ETV Bharat / bharat

ಈ ಬೋರ್‌ವೆಲ್‌ನಿಂದ ಒಂದು ಲೋಟ ನೀರು ಪಡೆಯಲಾಗದು! ಜನರಿಂದ ಇಲಾಖೆಗೆ ಛೀಮಾರಿ

author img

By

Published : Apr 10, 2022, 4:52 PM IST

ಈ ಕೈಪಂಪು ಆದಿವಾಸಿಗಳ ಪ್ರಾಬಲ್ಯವಿರುವ ಮಧ್ಯಪ್ರದೇಶದ ಕುಕ್ಷಿಯ ಕೊಟ್ಬಾ ಪಂಚಾಯತ್‌ ಎಂಬಲ್ಲಿದ್ದು, ಜನರ ಸಂಕಷ್ಟಕ್ಕೆ ಕನ್ನಡಿ ಹಿಡಿಯುತ್ತಿದೆ. ಈ ಕುರಿತು ಕಾಂಗ್ರೆಸ್‌ ಮುಖಂಡರೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ.

ಅವೈಜ್ಞಾನಿಕವಾಗಿ ಕೈಪಂಪು ನಿರ್ಮಾಣ ಮಾಡಿದ ಇಲಾಖೆ

ಧಾರ್(ಮಧ್ಯಪ್ರದೇಶ): ಇಲ್ಲಿರುವ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದಂತು ಸತ್ಯ. ಸಾಮಾಜಿಕ ಜಾಲತಾಣದಲ್ಲಿ ಕೆಲವು ಹಾಸ್ಯಾಸ್ಪದ ವಿಡಿಯೋಗಳು ರಾಜಕೀಯ ನಾಯಕರ ಅಭಿವೃದ್ಧಿ ಕಾರ್ಯಗಳನ್ನು ಅಣಕ ಮಾಡುವಂತಿವೆ. ಆದರೆ, ಅವೆಲ್ಲವನ್ನೂ ಮೀರಿಸುವಂತಿಗೆ ಈ ವಿಡಿಯೋ.

ಸರ್ಕಾರದ ಪಿಎಚ್​ಇ ಇಲಾಖೆ ವಿಚಿತ್ರವಾಗಿ ಹ್ಯಾಂಡ್ ಪಂಪ್​(ಬೋರ್‌ವೆಲ್‌) ನಿರ್ಮಿಸಿ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಕೈ ಪಂಪ್ ಅಂದ್ರೆ ಸಾಮಾನ್ಯವಾಗಿ ನೆಲದಿಂದ ಒಂದಷ್ಟು ಅಡಿಗಳವರೆಗೆ ಎತ್ತರದಲ್ಲಿರಬೇಕು. ಇದಕ್ಕೆ ಕಾರಣ, ನೀರು ಪೈಪ್ ​ಮೂಲಕ ಹೊರಬಂದಾಗ ಅದನ್ನು ತುಂಬಿಸಿಕೊಳ್ಳಲು ಸ್ವಲ್ಪಮಟ್ಟಿನ ಸ್ಥಳಾವಕಾಶ ಇರಬೇಕು. ಆದರೆ, ಈ ಕೈಪಂಪಿನ ಸ್ಥಳದಲ್ಲಿ ಅದ್ಯಾವುದೂ ಇಲ್ಲ. ಅಷ್ಟೆಲ್ಲಾ ಏಕೆ? ಕೇವಲ ಒಂದು ಲೋಟ ಸಹ ಇಡಲು ಸಾಧ್ಯವಿಲ್ಲದ ಹಾಗಿದೆ.

ಇದನ್ನೂ ಓದಿ: ಚಂದ್ರು ಹತ್ಯೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ : ಸಿಎಂ ಬೊಮ್ಮಾಯಿ

ಇಂಥ ಕೈಪಂಪು ಇರುವುದು ಆದಿವಾಸಿಗಳ ಪ್ರಾಬಲ್ಯವಿರುವ ಕುಕ್ಷಿಯ ಕೊಟ್ಬಾ ಪಂಚಾಯತ್‌ನಲ್ಲಿ. ಹೀಗಿದ್ದಾಗ ನೀರು ತುಂಬಿಸಿಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಗ್ರಾಮಸ್ಥರದ್ದು. ಈ ಕುರಿತು ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಸುರೇಂದ್ರ ಸಿಂಗ್ ಬಾಘೇಲ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಅವರೇ ಹ್ಯಾಂಡ್ ಪಂಪ್‌ನಿಂದ ಗ್ಲಾಸ್​ಗೆ ನೀರು ತುಂಬಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

  • कल कोटबा पंचायत भ्रमण के दौरान PHE विभाग का नया कारनामा सामने आया। आदिवासी बाहुल क्षेत्र में इस प्रकार की गड़बड़ी करना आदिवासियों का अपमान हे। इस हेडपंप से एक ग्लास पानी भरना भी मुश्किल है
    माननीय मंत्री ब्रजेंद्र सिंह यादव जी मामले का संज्ञान ले। @Raobrijendra1@ChouhanShivraj pic.twitter.com/vi9JzvaRRB

    — Surendra Singh Baghel (@surendrasbaghel) April 8, 2022 " class="align-text-top noRightClick twitterSection" data=" ">

ಕಾಂಗ್ರೆಸ್‌ ಶಾಸಕ ಮಾತನಾಡಿ, ಈ ಕೈ ಪಂಪ್​ನಿಂದ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ. ಮಹಿಳೆಯರು ನೀರಿಗಾಗಿ ಹರಸಾಹಸಪಡಬೇಕಾಗಿದೆ. ಕೈಪಂಪು ನೆಲದಿಂದ ಸ್ವಲ್ಪವಷ್ಟೇ ಮೇಲಿದೆ!. ಜನರು ಚಿಕ್ಕ ಪಾತ್ರೆಗಳಲ್ಲಿ ನೀರು ತುಂಬಿಸಿ ನಂತರ ದೊಡ್ಡ ಡಬ್ಬಗಳಲ್ಲಿ ಸುರಿಯುತ್ತಾರೆ. ಈ ಸಮಯದಲ್ಲಿ, ಅರ್ಧದಷ್ಟು ನೀರು ನೆಲದ ಮೇಲೆ ಬೀಳುತ್ತದೆ ಎಂದಿದ್ದಾರೆ.

'ಗಿರಿಜನರಿಗೆ ಅಪಮಾನ': ಈ ಕೆಲಸ ಗಿರಿಜನರಿಗೆ ಮಾಡಿದ ಅವಮಾನ. ಇಲಾಖೆ ಕೇವಲ ಔಪಚಾರಿಕವಾಗಿ ಕೆಲಸ ಮಾಡುತ್ತಿದೆ. ಕೈಪಂಪು ನಿರ್ಮಿಸಿರುವ ರೀತಿ ನೋಡಿದರೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿಯೇ ಇಲ್ಲ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪಿಎಚ್‌ಇ ಇಲಾಖೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುರೇಂದ್ರ ಸಿಂಗ್ ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.