ETV Bharat / bharat

ಗಲಭೆ ಪ್ರಚೋದಿಸುತ್ತಿರುವ ಅಮಿತ್ ಶಾರನ್ನ ನಿಯಂತ್ರಿಸಿ: ಪ್ರಧಾನಿಗೆ ದೀದಿ ಮನವಿ

author img

By

Published : Apr 10, 2021, 11:37 AM IST

ಗೃಹ ಸಚಿವ ಅಮಿತ್ ಶಾ ಪೊಲೀಸರನ್ನು ಅನೈತಿಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು "ಖರೀದಿಸಲಾಗಿದೆ" ಮತ್ತು ಅವರು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಕೇಸರಿ ಪಕ್ಷಕ್ಕೆ ಮತ ಚಲಾಯಿಸುವಂತೆ ಜನರನ್ನು ಕೇಳುತ್ತಿದ್ದಾರೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

Mamata urges PM to control over Amit Shah
ಪ್ರಧಾನಿಗೆ ದೀದಿ ಮನವಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಹಿಂಸಾಚಾರ ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಪೊಲೀಸರನ್ನು ಅನೈತಿಕ ಕೃತ್ಯಗಳಿಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿಗೆ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ. ಟಿಎಂಸಿ ಅಭ್ಯರ್ಥಿ ಮೇಲೆ ನಡೆದ ದಾಳಿಯ ಹಿಂದೆ ಅಮಿತ್​ ಶಾ ಇದ್ದಾರೆ ಎಂದು ಆರೋಪಿಸಿದ್ದಾರೆ. ಅಂತಹ 'ಗೂಂಡಾ' (ದರೋಡೆಕೋರ), 'ದಂಗಬಾಜ್' (ದಂಗೆಕೋರ) ಗೃಹ ಸಚಿವರನ್ನು ನನ್ನ ಇಡೀ ಜೀವನದಲ್ಲಿ ನಾನು ನೋಡಿಲ್ಲ. ಅಮಿತ್ ಶಾ ಹುಲಿಗಿಂತ ಅಪಾಯಕಾರಿ. ಜನರು ಅವರೊಂದಿಗೆ ಮಾತನಾಡಲು ಭಯಪಡುತ್ತಾರೆ. ಮೊದಲು ಅಮಿತ್ ಶಾ ಅವರನ್ನು ನಿಯಂತ್ರಿಸುವಂತೆ ನಾನು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸುತ್ತೇನೆ. ಅವರು ಇಲ್ಲಿ ಗಲಭೆಗಳನ್ನು ಪ್ರಚೋದಿಸುತ್ತಿದ್ದಾರೆ "ಎಂದು ಬ್ಯಾನರ್ಜಿ ಪುರ್ಬಾ ಬರ್ಧಮನ್ ಜಿಲ್ಲೆಯ ಮೇಮರಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡುತ್ತಾ ಹೇಳಿದರು.

"ಎಲ್ಲಾ ರೀತಿಯ ಅನೈತಿಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಿ" ಎಂದು ಅಮಿತ್​ ಶಾ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು "ಬಂಗಾಳದ ಗೌರವವನ್ನು ರಕ್ಷಿಸುವ" ಪ್ರಯತ್ನವೆಂದು ಬಣ್ಣಿಸಿದರು. ಶಾ ಅವರ ಆಜ್ಞೆಯ ಮೇರೆಗೆ ಕೇಂದ್ರ ಪೊಲೀಸ್ ಪಡೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬ್ಯಾನರ್ಜಿ ಈ ಹಿಂದೆ ಆರೋಪಿಸಿದ್ದರು.

"ಈ ಚುನಾವಣೆಯು ಜನರು ಬಂಗಾಳವನ್ನು ಮತ್ತೊಂದು ಗುಜರಾತ್ ಆಗಿ ಪರಿವರ್ತಿಸುವುದನ್ನು ತಡೆಯುವುದಾಗಿದೆ. ಈ ಚುನಾವಣೆಯು ಬಂಗಾಳದ ಮಹಿಳೆಯರು, ತಾಯಂದಿರು ಮತ್ತು ಸಹೋದರಿಯರನ್ನು ರಕ್ಷಿಸಲು, ನಮ್ಮ ಭೂಮಿಯ ಯುವಕರನ್ನು ರಕ್ಷಿಸಲು" ಎಂದು ಅವರು ಹೇಳಿದರು. ಉತ್ತರ ಬಂಗಾಳದ ಮಾತಾಭಂಗ ಸ್ಥಾನಕ್ಕೆ ಟಿಎಂಸಿಯಿಂದ ನಾಮನಿರ್ದೇಶಿತರಾಗಿದ್ದ ಗಿರಿಂದ್ರಾ ನಾಥ್ ಬರ್ಮನ್ ಅವರ ಮೇಲೆ ದಾಳಿ ನಡೆಸಲು ಯೋಜಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿರುದ್ಧ ಮಮತಾ ನೇರವಾಗಿ ಆರೋಪಿಸಿದ್ರು.

ನಾನು ಈ ಬಗ್ಗೆ ಏತಕ್ಕೆ ಮಾತನಾಡುತ್ತಿದ್ದೇನೆ ಎಂದರೆ ನೀವು ನನ್ನನ್ನು ಕೊಲ್ಲಲು ಯೋಜಿಸುತ್ತೀರಿ ಎಂದು ನನಗೆ ತಿಳಿದಿದೆ. ನೀವು ನನ್ನ ಕಾಲಿಗೆ ಗಾಯ ಮಾಡಿದ್ದೀರಿ. ಆದರೆ ನಾನು ಅದನ್ನು ಲೆಕ್ಕಿಸುವುದಿಲ್ಲ. ನನ್ನ ಜೀವನದ ಕೊನೆಯ ದಿನದವರೆಗೂ ನಾನು ಹುಲಿಯಂತೆ ಜೀವನವನ್ನು ನಡೆಸುತ್ತೇನೆ ," ಎಂದು ಮಮತಾ ಬ್ಯಾನರ್ಜಿ ಗುಡುಗಿದ್ರು.

ಹಿರಿಯ ಪೊಲೀಸ್ ಅಧಿಕಾರಿಗಳನ್ನು "ಖರೀದಿಸಲಾಗಿದೆ" ಮತ್ತು ಅವರು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಕೇಸರಿ ಪಕ್ಷಕ್ಕೆ ಮತ ಚಲಾಯಿಸುವಂತೆ ಜನರನ್ನು ಕೇಳುತ್ತಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅಮಿತ್​ ಶಾರನ್ನು ನಿಯಂತ್ರಿಸಬೇಕು ಎಂದು ಬ್ಯಾನರ್ಜಿ ಆಗ್ರಹಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.