Published : Jul 5, 2021, 12:03 PM IST

ಕರ್ನೂಲ್​ (ಮಂತ್ರಾಲಯ): ಇಲ್ಲಿನ ಮಂತ್ರಾಲಯ ಮಂಡಲದ ಮಾಲಪಲ್ಲಿ ಎಂಬಲ್ಲಿ ಯಾರದ್ದೇ ಮನೆಗೆ ಹಾವು ಬಂದರೂ ಸಹ ಈ ಉರಗ ರಕ್ಷಕನನ್ನು ಕರೆದು ಹಾವನ್ನು ರಕ್ಷಣೆ ಮಾಡಲಾಗುತ್ತಿತ್ತು. ಆದರೆ ಇಂದು ಅದೇ ವ್ಯಕ್ತಿ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ.

ರಂಗಸ್ವಾಮಿ ಮೃತ ವ್ಯಕ್ತಿ. ಗ್ರಾಮಕ್ಕೆ ಬಂದ ಹಾವನ್ನು ಹಿಡಿಯಲು ಮುಂದಾದಾಗ ಅದು ಸತ್ತಿದೆ ಎಂದು ಭಾವಿಸಿ, ಮತ್ತೆ ಪರಿಶೀಲನೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಹಠತ್ತಾಗಿ ದಾಳಿ ನಡೆಸಿದ ಹಾವು ರಂಗಸ್ವಾಮಿಯ ಪ್ರಾಣ ತೆಗೆದಿದೆ.

ಘಟನೆ ನಡೆದ ತಕ್ಷಣ ಜನರು ರಂಗಸ್ವಾಮಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ತೆರಳಿದರೂ ಸಹ, ದಾರಿ ಮಧ್ಯೆಯೇ ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.