ETV Bharat / bharat

ಚು. ಆಯೋಗಕ್ಕೆ ಟಾಂಗ್​ ನೀಡಿದ ಮಮತಾ..10 ನೋಟಿಸ್​ ನೀಡಿದ್ರೂ, ನನ್ನ ಹೇಳಿಕೆ ಮುಂದುವರಿಸುವೆ ಎಂದ ದೀದಿ! - ಕೋಮು ನೆಲೆಯಲ್ಲಿ ಮಮತಾ ಮತಯಾಚನೆ

ತರ್ಕೇಶ್ವರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಬ್ಯಾನರ್ಜಿ ಅವರು ಮುಸ್ಲಿಂ ಮತದಾರರಿಗೆ ತಮ್ಮ ಮತಗಳನ್ನು ವಿವಿಧ ರಾಜಕೀಯ ಪಕ್ಷಗಳ ನಡುವೆ ವಿಭಜಿಸಲು ಬಿಡದಂತೆ ಮನವಿ ಮಾಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚು. ಆಯೋಗಕ್ಕೆ ದೂರು ನೀಡಲಾಗಿತ್ತು.

Mamata Banerjee challenges EC notice
Mamata Banerjee challenges EC notice
author img

By

Published : Apr 8, 2021, 5:48 PM IST

ಹೌರಾ(ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್​​ಗೆ(ಟಿಎಂಸಿ) ಮುಸ್ಲಿಮರು ಒಗ್ಗಟ್ಟಿನಿಂದ ಮತ ಚಲಾವಣೆ ಮಾಡುವಂತೆ ಹೇಳಿಕೆ ನೀಡಿದ್ದ ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿ, ಮುಂದಿನ 48 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಇಂತಹ 10 ನೋಟಿಸ್​ ಬಂದರೂ ತಾವು ಈ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಮತಚಲಾವಣೆ ಮಾಡುವಂತೆ ಹೇಳುವೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ಮಮತಾ ಕಿಡಿ

4ನೇ ಹಂತದ ಚುನಾವಣೆಗೋಸ್ಕರ ಪ್ರಚಾರ ನಡೆಸುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಂತಹ 10 ನೋಟಿಸ್​ಗಳು ನನ್ನ ವಿರುದ್ಧ ಬಂದರೂ ನಾನು ಹೇಳಿಕೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳುವುದಿಲ್ಲ. ನನ್ನ ಉತ್ತರ ಒಂದೇ ಆಗಿರುತ್ತದೆ ಎಂದಿದ್ದಾರೆ. ಪ್ರತಿಯೊಬ್ಬರಿಗೂ ನಾನು ಹೇಳುತ್ತಿರುವುದು ಒಗ್ಗಟ್ಟಿನಿಂದ ಮತ ಚಲಾವಣೆ ಮಾಡಿ. ಇದರಲ್ಲಿ ಯಾವುದೇ ಒಡಕು ಬೇಡ. ಹಿಂದೂ. ಮುಸ್ಲಿಂ, ಸಿಖ್​ ಹಾಗೂ ಕ್ರಿಶ್ಚಿಯನ್​​ ಒಗ್ಗಟ್ಟಿನಿಂದ ಮತ ಚಲಾವಣೆ ಮಾಡಿ ಎಂದಿರುವ ಅವರು, ಸಿಂಗಲ್​ ವೋಟ್​ ಕೂಡ ಬಿಜೆಪಿಗೆ ನೀಡಬೇಡಿ ಎಂದಿದ್ದಾರೆ.

ಇದನ್ನೂ ಓದಿ: ಕೋಮು ನೆಲೆಯಲ್ಲಿ ಮತಯಾಚನೆ ಆರೋಪ: ದೀದಿಗೆ ಚುನಾವಣೆ ಆಯೋಗದ ನೋಟಿಸ್​ ಜಾರಿ

ನಿತ್ಯ ನರೇಂದ್ರ ಮೋದಿ ಹಿಂದೂ - ಮುಸ್ಲಿಂ ಬಗ್ಗೆ ಹೇಳಿಕೆ ನೀಡುತ್ತಾರೆ. ಹಾಗಾದ್ರೆ ಅವರ ವಿರುದ್ಧ ಎಷ್ಟು ದೂರು ದಾಖಲಾಗಿವೆ. ನಂದಿಗ್ರಾಮದಲ್ಲಿರುವ ಮುಸ್ಲಿಮರು ಪಾಕಿಸ್ತಾನಿಗಳು ಎಂದು ಹೇಳಿರುವ ಬಿಜೆಪಿ ವಿರುದ್ಧ ಎಷ್ಟು ಪ್ರಕರಣ ದಾಖಲು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅವರು ನನಗೆ ಏನು ಮಾಡಲು ಸಾಧ್ಯವಿಲ್ಲ.

  • It hardly matters even if 10 show cause notices are issued against me. I am telling everyone to vote unitedly, there will no division. How many complaints have been filed against Narendra Modi? He does Hindu-Muslim every day: West CM Mamata Banerjee in Damjur pic.twitter.com/QhJvKAE69F

    — ANI (@ANI) April 8, 2021 " class="align-text-top noRightClick twitterSection" data=" ">

ಇದೇ ವೇಳೆ,ತೈಲ ಏರಿಕೆ ವಿಚಾರವಾಗಿ ಕೇಂದ್ರದ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದು, ದೇಶದ ಆರ್ಥಿಕತೆ ಸಂಪೂರ್ಣವಾಗಿ ಹಾಳು ಮಾಡಲು ಬಿಜೆಪಿ ಸರ್ಕಾರವೇ ಮುಖ್ಯ ಕಾರಣ ಎಂದಿದ್ದಾರೆ. ಏಪ್ರಿಲ್​ 3ರಂದು ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ್ದ ಮಮತಾ ಬ್ಯಾನರ್ಜಿ ಮುಸ್ಲಿಂ ಮತದಾರರು ತಮ್ಮ ಮತವನ್ನು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿ ವಿಭಜನೆ ಮಾಡದಂತೆ ಅವರು ಮನವಿ ಮಾಡಿದ್ದರು. ಕೋಮು ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್​ಗೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ಇದೇ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗ ನಿನ್ನೆ ನೋಟಿಸ್​​ ಜಾರಿ ಮಾಡಿ, ಮುಂದಿನ 48 ಗಂಟೆಯಲ್ಲಿ ವಿವರಣೆ ನೀಡುವಂತೆ ಆದೇಶ ನೀಡಿತ್ತು. ಇದೀಗ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗಕ್ಕೆ ಟಾಂಗ್​ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.