ETV Bharat / bharat

ದಾಂಪತ್ಯಕ್ಕೆ ಕಾಲಿಟ್ಟ ಮಲಾಲಾ ಜೋಡಿಗೆ ಶುಭ ಹಾರೈಸಿದ ನಟಿ ಪ್ರಿಯಾಂಕಾ ಚೋಪ್ರಾ

author img

By

Published : Nov 10, 2021, 12:07 PM IST

ಹಾಲಿವುಡ್ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ‌ ಚೋಪ್ರಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಲಾಲಾ ಯೂಸಫ್‌ಝಾಯಿ ಮತ್ತು ಅಸ್ಸರ್ ಜೋಡಿಗೆ ಇನ್‌ಸ್ಟಾಗ್ರಾಮ್​ನಲ್ಲಿ ಶುಭ ಹಾರೈಸಿದ್ದಾರೆ.

malala
malala

ಬರ್ಮಿಂಗ್‌ಹ್ಯಾಮ್‌ನಲ್ಲಿರುವ ನಮ್ಮ ಮನೆಯಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್‌ಝಾಯಿ ಅವರು ಅಸ್ಸರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ನವ ಜೋಡಿಗೆ ನಟಿ ಪ್ರಿಯಾಂಕಾ ಚೋಪ್ರಾ ಶುಭಾಶಯ ಕೋರಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಮುದ್ದಾದ ಜೋಡಿಯ ಫೋಟೋ ಶೇರ್​ ಮಾಡಿರುವ ಪ್ರಿಯಾಂಕಾ, ಅಭಿನಂದನೆಗಳು ಮಲಾಲಾ. ನಿಮ್ಮ ಮುಂದಿನ ದಾಂಪತ್ಯ ಜೀವನ ಸುಖ ಮತ್ತು ಸಂತೋಷಕರವಾಗಿರಲೆಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

malala
ಪ್ರಿಯಾಂಕಾ ಚೋಪ್ರಾ ಶೇರ್​ ಮಾಡಿದ ಫೋಟೋ

ಸಾಮಾಜಿಕ ಕಾರ್ಯಕರ್ತೆ ಮಲಾಲಾ ಅವರು ಟ್ವಿಟ್ಟರ್​​ನಲ್ಲಿ ತಮ್ಮ ಪತಿ ಅಸ್ಸರ್ ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸರಳವಾಗಿ ವಿವಾಹವಾಗಿರುವುದನ್ನು ತಿಳಿಸಿದ್ದರು. ಜೊತೆಗೆ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ. ಪತಿ-ಪತ್ನಿಯಾಗಿ ಹೊಸ ಪಯಣದಲ್ಲಿ ಸಾಗುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ಶುಭ ಸುದ್ದಿ ಶೇರ್​ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.