ಟಿಕಮ್‌ಗಢ (ಮಧ್ಯಪ್ರದೇಶ): ತಮ್ಮ ಬದುಕಿನ ದೋಣಿ ದಾಟಲು ಹಗಲಿರುಳು ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನ ಸ್ತುತಿಸುವ ಭಕ್ತಕೋಟಿಯೇ ಇದೆ. ಆದರೆ, ಬುಂದೇಲ್‌ಖಂಡ್‌ನ ಟಿಕಮ್‌ಗಢ್ ಜಿಲ್ಲೆಯಲ್ಲೊಬ್ಬ ವ್ಯಕ್ತಿ ವಿಶೇಷವಾಗಿ ರಾಮ ನಾಮ ಬರೆಯುವ ಮೂಲಕ ಭಕ್ತಿಯಲ್ಲಿ ಲೀನರಾಗಿದ್ದಾರೆ. ಇವರು ಕಳೆದ 25 ವರ್ಷಗಳಲ್ಲಿ 8 ಕೋಟಿಗೂ ಹೆಚ್ಚು ಬಾರಿ ರಾಮನ ಹೆಸರನ್ನು ಬರೆದಿದ್ದಾರೆ. ಇಂಥ ಅಪರೂಪದ ಶ್ರೀರಾಮ ಭಕ್ತನ ಹೆಸರು ಮೋಹನ್‌ಲಾಲ್ ಅಹಿರ್ವಾರ್.
![Ramnam mohan baba world record](https://etvbharatimages.akamaized.net/etvbharat/prod-images/18680612_thu3.jpg)
ವಿಶೇಷವೆಂದರೆ, ಇವರು ರಾಮನ ಹೆಸರನ್ನು ನೇರವಾಗಿ ಖಾಲಿ ಕಾಗದದ ಮೇಲೆ ಬರೆದಿಲ್ಲ. ಇದಕ್ಕೆ ಬದಲಾಗಿ ಕಲಾತ್ಮಕವಾಗಿ ಬರೆದಿದ್ದಾರೆ. ಮೋಹನ್‌ಲಾಲ್ ಬಾಬಾಗೆ 65 ವರ್ಷ ವಯಸ್ಸಾಗಿದೆ. ಇಂದಿಗೂ ಶ್ರೀರಾಮನ ನಾಮಸ್ಮರಣೆ ಮಾಡುತ್ತಿದ್ದಾರೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ನೋಂದಾಯಿಸಬೇಕು ಎಂಬ ಬಯಕೆಯೂ ಇವರಿಗಿದೆ.
ದಲಿತ ಸಮುದಾಯದ ಮೋಹನ್‌ಲಾಲ್ ಅಹಿರ್ವಾರ್ ಅವರನ್ನು ಮೋಹನ್‌ಲಾಲ್ ಬಾಬಾ ಎಂದು ಗ್ರಾಮದ ಎಲ್ಲರೂ ಕರೆಯುತ್ತಾರೆ. ಇವರ ಗುರುತೇ ಭಗವಾನ್ ರಾಮ. ವಾಸ್ತವದಲ್ಲಿ ಬಾಬಾ 25 ವರ್ಷಗಳ ಹಿಂದೆ ಕುಂದೇಶ್ವರ ಧಾಮದಲ್ಲಿ ಶಂಕರ ದೇವರ ಮುಂದೆ ಶ್ವೇತಪತ್ರದಲ್ಲಿ ಕೋಟಿಗಟ್ಟಲೆ ರಾಮ ನಾಮ ಬರೆದು ಅಯೋಧ್ಯೆಯ ಇಂಟರ್ನ್ಯಾಷನಲ್ ಬ್ಯಾಂಕ್‌ಗೆ ಠೇವಣಿ ಮಾಡುವ ಪ್ರತಿಜ್ಞೆ ಮಾಡಿದ್ದರಂತೆ. ಅವರು ನಿರ್ಧರಿಸಿದಂತೆ ತಮ್ಮ ಕಾರ್ಯವನ್ನು ಪ್ರಾರಂಭಿಸಿದ್ದರು. ರಾಮ ನಾಮ ಬರೆಯಲು ತೊಡಗಿದರು. ಅಂದಿನಿಂದ ರಾಮನ ಹೆಸರು ಬರೆಯುವುದಲ್ಲೇ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ.
![Ramnam mohan baba world record](https://etvbharatimages.akamaized.net/etvbharat/prod-images/18680612_thu1.jpg)
ಮೋಹನ್‌ಲಾಲ್ ಬಾಬಾ ದೇವರ ಸಂಕಲ್ಪ ಮಾಡಿ ರಾಮನ ನಾಮದ ಪ್ರಯಾಣ ಪ್ರಾರಂಭಿಸಿ, ಹಗಲಿರುಳೆನ್ನದೇ ಒಂದೇ ಕೆಲಸ ಮಾಡಿದ್ದಾರೆ. ಹಲವು ವರ್ಷಗಳ ನಿರಂತರ ರಾಮನಾಮದ ಪಯಣದಲ್ಲಿ ಮೋಹನ್ ಲಾಲ್ ಬಾಬಾ ಇದುವರೆಗೆ 8 ಕೋಟಿ 75 ಸಾವಿರ ರಾಮನಾಮ ಬರೆದಿದ್ದಾರೆ. ಮನೆಯಲ್ಲಿ ಮತ್ತು ಕುಂದೇಶ್ವರ ದೇವಸ್ಥಾನದಲ್ಲಿ ರಾಮನ ಹೆಸರನ್ನು ಕಲಾತ್ಮಕವಾಗಿ ಬರೆಯುತ್ತಾರೆ. ಅವರಿರುವ ಸ್ಥಳಕ್ಕೆ ಅನೇಕ ಜನರು ಸೇರುತ್ತಾರೆ. ಆಗ ಕೂಡ ಬಾಬಾ 500 ರಿಂದ 600 ಬಾರಿ ರಾಮನ ಹೆಸರನ್ನು ಖಾಲಿ ಕಾಗದದ ಮೇಲೆ ಕಲಾತ್ಮಕವಾಗಿ ಬರೆಯುವುದರಲ್ಲಿ ಮಗ್ನರಾಗುತ್ತಾರೆ. ಜನರು ಅವರನ್ನು ಕಾಣಲು ದೂರದೂರುಗಳಿಂದಲೂ ಬರುತ್ತಾರೆ.
ಮೋಹನ್‌ಲಾಲ್ ಬಾಬಾ ಮಾತನಾಡಿ, ''ರಾಮ ನಾಮವನ್ನು ಕಲಾತ್ಮಕವಾಗಿ ಬರೆಯುವ ಅಯೋಧ್ಯೆಯ ಇಂಟರ್ನ್ಯಾಷನಲ್ ಬ್ಯಾಂಕ್‌ನಲ್ಲಿ ಠೇವಣಿ ಮಾಡಿದ್ದೇನೆ. ಇದಕ್ಕಾಗಿ ತಮಗೆ ಮಣಿ ರಾಮದಾಸ್ ಚಾವ್ನಿ ಸೇವಾ ಟ್ರಸ್ಟ್ ಅಯೋಧ್ಯೆಯು 1993ರಲ್ಲಿ ಚಿನ್ನದ ಪದಕ ನೀಡಿ ಗೌರವಿಸಿದೆ ಎಂದರು. ಅಯೋಧ್ಯೆಯ ಅಂತಾರಾಷ್ಟ್ರೀಯ ಸೀತಾರಾಮ್ ನಾಮ್ ಬ್ಯಾಂಕ್ ಕೂಡ ಮೋಹನ್‌ಲಾಲ್ ಬಾಬಾಗೆ ಪುರಾವೆಯಾಗಿ ಪಾಸ್‌ಬುಕ್ ನೀಡಿದ್ದು, ಅದರಲ್ಲಿ ಪ್ರತಿ ವರ್ಷ ಬರೆಯುವ ರಾಮನ ಹೆಸರಿನ ಖಾತೆ ಪುಸ್ತಕವನ್ನು ದಾಖಲಿಸಲಾಗಿದೆ. ಮೋಹನ್‌ಲಾಲ್ ಬಾಬಾ ಅವರನ್ನು ಅಂತಾರಾಷ್ಟ್ರೀಯ ಸೀತಾರಾಮ್ ಬ್ಯಾಂಕ್‌ನ ಸಂಸ್ಥಾಪಕ ಸ್ವಾಮಿ ನೃತ್ಯ ಗೋಪಾಲ್ ದಾಸ್ ಗೌರವಿಸಿದ್ದಾರೆ.
ಇದನ್ನೂ ಓದಿ: NIRF ranking: ಬೆಂಗಳೂರಿನ ಐಐಎಸ್ಸಿಗೆ ದೇಶದ ನಂಬರ್ 1 ವಿವಿ ಹೆಗ್ಗಳಿಕೆ