ETV Bharat / bharat

ಬಿಜೆಪಿ ಆಡಳಿತದಲ್ಲಿ ಜಮ್ಮು-ಕಾಶ್ಮೀರದ ಸ್ಥಿತಿ ಹೀಗಿದೆ ಎಂದ ಮಲ್ಲಿಕಾರ್ಜುನ ಖರ್ಗೆ..

ಸುರಕ್ಷತೆ ಮತ್ತು ರಕ್ಷಣೆಯ ಕೊರತೆಯಿಂದಾಗಿ ಜಮ್ಮು- ಕಾಶ್ಮೀರದ ಅಲ್ಪಸಂಖ್ಯಾತರು ಸಾಮೂಹಿಕವಾಗಿ ನಿರ್ಗಮಿಸುತ್ತಿದ್ದಾರೆ. ಶೇ.7.39ರನಷ್ಟು ಹಣದುಬ್ಬರವು ವಾಸಿಸಲು ಅತ್ಯಂತ ದುಬಾರಿ ಸ್ಥಳಗಳಲ್ಲಿ ಕಾಶ್ಮೀರವನ್ನು ಒಂದನ್ನಾಗಿಸಿದೆ. ಇದು ಮೋದಿ ಸರ್ಕಾರದ ವಿಫಲ ನೀತಿಗಳು ಮತ್ತು ಕಾರ್ಯತಂತ್ರದ ಪ್ರಮಾದಗಳ ಪರಿಣಾಮವಾಗಿದೆ..

author img

By

Published : Oct 17, 2021, 5:23 PM IST

ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು/ನವದೆಹಲಿ : ಪ್ರಸ್ತುತ ಅಂದರೆ, 2019ರ ಆಗಸ್ಟ್​ 5ರಂದು ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಕಣಿವೆ ನಾಡಿನ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒಂದಿಷ್ಟು ಅಂಕಿ-ಅಂಶಗಳನ್ನ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

"ಬಿಜೆಪಿ ಆಡಳಿತದಲ್ಲಿ ಜಮ್ಮು ಮತ್ತು ಕಾಶ್ಮೀರವು ಎಲ್ಲ ರಾಜ್ಯಗಳಿಗಿಂತಲೂ ಅತಿ ಹೆಚ್ಚು ನಿರುದ್ಯೋಗ ದರ (ಶೇ.21.6) ಹೊಂದಿದೆ. ಸ್ಥಳೀಯರು, ಸ್ಥಳೀಯ ಅಲ್ಪಸಂಖ್ಯಾತರು ಮತ್ತು ಇತರ ರಾಜ್ಯಗಳಿಂದ ವಲಸೆ ಬಂದವರು ಸೇರಿದಂತೆ ಕನಿಷ್ಠ 30 ನಾಗರಿಕರು ಈ ವರ್ಷ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟಿದ್ದಾರೆ. ಕಳೆದ ವಾರ 9 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ" ಎಂದು ಖರ್ಗೆ ಟ್ವೀಟ್​ ಮಾಡಿದ್ದಾರೆ.

  • - Mass exodus of J&K's minorities for lack of safety and protection.

    - Inflation at 7.39% making Kashmir one of the costliest places to live

    Situation in J&K is grim. It's a fallout of the failed policies & strategic blunders by Modi govt. No course correction in sight. (2/2)

    — Mallikarjun Kharge (@kharge) October 17, 2021 " class="align-text-top noRightClick twitterSection" data=" ">

"ಸುರಕ್ಷತೆ ಮತ್ತು ರಕ್ಷಣೆಯ ಕೊರತೆಯಿಂದಾಗಿ ಜಮ್ಮು- ಕಾಶ್ಮೀರದ ಅಲ್ಪಸಂಖ್ಯಾತರು ಸಾಮೂಹಿಕವಾಗಿ ನಿರ್ಗಮಿಸುತ್ತಿದ್ದಾರೆ. ಶೇ.7.39ರನಷ್ಟು ಹಣದುಬ್ಬರವು ವಾಸಿಸಲು ಅತ್ಯಂತ ದುಬಾರಿ ಸ್ಥಳಗಳಲ್ಲಿ ಕಾಶ್ಮೀರವನ್ನು ಒಂದನ್ನಾಗಿಸಿದೆ.

ಇದು ಮೋದಿ ಸರ್ಕಾರದ ವಿಫಲ ನೀತಿಗಳು ಮತ್ತು ಕಾರ್ಯತಂತ್ರದ ಪ್ರಮಾದಗಳ ಪರಿಣಾಮವಾಗಿದೆ" ಎಂದು ಖರ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.