ನವದೆಹಲಿ: ಪಶ್ಚಿಮ ದೆಹಲಿಯ ರಾಜೌರಿ ಗಾರ್ಡನ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬನಿಗೆ ಸ್ಥಳೀಯರೇ ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ರಘುಬೀರ್ ನಗರ ನಿವಾಸಿ ರೂಪೇಶ್(32) ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ರಘುಬೀರ್ ನಗರದಲ್ಲಿ ಸೋಮವಾರ ರಾತ್ರಿ 11.45ರ ಸುಮಾರಿಗೆ ಗಲಾಟೆ ನಡೆದಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಜಿಜಿಎಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ಗಾಯಗೊಂಡವರಲ್ಲಿ ರೂಪೇಶ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ರಾತ್ರಿ 11ರ ಸುಮಾರಿಗೆ ತರುಣ್ ಮತ್ತು ಅವರ ಪತ್ನಿ ಪ್ರಿಯಾಂಕಾ ಎಂಬುವರ ನಡುವೆ ಜಗಳ ನಡೆದಿದೆ ಎಂದು ಮೃತರ ಸಹೋದರ ಮುಖೇಶ್ ಹೇಳಿದ್ದಾರೆ. ಬಳಿಕ, ತರುಣ್ ಅವರ ತಂದೆ ರವೀಂದರ್, ತಾಯಿ ಅನಿತಾ, ಸಹೋದರ ಪುನೀತ್ ಮತ್ತು ಸೋದರಸಂಬಂಧಿ ದೀಪಾ ಗಲಾಟೆ ನಡೆಯುತ್ತಿದ್ದಾಗ ಸ್ಥಳಕ್ಕೆ ಬಂದು ಮತ್ತಷ್ಟು ಗಲಾಟೆ ಮಾಡಿದ್ದಾರೆ. ಈ ವೇಳೆ ಗಲಾಟೆ ತಡೆಯಲು ಹೋದ ರೂಪೇಶ್ ಮತ್ತು ಆತನ ತಾಯಿಗೆ ತರುಣ್ ಕುಟುಂಬಸ್ಥರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇದನ್ನು ಓದಿ: ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ: ಮುಖ್ಯಮಂತ್ರಿಗೆ ಸಚಿವರು, ಶಾಸಕರಿಂದ ಅಭಿನಂದನೆ
ರೂಪೇಶ್, ಅವರ ತಂದೆ ರಾಜ್‌ಬಹಾದ್ದೂರ್ ಮತ್ತು ತಾಯಿಯ ಚಿಕ್ಕಪ್ಪ ರಾಜ್‌ಬೀರ್ ಆರೋಪಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ದೀಪಾ, ಪುನೀತ್ ಮತ್ತು ರವೀಂದರ್ ತಮ್ಮ ಸ್ನೇಹಿತರಾದ ನಿತಿನ್, ಕಾಜು, ಸುಮ್ಮಿ ಮತ್ತು ಗೌರವ್ ಎಂಬವರನ್ನು ಕರೆದು, ಮುಖೇಶ್, ರೂಪೇಶ್ ಮತ್ತು ಮೃತರ ಕೆಲವು ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಮುಖೇಶ್ ಅವರ ತಲೆ ಮತ್ತು ಬಲಗೈಗೆ ಗಾಯಗಳಾಗಿವೆ. ಅವರ ತಂದೆ, ತಾಯಿ, ಚಿಕ್ಕಪ್ಪ ಮತ್ತು ಅತ್ತಿಗೆಗೆ ಕೂಡ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜೌರಿ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರವೀಂದರ್ (48), ಅವರ ಪತ್ನಿ ಅನಿತಾ (45), ಮಗ ತರುಣ್ (23), ತರುಣ್ ಅವರ ಪತ್ನಿ ಪ್ರಿಯಾಂಕಾ (21), ದೀಪಾ (30) ಮತ್ತು ಗೌರವ್ (19) ) ಬಂಧಿಸಲಾಗಿದೆ.