ಗಾಜಿಯಾಬಾದ್ (ಯುಪಿ) : ಮೋಸ ಮಾಡುತ್ತಿದ್ದ ಕುಟುಂಬವೊಂದು ಪೊಲೀಸರಿಗೆ ಗಾಜಿಯಾಬಾದ್‌ನಲ್ಲಿ ಸಿಕ್ಕಿಬಿದ್ದಿದೆ. ಈ ಘಟನೆಯಲ್ಲಿ ಗಂಡ, ಹೆಂಡತಿ, ಮಗ, ಮಗಳು ಎಲ್ಲರೂ ಭಾಗಿಯಾಗಿದ್ದಾರೆ. ಉಳಿದವರ ಬಂಧನ ಪ್ರಕ್ರಿಯೆ ಮುಂದುವರೆದಿದೆ.
100 ಕೋಟಿ ರೂ. ಮೋಸದ ಪ್ರಕರಣದಲ್ಲಿ ಈ ಬಂಧನಗಳು ನಡೆಯುತ್ತಿವೆ. ಆಘಾತಕಾರಿ ಸಂಗತಿಯೆಂದರೆ ಈ ಮೋಸದ ಕುಟುಂಬವು 11 ಮಹಡಿಯ ಕಟ್ಟಡದಲ್ಲಿ ಇಲ್ಲದೇ ಇರುವ 15-16 ಮಹಡಿಯನ್ನು ಮೋಸದಿಂದ ಮಾರಾಟ ಮಾಡಿದೆ.
ಘಟನೆ ವಿವರ.. ಭಾನುವಾರ ಪ್ರತೀಕ್ ಜೈನ್ ಮತ್ತು ಅಕ್ಷಯ್ ಜೈನ್ ಎಂಬುವರನ್ನು ಗಾಜಿಯಾಬಾದ್ ನ ನಂದ್ ಗ್ರಾಮ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಅಕ್ಷಯ್ ಜೈನ್ ಅವರ ತಂದೆ ರಾಜಕುಮಾರ್ ಜೈನ್ ಮತ್ತು ಅವರ ಪತ್ನಿ ಸೇರಿದಂತೆ ಇಡೀ ಕುಟುಂಬವನ್ನು ಕಳೆದ ತಿಂಗಳು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಮಾರ್ಚ್‌ನಿಂದ ಜೂನ್‌ವರೆಗೂ ಹೆಚ್ಚು ತಾಪಮಾನ : ಬಿಸಿಲ ಬೇಗೆಯಿಂದ ಪಾರಾಗಲು ಇಷ್ಟು ಮಾಡಿ ಸಾಕು..
ನೂರಾರು ಜನರನ್ನು ರಾಜ್‌ಕುಮಾರ್ ಜೈನ್ ಮತ್ತು ಅವರ ಕುಟುಂಬ ಸದಸ್ಯರು ನಕಲಿ ಹೆಸರಿನ ಕಂಪನಿ ನಿರ್ಮಾಣ ಮಾಡಿಕೊಂಡು ವಂಚಿಸಿದ್ದಾರೆ. ಮನೆ ಮಾರಾಟದ ಹೆಸರಲ್ಲಿ ಈ ಕೃತ್ಯ ಎಸಗಿದ್ದು, ಬ್ಯಾಂಕ್ ಉದ್ಯೋಗಿಗಳು ಸಹ ಇದರಲ್ಲಿ ಭಾಗಿಯಾಗಿ ನಕಲಿ ಸಾಲ ಒದಗಿಸಿ ಬ್ಯಾಂಕ್ ಗಳಿಗೂ ವಂಚನೆ ಮಾಡಿದ್ದಾರಂತೆ. ಈ ನಡುವೆ ಬ್ಯಾಂಕ್‌ನ ಮಾಜಿ ಮ್ಯಾನೇಜರ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ನಿರಂತರ ಬಂಧನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಇಂದು ಇಬ್ಬರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ನಕಲಿ ಕಂಪನಿಗಳನ್ನು ತೆರೆದು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತಂತೆ. ಆರೋಪಿಗಳು ತಮ್ಮ ಕಚೇರಿಗಳನ್ನು ಐಷಾರಾಮಿಯಾಗಿಸಿಕೊಂಡು, ಜನರನ್ನು ಅಲ್ಲಿಗೆ ಕರೆಸಿ ಮೋಸಗೊಳಿಸುತ್ತಿದ್ದರು ಎನ್ನಲಾಗ್ತಿದೆ. ಈಗ ಅದೇ ಕಚೇರಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದು ಈಗ ಎಲ್ಲರೂ ಕಂಬಿ ಹಿಂದೆ ಕುಳಿತುಕೊಳ್ಳುವಂತಾಗಿದೆ. ಪ್ರಮುಖ ವಿಷಯ ಎಂದರೆ ಈ ಕಿರಾತಕರು ಒಂದೇ ಮನೆಯನ್ನು ಹಲವು ಬಾರಿ ಮಾರಾಟ ಮಾಡಿದ್ದರಂತೆ.