ETV Bharat / bharat

ಎಗ್ರಾ ಸ್ಫೋಟ ಪ್ರಕರಣ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ, ಸಿಐಡಿ ತನಿಖೆಗೆ ಸಿಎಂ ಮಮತಾ ಆದೇಶ

ಪೂರ್ವ ಮಿಡ್ನಾಪುರದ ಎಗ್ರಾದ ಖಾದಿಕುಲ್ ಗ್ರಾಮದಲ್ಲಿ ಮಂಗಳವಾರ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಸಾವನ್ನಪ್ಪಿದರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.

Mamata Banerjee
ಸಿಐಡಿ ತನಿಖೆಗೆ ಸಿಎಂ ಮಮತಾ ಆದೇಶ
author img

By

Published : May 16, 2023, 8:12 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ''ಪೂರ್ವ ಮಿಡ್ನಾಪುರದ ಎಗ್ರಾದ ಖಾದಿಕುಲ್ ಗ್ರಾಮದಲ್ಲಿ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ಸಂಭವಿಸಿದೆ. ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಈ ಘಟನೆಯಲ್ಲಿ ಏಳು ಜನರು ಗಾಯಗೊಂಡಿದ್ದಾರೆ'' ಎಂದು ಬಣ್ಣದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.

ಎಗ್ರಾ ಸ್ಫೋಟ ಪ್ರಕರಣ- ತನಿಖೆ ಸಿಐಡಿಗೆ: ಎಗ್ರಾ ಸ್ಫೋಟ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಲಾಗಿದೆ ಎಂದು ಸಿಎಂ ಹೇಳಿದರು. ಆದರೆ, ಪ್ರತಿಪಕ್ಷಗಳ ಬೇಡಿಕೆಯಂತೆ ಸ್ಫೋಟದ ಬಗ್ಗೆ ಎನ್‌ಐಎ ತನಿಖೆ ನಡೆಸಲು ರಾಜ್ಯದ ಅಭ್ಯಂತರವಿಲ್ಲ ಎಂದ ಅವರು, ಮಂಗವಾರ ಮುಖ್ಯಮಂತ್ರಿಗಳು, ‘‘ಮೃತರ ಕುಟುಂಬಕ್ಕೆ 2.5 ಲಕ್ಷ ರೂ., ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಘಟನೆಯಲ್ಲಿ ಪೊಲೀಸರ ಪಾತ್ರದ ಬಗ್ಗೆ ಈಗಾಗಲೇ ಶಂಕೆ ವ್ಯಕ್ತವಾಗಿದೆ. ಕರ್ತವ್ಯ ನಿರ್ವಹಿಸದ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಡಕ್​ ಆಗಿ ತಿಳಿಸಿ, ಸ್ಥಳೀಯ ಪೊಲೀಸರ ಪಾತ್ರದ ಬಗ್ಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗಮನಿಸಬೇಕಾದ ಸಂಗತಿಯೆಂದರೆ, ಈ ದಿನ ಮೊದಲು, ಸ್ಫೋಟದಲ್ಲಿ ಸತ್ತವರ ಸಂಖ್ಯೆ ಮೂರು ಎಂದು ಜಿಲ್ಲಾ ಪೊಲೀಸರು ಮಾಹಿತಿ ನೀಡಿದರು. ಆದರೆ, ಈ ಘಟನೆಯ ಬಗ್ಗೆ ಮಾತನಾಡುವಾಗ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದರು.

ಅಕ್ರಮ ಪಟಾಕಿ ಕಾರ್ಖಾನೆ ನಡೆಸುತ್ತಿದ್ದ ಆರೋಪಿ: ''ಆ ಅಕ್ರಮ ಪಟಾಕಿ ಕಾರ್ಖಾನೆಯ ಮಾಲೀಕನ ಹೆಸರು ಕೃಷ್ಣಪಾದ್ ಬಾಗ್ ಕಳೆದ ವರ್ಷ ಅಕ್ಟೋಬರ್ 19 ರಂದು ವ್ಯಕ್ತಿಯನ್ನು ಬಂಧಿಸಲಾಗಿತ್ತು. ಅಕ್ರಮ ಪಟಾಕಿ ಕಾರ್ಖಾನೆಯ ನಡೆಸುತ್ತಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಪೊಲೀಸರು ಆತನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಆತನಿಗೆ ನ್ಯಾಯಾಲಯದಿಂದ ಜಾಮೀನು ನೀಡಲಾಗಿದೆ. ಇತ್ತೀಚೆಗಷ್ಟೇ ವಾಪಸಾದ ನಂತರ, ಒಡಿಶಾ ಗಡಿ ಪ್ರದೇಶದಲ್ಲಿ ಈ ಅಕ್ರಮ ಕಾರ್ಖಾನೆ ಆರಂಭಿಸಿದ್ದು, ಆ ವ್ಯಕ್ತಿ ಒಡಿಶಾಗೆ ಓಡಿ ಹೋಗಿದ್ದಾನೆ ಎಂದು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಆರೋಪಿ ಒಡಿಶಾ ಮತ್ತು ಬಾಂಗ್ಲಾದೇಶದಲ್ಲಿ ಈ ಅಕ್ರಮ ಪಟಾಕಿ ಕಾರ್ಖಾನೆ ನಡೆಸುತ್ತಿದ್ದ'' ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ: ನಾಳೆ ಜಾರ್ಖಂಡ್ ಹೈಕೋರ್ಟ್‌ನಿಂದ ತೀರ್ಪು ಪ್ರಕಟ

ನಿಜ ಸಂಗತಿಗಳು ಹೊರಗೆ ಬರಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ- ಸಿಎಂ: ''ಈ ಘಟನೆಯಲ್ಲಿ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ ವಿರುದ್ಧ ಪ್ರತಿಪಕ್ಷಗಳು ಈಗಾಗಲೇ ಆರೋಪ ಮಾಡುತ್ತಿವೆ. ಈ ಘಟನೆಯಲ್ಲಿ ತೃಣಮೂಲ ಅಥವಾ ರಾಜ್ಯ ಆಡಳಿತದ ಯಾರೊಬ್ಬರೂ ಭಾಗಿಯಾಗಿಲ್ಲ ಎಂದು ಮಮತಾ ಹೇಳಿದ್ದಾರೆ. ಇದರಿಂದ ಎನ್‌ಐಎ ತನಿಖೆ ನಡೆಸಿದರೂ ತಮ್ಮ ಅಭ್ಯಂತರವಿಲ್ಲ, ನಿಜ ಸಂಗತಿಗಳು ಹೊರಗೆ ಬರಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ'' ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಕಾಶ್ಮೀರ ಕಣಿವೆಯಲ್ಲಿ ಪ್ಯಾರಾಗ್ಲೈಡಿಂಗ್​: 5,330 ಅಡಿ ಎತ್ತರದಲ್ಲಿ ಸಾಹಸಮಯ ಹಾರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.