ವಾರಾಣಸಿ(ಉತ್ತರ ಪ್ರದೇಶ): ಫೆ.2 ರಂದು ಮುಂಬೈನ ಮುಲುಂಡ್ ಪ್ರದೇಶದ ಬ್ಯಾಂಕ್‌ನಿಂದ 70 ಲಕ್ಷ ರೂ.ಲೂಟಿ ಮಾಡಿದ ನಾಲ್ವರು ಆರೋಪಿಗಳಲ್ಲಿ ಓರ್ವನನ್ನು ಯುಪಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದೆ.
ಸನ್ನಿ ಭಾರದ್ವಾಜ್ ಬಂಧಿತ ಆರೋಪಿ. ಮೂಲಗಳ ಪ್ರಕಾರ ಎಸ್‌ಟಿಎಫ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಸಿಂಗ್ ನೇತೃತ್ವದ ಎಸ್‌ಟಿಎಫ್ ತಂಡ ಉತ್ತರ ಪ್ರದೇಶ ಕಂಟೋನ್ಮೆಂಟ್ ಪ್ರದೇಶದ ಶಾಲೆಯೊಂದರ ಬಳಿ ಆರೋಪಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಭಾರದ್ವಾಜ್ ಜೌನ್‌ಪುರ ಮೂಲದವನಾಗಿದ್ದು, ಜೀವನೋಪಾಯಕ್ಕಾಗಿ ಹಲವಾರು ವರ್ಷಗಳಿಂದ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದ. ಈ ವೇಳೆ, ಜೌನ್‌ಪುರದ ಮೋನು ಸಿಂಗ್ನ ಪರಿಚಯವಾಗಿತ್ತು. ಈ ಇಬ್ಬರು ಸ್ಥಳೀಯರಾದ ನೀಲೇಶ್ ಮುರ್ವೆ ಮತ್ತು ನಿತೇಶ್ ಅವರ ಸಹಾಯದಿಂದ ಬ್ಯಾಂಕ್ ಲೂಟಿ ಮಾಡುವ ಯೋಜನೆ ರೂಪಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಟ್ವಿಟರ್ನಲ್ಲಿ ಕೊಲೆ ಬೆದರಿಕೆ.. ಎಫ್ಐಆರ್ ದಾಖಲು
ಅವರ ಯೋಜನೆಯಂತೆ ಫೆ.2 ರಂದು 70 ಲಕ್ಷ ರೂ. ನಗದು ಲೂಟಿ ಮಾಡಿದ್ದಾರೆ. ಸ್ಥಳದಿಂದ ಪರಾರಿಯಾಗುವ ಮೊದಲು ಭಾರದ್ವಾಜ್ ಮೋನುಗೆ 7 ಲಕ್ಷ ರೂ. ನೀಡಿದ್ದನಂತೆ. ಬಳಿಕ ಮುಂಬೈ ಬಿಟ್ಟು ವಾರಾಣಸಿಯಲ್ಲಿ ಆಶ್ರಯ ಪಡೆದಿದ್ದ ಎನ್ನಲಾಗ್ತಿದೆ. ಸದ್ಯ ಬಂಧಿತನಿಂದ 5 ಸಾವಿರ ರೂ. ನಗದು ಹಾಗೂ ಮೊಬೈಲ್ ಫೋನ್ನನ್ನು ವಶಕ್ಕೆ ಪಡೆಯಲಾಗಿದೆ.