ETV Bharat / bharat

ನಾನು ದೊಡ್ಡ ಬದಲಾವಣೆಗಾಗಿ ಹೋರಾಡುತ್ತಿದ್ದೇನೆ ಎಂದ ಖರ್ಗೆ: ಭಿನ್ನಮತೀಯ ನಾಯಕರಿಂದಲೂ ಬೆಂಬಲ - ಮನೀಶ್ ತಿವಾರಿ ಮತ್ತು ಆನಂದ್ ಶರ್ಮಾ

ಮಲ್ಲಿಕಾರ್ಜುನ ಖರ್ಗೆ ಬೆಂಬಲಕ್ಕೆ ಪ್ರಮುಖವಾಗಿ ಎಕೆ ಆ್ಯಂಟಿನಿ, ಅಶೋಕ್ ಗೆಹ್ಲೋಟ್​, ಅಂಬಿಕಾ ಸೋನಿ, ಮುಕುಲ್​ ವಾಸ್ನಿಕ್​, ಆನಂದ ಶರ್ಮಾ, ದಿಗ್ವಿಜಯ್​ ಸಿಂಗ್​, ಭುಪೇಂದ್ರಸಿಂಗ್ ಹೂಡ, ಪ್ರಮೋದ್ ತಿವಾರಿ, ಪಾಲ್ ಪುನಿಯಾ, ಪವನ್ ಕುಮಾರ್ ಬನ್ಸಾಲ್ ಅವರಂತಹ ಹಿರಿಯ ನಾಯಕರು ನಿಂತಿದ್ದಾರೆ.

mallikarjun-kharge-appeals-for-votes-after-filing-nomination-thanks-those-in-support
ನಾನು ದೊಡ್ಡ ಬದಲಾವಣೆಗಾಗಿ ಹೋರಾಡುತ್ತಿದ್ದೇನೆ ಎಂದ ಖರ್ಗೆ: ಭಿನ್ನಮತೀಯ ನಾಯಕರಿಂದಲೂ ಬೆಂಬಲ
author img

By

Published : Sep 30, 2022, 4:01 PM IST

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ, ರಾಜ್ಯಸಭಾ ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾಡಿರುವ ಖರ್ಗೆ ನಾನು ದೊಡ್ಡ ಬದಲಾವಣೆಗಾಗಿ ಹೋರಾಡುತ್ತಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್​ ಪಕ್ಷದ ಪ್ರಧಾನ ಕಚೇರಿಗೆ ತೆರಳಿದ ಮಲ್ಲಿಕಾರ್ಜುನ ಖರ್ಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಖರ್ಗೆ ನಾಮಪತ್ರಕ್ಕೆ ಸೂಚಕರಾಗಿ ಒಟ್ಟು 30 ಕಾಂಗ್ರೆಸ್ ನಾಯಕರು ಸಹಿ ಮಾಡಿದ್ದಾರೆ. ಪ್ರಮುಖವಾಗಿ ಎಕೆ ಆ್ಯಂಟಿನಿ, ಅಶೋಕ್ ಗೆಹ್ಲೋಟ್​, ಅಂಬಿಕಾ ಸೋನಿ, ಮುಕುಲ್​ ವಾಸ್ನಿಕ್​, ಆನಂದ ಶರ್ಮಾ, ದಿಗ್ವಿಜಯ್​ ಸಿಂಗ್​, ಭುಪೇಂದ್ರಸಿಂಗ್ ಹೂಡ, ಪ್ರಮೋದ್ ತಿವಾರಿ, ಪಾಲ್ ಪುನಿಯಾ, ಪವನ್ ಕುಮಾರ್ ಬನ್ಸಾಲ್ ಅವರಂತಹ ಹಿರಿಯ ನಾಯಕರು ಖರ್ಗೆ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ: ನಾನು ಸ್ಪರ್ಧಿಸುತ್ತಿಲ್ಲ, ಮಲ್ಲಿಕಾರ್ಜುನ್​ ಪರ ನಿಲ್ಲುತ್ತೇನೆ: ದಿಗ್ವಿಜಯ್​ ಸಿಂಗ್​

ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಖರ್ಗೆ, ಇಂದು ನನ್ನ ಬೆಂಬಲಕ್ಕೆ ಬಂದು ಎಲ್ಲ ನಾಯಕರು, ಕಾರ್ಯಕರ್ತರು, ಪ್ರತಿನಿಧಿಗಳು ಮತ್ತು ಸಚಿವರು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಕ್ಟೋಬರ್ 17ರಂದು ಫಲಿತಾಂಶಗಳು ಏನೆಂದು ಮುಂದೆ ನಾವು ನೋಡೋಣ. ನಾನು ಗೆಲ್ಲುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗಾಂಧಿ ನೆಹರೂ ಸಿದ್ಧಾಂತ ಪ್ರಚಾರ ಮಾಡುತ್ತಿದ್ದೆ: ಜೊತೆಗೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದ ಎಲ್ಲ ರಾಜ್ಯಗಳ ಹಿರಿಯ ನಾಯಕರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಚುನಾವಣೆಯಲ್ಲಿ ನನಗೆ ಮತ ನೀಡುವಂತೆ ನಾನು ಎಲ್ಲ ಪ್ರತಿನಿಧಿಗಳಲ್ಲಿ ಮನವಿ ಮಾಡುತ್ತೇನೆ. ನಾನು ದೊಡ್ಡ ಬದಲಾವಣೆಗಾಗಿ ಹೋರಾಡುತ್ತಿದ್ದೇನೆ. ನಾನು ಬಾಲ್ಯದಿಂದಲೂ ಕಾಂಗ್ರೆಸ್ ಸಿದ್ಧಾಂತದೊಂದಿಗೆ ಸಂಪರ್ಕ ಹೊಂದಿದ್ದೇನೆ. ನಾನು 8, 9ನೇ ತರಗತಿಯಲ್ಲಿದ್ದಾಗ ಗಾಂಧಿ, ನೆಹರೂ ಸಿದ್ಧಾಂತವನ್ನೇ ಪ್ರಚಾರ ಮಾಡುತ್ತಿದ್ದೆ ಎಂದೂ ಖರ್ಗೆ ಹೇಳಿದರು.

  • I have been connected to the ideology of Congress since my childhood, used to campaign for the same Gandhi, Nehru ideology when I was in classes 8th, 9th: Senior Congress leader & LoP Rajya Sabha Mallikarjun Kharge pic.twitter.com/Mvzqe9Tm42

    — ANI (@ANI) September 30, 2022 " class="align-text-top noRightClick twitterSection" data=" ">

ಭಿನ್ನಮತೀಯ ನಾಯಕರ ಬೆಂಬಲ: ಕಾಂಗ್ರೆಸ್​ನ ಭಿನ್ನಮತೀಯ ಗುಂಪಿನಲ್ಲಿ ಗುರುತಿಸಿಕೊಂಡು ನಾಯಕರು ಕೂಡ ಖರ್ಗೆ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಉಮೇದುವಾರಿಕೆಯನ್ನು ನಾನು ಮತ್ತು ಆನಂದ್ ಶರ್ಮಾ ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದರು. ಅಲ್ಲದೇ, ಮನೀಶ್ ತಿವಾರಿ ಮತ್ತು ಆನಂದ್ ಶರ್ಮಾ ಅವರು ಖರ್ಗೆ ಅವರನ್ನು ಬೆಂಬಲಿಸಿ ಎಐಸಿಸಿ ಪ್ರಧಾನ ಕಚೇರಿಗೂ ಬಂದಿದ್ದರು.

ಇದನ್ನೂ ಓದಿ: ಯಾರಾಗಲಿದ್ದಾರೆ King ‘Cong‘.. ದಲಿತ ನಾಯಕ ಖರ್ಗೆ ಒಲಿಯಲಿದೆಯಾ ಕಾಂಗ್ರೆಸ್​ ಅಧ್ಯಕ್ಷ ಪಟ್ಟ!?

ಅಶೋಕ್ ಗೆಹ್ಲೋಟ್ ಸಹ ಮಾತನಾಡಿ, ಖರ್ಗೆ ಅವರ ಉಮೇದುವಾರಿಕೆ ಕುರಿತು ಎಲ್ಲ ಹಿರಿಯ ನಾಯಕರು ಒಟ್ಟಾಗಿ ನಿರ್ಧರಿಸಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ, ಖರ್ಗೆ ಅವರ ಪ್ರತಿಸ್ಪರ್ಧಿ ಶಶಿ ತರೂರ್‌ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೀರಾ ಎಂಬ ಪ್ರಶ್ನೆಗೆ ಗೆಹ್ಲೋಟ್ ನೇರ ಪ್ರತಿಕ್ರಿಯೆಯಿಂದ ನುಣುಚಿಕೊಂಡರು.

ನಾನು ಕಳೆದ 50 ವರ್ಷಗಳಿಂದ ಗಾಂಧಿ ಕುಟುಂಬದ ಸಹಕಾರದಿಂದ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಸಹಕಾರವನ್ನು ನೀಡಿದ್ದಾರೆ. ನನಗೆ ಸ್ಥಾನ ಮುಖ್ಯವಲ್ಲ, ಪಕ್ಷವನ್ನು ಹೇಗೆ ಬಲಪಡಿಸಬೇಕು ಎಂಬುದು ಮುಖ್ಯ. ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಗೆಹ್ಲೋಟ್ ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ ಅಧ್ಯಕ್ಷ ಚುನಾವಣೆ: ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್​ ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.