ETV Bharat / bharat

ಪಶ್ಚಿಮ ಬಂಗಾಳ : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೇವಲ 50 ಮಂದಿಗೆ ಅವಕಾಶ

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕೋವಿಡ್​ ಪರಿಸ್ಥಿತಿಯಲ್ಲಿ ಗರಿಷ್ಠ 50 ಜನರೊಂದಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿದ್ದೇವೆ..

mamatha
mamatha
author img

By

Published : May 10, 2021, 7:48 PM IST

ಕೋಲ್ಕತಾ/ಪಶ್ಚಿಮಬಂಗಾಳ : ಈದ್​ ಹಿನ್ನೆಲೆ ಯಾವುದೇ ಧಾರ್ಮಿಕ ಸಭೆ-ಸಮಾರಂಭಗಳನ್ನು ನಡೆಸಲು 50ಕ್ಕಿಂತ ಹೆಚ್ಚು ಜನರು ಸೇರದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಈ ವರ್ಷ ಕೋಲ್ಕತಾದ ರೆಡ್ ರಸ್ತೆಯಲ್ಲಿ ಈದ್ ಪ್ರಾರ್ಥನೆ ಮತ್ತು ಸಭೆ ನಡೆಯುವುದಿಲ್ಲ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕೋವಿಡ್​ ಪರಿಸ್ಥಿತಿಯಲ್ಲಿ ಗರಿಷ್ಠ 50 ಜನರೊಂದಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿದ್ದೇವೆ.

ಮುಸ್ಲಿಂ ಮುಖಂಡರು ನಿರ್ಧರಿಸಿದಂತೆ ಯಾವುದೇ ಈದ್ ಪ್ರಾರ್ಥನೆಗಳು ಮತ್ತು ಕೂಟಗಳು ರೆಡ್ ರೋಡ್​ನಲ್ಲಿ ಇರುವುದಿಲ್ಲ. ಅಜಾನ್‌ನಂತಹ ಯಾವುದೇ ದೊಡ್ಡ ಕೂಟಗಳನ್ನು ನಡೆಸಬಾರದು ಎಂದು ನಾನು ವಿನಂತಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್​ ಹರಡುವುದನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.