ಕೊಚ್ಚಿ: ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರಿಗೆ ಕೊರೊನಾ ವಕ್ಕರಿಸಿದೆ. ಇಂದು ವರದಿ ಬಂದಿದ್ದು ಅವರಿಗೆ ಕೊರೊನಾ ಪಾಸಿಟಿವ್ ಇದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಮಹಾಮಾರಿ ಕೋವಿಡ್ ಸೋಂಕು ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ತ್ರಿಶಾ, ಖುಷ್ಬು, ಮಹೇಶ್ ಬಾಬು, ತಮನ್ನಾ ಮತ್ತು ಇತರ ಸೆಲೆಬ್ರಿಟಿಗಳ ಪಟ್ಟಿಗೆ ಇವರೂ ಸೇರಿದ್ದಾರೆ.
ಈ ಎಲ್ಲಾ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಕೆ.ಮಧು ನಿರ್ದೇಶನದ ಚಲನಚಿತ್ರ ಫ್ರಾಂಚೈಸ್ 'ಸಿಬಿಐ 5' ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.