ಹೈದರಾಬಾದ್ (ತೆಲಂಗಾಣ): 15 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ 30 ಮುಖ್ಯಮಂತ್ರಿಗಳ ಪೈಕಿಯಲ್ಲಿಯೇ ಅತ್ಯಂತ ಬಡವರು ಎಂದು ತಿಳಿದುಬಂದಿದೆ. 28 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶ ಸೇರಿದಂತೆ 30 ಮುಖ್ಯಮಂತ್ರಿಗಳು ಸಲ್ಲಿಸಿರುವ ಅಫಿಡವಿಟ್‌ಗಳ ಮಾಹಿತಿ ವಿಶ್ಲೇಷಣೆ ಮಾಡಿರುವುದರಿಂದ ಮಮತಾ ಬ್ಯಾನರ್ಜಿ ಕೋಟ್ಯಧಿಪತಿಯಲ್ಲದ ಏಕೈಕ ಮುಖ್ಯಮಂತ್ರಿ ಎಂದು ತಿಳಿದುಬಂದಿದೆ.
510 ಕೋಟಿ ರೂ ಆದಾಯ ಹೊಂದಿರುವ ಜಗನ್ ಮೋಹನ್: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನ ವಿಶ್ಲೇಷಣೆಯ ಪ್ರಕಾರ, ಭಾರತದಲ್ಲಿ 30 ಹಾಲಿ ಮುಖ್ಯಮಂತ್ರಿಗಳಲ್ಲಿ 29 ಜನರು ಕೋಟ್ಯಧಿಪತಿಗಳು ಅಥವಾ ಮಿಲಿಯನೇರ್‌ಗಳಾಗಿದ್ದಾರೆ. ಇದರಲ್ಲಿ ಮೊದಲ ಸ್ಥಾನದಲ್ಲಿರುವ ಆಂಧ್ರ ಪ್ರದೇಶದ ಜಗನ್ ಮೋಹನ್ ರೆಡ್ಡಿ 510 ಕೋಟಿ ರೂ ಆದಾಯ ಹೊಂದಿದ್ದರೆ, ಅರುಣಾಚಲ ಪ್ರದೇಶದ ಪೇಮಾ ಖಂಡು 163 ಕೋಟಿ ರೂ. ಒಡಿಶಾದ ನವೀನ್ ಪಟ್ನಾಯಕ್ 63 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವ ಮೂವರು ಪ್ರಮುಖ ಮುಖ್ಯಮಂತ್ರಿಗಳಾಗಿದ್ದಾರೆ.
ಎಡಿಆರ್ ಪ್ರಕಾರ, ಅತ್ಯಂತ ಕಡಿಮೆ ಘೋಷಿತ ಆಸ್ತಿ ಹೊಂದಿರುವ ಮೂವರು ಮುಖ್ಯಮಂತ್ರಿಗಳೆಂದರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ 15 ಲಕ್ಷ ರೂ, ಕೇರಳದ ಪಿಣರಾಯಿ ವಿಜಯನ್ 1 ಕೋಟಿ ರೂ ಮತ್ತು ಹರಿಯಾಣದ ಮನೋಹರ್ ಲಾಲ್ 1 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಕೇಜ್ರಿವಾಲ್ ಆಸ್ತಿ 3 ಕೋಟಿ ರೂ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ದೆಹಲಿಯ ಅರವಿಂದ್ ಕೇಜ್ರಿವಾಲ್ ಅವರು 3 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 28 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಪುದುಚೇರಿಗಳೂ ಸಹ ಮುಖ್ಯಮಂತ್ರಿಗಳನ್ನು ಹೊಂದಿವೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಪ್ರಸ್ತುತ ಮುಖ್ಯಮಂತ್ರಿಯನ್ನು ಹೊಂದಿಲ್ಲ.
ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಇಬ್ಬರು ಟಿಎಸ್ಪಿಎಸ್ಸಿ ಅಧಿಕಾರಿಗಳಿಗೆ ಇಡಿ ಸಮನ್ಸ್
ಎಡಿಆರ್ ವರದಿ ವಿಶ್ಲೇಷಿಸಿದ 30 ಸಿಎಂಗಳಲ್ಲಿ 97% ಕೋಟ್ಯಧಿಪತಿಗಳಾಗಿದ್ದು, ಪ್ರತಿ ಮುಖ್ಯಮಂತ್ರಿಯ ಸರಾಸರಿ ಆಸ್ತಿ ಮೌಲ್ಯ 33.96 ಕೋಟಿ ರೂ. ಹೆಚ್ಚುವರಿಯಾಗಿ 43% ಮುಖ್ಯಮಂತ್ರಿಗಳು ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ : ಬಿಜೆಪಿ ಸಂಸದ ಸ್ಥಾನ ಕಿತ್ತುಕೊಳ್ಳಬಹುದು, ಜನರನ್ನು ಪ್ರತಿನಿಧಿಸುವುದನ್ನು ತಡೆಯಲು ಸಾಧ್ಯವಿಲ್ಲ: ರಾಹುಲ್