ETV Bharat / bharat

ರೈತರ ಆಂದೋಲನದ ವೇಳೆ ಯುವಕನಿಗೆ ಮದ್ಯ ಕುಡಿಸಿ ಜೀವಂತ ಸುಟ್ಟರು!

author img

By

Published : Jun 17, 2021, 9:27 PM IST

ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಯುವಕನೊಬ್ಬನಿಗೆ ಜೀವಂತವಾಗಿ ಸುಟ್ಟಿರುವ ಘಟನೆ ನಡೆದಿದ್ದು, ಇದೀಗ ರೈತರ ವಿರುದ್ಧ ಯುವಕನ ಕುಟುಂಬಸ್ಥರು ಅನೇಕ ರೀತಿಯ ಆರೋಪ ಮಾಡ್ತಿದ್ದಾರೆ.

man burnt alive in farmers protest
man burnt alive in farmers protest

ಬಹದ್ದೂರ್‌ಗಢ(ಹರಿಯಾಣ): ರೈತರ ಆಂದೋಲನದ ವೇಳೆ ಯುವಕನೊಬ್ಬನಿಗೆ ಮದ್ಯ ಕುಡಿಸಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಹರಿಯಾಣದ ಬಹದ್ದೂರ್​ಗಢನಲ್ಲಿ ನಡೆದಿದೆ. ಬುಧವಾರ ಸಂಜೆ ಈ ಘಟನೆ ನಡೆದಿದೆ. ಮುಖೇಶ್​ ಎಂಬ ಯುವಕ ನಾಲ್ವರೊಂದಿಗೆ ಸೇರಿ ಮದ್ಯ ಸೇವನೆ ಮಾಡಿದ್ದು, ಇದಾದ ಬಳಿಕ ಅವರವರ ಮಧ್ಯೆ ವಾಗ್ವಾದ ನಡೆದಿದೆ. ಇದೇ ವೇಳೆ ಆತನಿಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.

ಹರಿಯಾಣದ ಬಹದ್ದೂರ್​ಗಢನಲ್ಲಿ ಕಳೆದ ಕೆಲ ದಿನಗಳಿಂದ ರೈತರ ಆಂದೋಲನ ನಡೆಯುತ್ತಿದ್ದು, ಈ ವೇಳೆ ಇಂತಹ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನ ಕಸರ್​ ಗ್ರಾಮದ ನಿವಾಸಿಯಾಗಿರುವ ಮುಖೇಶ್​ ಎಂದು ಗುರುತಿಸಲಾಗಿದೆ. ಆತನಿಗೆ ಬೆಂಕಿ ಹಚ್ಚಿದ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಶೇ.90ರಷ್ಟು ಸುಟ್ಟು ಹೋದ ಕಾರಣ ಚಿಕಿತ್ಸೆ ಫಲಕಾರಿಯಾಗಿಲ್ಲ. ಮುಖೇಶ್​ ಸಾವಿನ ನಂತರ ಆತನ ಸಂಬಂಧಿಕರು ಮತ್ತು ಗ್ರಾಮಸ್ಥರು ಆಂದೋಲನ ನಡೆಸುತ್ತಿರುವ ರೈತರ ವಿರುದ್ಧ ಅನೇಕ ರೀತಿಯ ಆರೋಪ ಮಾಡಿದ್ದಾರೆ.

ಇದನ್ನೂ ಓದಿರಿ: ಆರೋಗ್ಯ ಇಲಾಖೆ ಎಡವಟ್ಟು: 15 ನಿಮಿಷದಲ್ಲೇ ಎರಡು ವ್ಯಾಕ್ಸಿನ್​ ಪಡೆದ ಮಹಿಳೆ

ಮುಖೇಶ್​ನ ಮೃತದೇಹವನ್ನ ಪಡೆದುಕೊಳ್ಳಲು ಕುಟುಂಬಸ್ಥರು ಹಿಂದೇಟು ಹಾಕಿದ್ದು, ತಮಗೆ ಸರ್ಕಾರಿ ಉದ್ಯೋಗದ ಜತೆಗೆ ಭದ್ರತೆ ನೀಡುವಂತೆ ಅವರು ಕೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.