ETV Bharat / bharat

ಡಿ.28ರಂದು ಮೃತಪಟ್ಟಿದ್ದ ವ್ಯಕ್ತಿಯಲ್ಲಿ ಒಮಿಕ್ರಾನ್​ ದೃಢ.. - Omicron to the man who died of a heart attack

52 ವರ್ಷದ ವ್ಯಕ್ತಿಯೊಬ್ಬರು ಡಿಸೆಂಬರ್ 28 ರಂದು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಸಾವಿನ ನಂತರ ವರದಿ ಬಂದಿದ್ದು. ಆತನಿಗೆ ಒಮಿಕ್ರಾನ್​ ದೃಢಪಟ್ಟಿದೆ.

ಹೃದಯಾಘಾತದಿಂದ ಸತ್ತಿದ್ದ ವ್ಯಕ್ತಿಗೆ ಒಮಿಕ್ರಾನ್​ ದೃಢ

author img

By

Published : Dec 30, 2021, 9:55 PM IST

Updated : Dec 30, 2021, 11:02 PM IST

ಮುಂಬೈ: ನೈಜೀರಿಯಾ ದೇಶದ ಪ್ರಯಾಣದ ಇತಿಹಾಸ ಹೊಂದಿದ್ದ 52 ವರ್ಷದ ವ್ಯಕ್ತಿಯೊಬ್ಬರು ಡಿಸೆಂಬರ್ 28 ರಂದು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು ಎಂದು ಸುದ್ದಿಯಾಗಿತ್ತು. ಈಗ ಮರಣೋತ್ತರ ವರದಿ ಹಾಗೂ ಕೋವಿಡ್​ ವರದಿ ಬಂದಿದ್ದು, ಆತನಿಗೆ ಒಮಿಕ್ರಾನ್​ ಇತ್ತು ಎಂದು ತಿಳಿದುಬಂದಿದೆ. ಈ ಸಂಬಂಧ ಮಹಾರಾಷ್ಟ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ನಾಳೆ ಕರ್ನಾಟಕ ಬಂದ್​ ಇಲ್ಲ: ಸಿಎಂ ಸಂಧಾನ ಸಭೆ ಸಕ್ಸಸ್​

ಬರೋಬ್ಬರಿ 5,368 ಹೊಸ ಕೋವಿಡ್ ಪ್ರಕರಣಗಳು:

ಮಹಾರಾಷ್ಟ್ರದಲ್ಲಿ 5,368 ಹೊಸ ಕೋವಿಡ್ ಪ್ರಕರಣಗಳು (ನಿನ್ನೆಯ ಸಂಖ್ಯೆಗಿಂತ 1,468 ಜಿಗಿತ) ವರದಿಯಾಗಿವೆ. ಇಂದು 1,193 ಜನರು ಚೇತರಿಸಿಕೊಂಡಿದ್ದಾರೆ. ಹಾಗೆ ಇಂದು ಕೊರೊನಾದಿಂದ 22 ಮಂದಿ ಮೃತಪಟ್ಟಿರುವುದು ವರದಿಯಾಗಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 18,217 ಕ್ಕೆ ತಲುಪಿದ್ದು, ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 450 ಕ್ಕೆ ಏರಿದೆ. ರಾಜ್ಯದಲ್ಲಿಂದು ಕೊರೊನಾದ ಇತರೆ 198 ವಿಭಿನ್ನ ಪ್ರಕರಣಗಳು ದಾಖಲಾಗಿವೆ.

Last Updated : Dec 30, 2021, 11:02 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.