ETV Bharat / bharat

ಕೋವಿಡ್ ಸವಾಲನ್ನು ಎದುರಿಸಲು ತಾತ್ಕಾಲಿಕ ಆಸ್ಪತ್ರೆಗಳು ಅಗತ್ಯವಿದೆ : ಆಂಥೋನಿ ಫೌಸಿ

author img

By

Published : May 14, 2021, 3:12 PM IST

ಭಾರತಕ್ಕೆ ಶೀಘ್ರದಲ್ಲೇ ಒಂದು ಲಕ್ಷ ವೈದ್ಯರು ಮತ್ತು 5 ಲಕ್ಷ ನರ್ಸ್​ಗಳ ಅಗತ್ಯವಿದೆ ಎಂದು ಡಾ.ದೇವಿ ಶೆಟ್ಟಿ ಹೇಳಿದರು. ಕೋವಿಡ್​ ವಾರ್ಡ್‌ಗಳಲ್ಲಿ ಅಂತಿಮ ವರ್ಷದ ವೈದ್ಯಕೀಯ ಮತ್ತು ಶುಶ್ರೂಷಾ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುವುದರಿಂದ ತಕ್ಷಣದ ಅಗತ್ಯವನ್ನು ಸ್ವಲ್ಪ ಮಟ್ಟಿಗೆ ಪೂರೈಸಬಹುದು..

hospital
hospital

ಹೈದರಾಬಾದ್​(ತೆಲಂಗಾಣ) : ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಗನಕ್ಕೇರುತ್ತಿರುವುದರಿಂದ, ಆಸ್ಪತ್ರೆಯ ಹಾಸಿಗೆಗಳು ಮತ್ತು ವೈದ್ಯಕೀಯ ಸಲಕರಣೆಗಳ ಕೊರತೆ ಎದ್ದು ಕಾಣುತ್ತಿದೆ.

ಹಾಸಿಗೆಗಳ ಕೊರತೆಯಿಂದಾಗಿ ಆ್ಯಂಬುಲೆನ್ಸ್ ಅಥವಾ ಕುರ್ಚಿಗಳಲ್ಲಿ ರೋಗಿಗಳಿಗೆ ಆಮ್ಲಜನಕವನ್ನು ನೀಡಲಾಗುತ್ತಿದೆ ಎಂಬ ವರದಿಗಳು, ಫೋಟೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.

ಈ ಸಮಯದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆಮ್ಲಜನಕ ಸೌಲಭ್ಯಗಳನ್ನು ಹೊಂದಿರುವ ಹಾಸಿಗೆಗಳು ತುರ್ತಾಗಿ ಅಗತ್ಯವಿದೆ. ಪ್ರಸ್ತುತ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಭಾರತವು ರಾಷ್ಟ್ರವ್ಯಾಪಿ ಲಾಕ್‌ಡೌನ್, ವ್ಯಾಪಕವಾದ ವ್ಯಾಕ್ಸಿನೇಷನ್ ಮತ್ತು ತಾತ್ಕಾಲಿಕ ಆಸ್ಪತ್ರೆಗಳ ದೊಡ್ಡ ಪ್ರಮಾಣದ ಸ್ಥಾಪನೆ ಮಾಡಬೇಕು ಎಂದು ಯುಎಸ್​​ ಮುಖ್ಯ ವೈದ್ಯಕೀಯ ಸಲಹೆಗಾರ ಆಂಥೋನಿ ಫೌಸಿ ಸಲಹೆ ನೀಡಿದರು.

ಸೋಂಕಿತ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ತೀವ್ರ ನಿಗಾ ಅಗತ್ಯವಿದ್ದರೂ, ಅಸಮರ್ಪಕ ವೈದ್ಯಕೀಯ ಸೌಲಭ್ಯಗಳು ಮತ್ತು ತರಬೇತಿ ಪಡೆಯದ ಸಿಬ್ಬಂದಿ ಕೋವಿಡ್-19 ಜೊತೆಗಿನ ದೇಶದ ಹೋರಾಟವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಆಮ್ಲಜನಕದ ಕೊರತೆಯು ದೇಶವು ಎದುರಿಸುತ್ತಿರುವ ಭೀಕರ ಪರಿಸ್ಥಿತಿಯ ಪ್ರತಿಬಿಂಬವಾಗಿದೆ. ಈ ಬಿಕ್ಕಟ್ಟನ್ನು ನಿವಾರಿಸಲು ಪ್ರತಿಯೊಂದು ರಾಷ್ಟ್ರ ಭಾರತಕ್ಕೆ ಸಹಾಯ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕೋವಿಡ್-19 ಏಕಾಏಕಿ ಆರಂಭಿಕ ಹಂತಗಳಲ್ಲಿ ಚೀನಾದ ವಿಧಾನವು ಎಲ್ಲಾ ರಾಷ್ಟ್ರಗಳಿಗೆ ಒಂದು ಉದಾಹರಣೆಯಾಗಿದೆ.

ಸೈನ್ಯದ ಸಹಾಯದಿಂದ ದೇಶವು ಕೇವಲ 10 ದಿನಗಳಲ್ಲಿ ಅತಿದೊಡ್ಡ ತಾತ್ಕಾಲಿಕ ಆಸ್ಪತ್ರೆಯನ್ನು ಚೀನಾ ನಿರ್ಮಿಸಿದೆ. ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ಚೀನಾ 14 ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಿತ್ತು. ವುಹಾನ್ ನಗರದಲ್ಲಿ ಮೊದಲ ಪ್ರಕರಣ ಪತ್ತೆಯಾದ ನಂತರ, ಸರ್ಕಾರವು ಹುಬೈನಲ್ಲಿ 42,000 ವೈದ್ಯಕೀಯ ಸಿಬ್ಬಂದಿ ನೇಮಿಸಿತು.

ಹಾಸಿಗೆಯ ಕೊರತೆಯನ್ನು ತಪ್ಪಿಸಲು ಭಾರತವು ಚೀನಾದ ನಡೆಯನ್ನು ಅನುಸರಿಸಬಹುದು ಮತ್ತು ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲು ಸೈನ್ಯವನ್ನು ನಿಯೋಜಿಸಬಹುದು. ಬಿಹಾರದಲ್ಲಿ, ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ವೆಂಟಿಲೇಟರ್‌ಗಳನ್ನು ಮಂಜೂರು ಮಾಡಲಾಯಿತು.

ಆದರೆ, ಅವುಗಳನ್ನು ನಿರ್ವಹಿಸಲು ತರಬೇತಿ ಪಡೆದ ಸಿಬ್ಬಂದಿಯ ಕೊರತೆ ಇತ್ತು. ರೋಗಿಗಳು ಸಾಯುತ್ತಿರುವಾಗಲೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಹತ್ತಾರು ಬಳಕೆಯಾಗದ ವೆಂಟಿಲೇಟರ್‌ಗಳು ಇದ್ದವು. ಆರಂಭದಲ್ಲಿ ಉತ್ತರಪ್ರದೇಶದಲ್ಲಿ 50 ಲಕ್ಷ ಕೋವಿಡ್ -19 ಆಸ್ಪತ್ರೆಗಳು ಇದ್ದು, 1.5 ಲಕ್ಷ ಹಾಸಿಗೆಗಳನ್ನು ಹೊಂದಿದ್ದವು.

ಆದರೆ, ಕ್ರಮೇಣ ಈ ಸಂಖ್ಯೆಯನ್ನು ಕಡಿಮೆಗೊಳಿಸಲಾಯಿತು, ಫೆಬ್ರವರಿ ವೇಳೆಗೆ ಕೇವಲ 83 ಆಸ್ಪತ್ರೆಗಳು ಮತ್ತು 17,000 ಹಾಸಿಗೆಗಳು ಮಾತ್ರ ಉಳಿದಿವೆ. ಕರ್ನಾಟಕದ ಪರಿಸ್ಥಿತಿಯೂ ಅಷ್ಟೇ ಕೆಟ್ಟದಾಗಿದೆ. ಈಗಿರುವ ಕೋವಿಡ್​ ಕೇರ್​ ಸೆಂಟರ್​ಗಳಿಗೆ ಕೇವಲ 18,000 ಐಸಿಯು ಹಾಸಿಗೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.

ಎರಡನೇ ಕೊರೊನಾ ಅಲೆ ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರ ತಾತ್ಕಾಲಿಕ ಆಸ್ಪತ್ರೆಗಳನ್ನು ಮತ್ತೆ ತೆರೆದಿದೆ. ಡಿಆರ್‌ಡಿಒ ಜೊತೆ ಸೇರಿಕೊಂಡು ತಾತ್ಕಾಲಿಕ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸಲು ಮುಂದಾಗಿದೆ. ಇತ್ತೀಚೆಗೆ, ಇದು ದೆಹಲಿಯಲ್ಲಿ 500 ಹಾಸಿಗೆಗಳೊಂದಿಗೆ ತಾತ್ಕಾಲಿಕ ಕೋವಿಡ್​ ಆಸ್ಪತ್ರೆಯನ್ನು ನಿರ್ಮಿಸಿತು.

ಗುಜರಾತ್, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಇದೇ ರೀತಿಯ ಆಸ್ಪತ್ರೆ ಸ್ಥಾಪಿಸಲು ಸಂಸ್ಥೆ ಯೋಜಿಸುತ್ತಿದೆ. ಮತ್ತೊಂದೆಡೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಲಖನೌ ಮತ್ತು ನಾಸಿಕ್‌ನಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯುತ್ತಿದೆ.

ಈ ಮಧ್ಯೆ ದೇಶಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಸಹ ಎದುರಾಗಿದ್ದು, ಭಾರತಕ್ಕೆ ಶೀಘ್ರದಲ್ಲೇ ಒಂದು ಲಕ್ಷ ವೈದ್ಯರು ಮತ್ತು 5 ಲಕ್ಷ ನರ್ಸ್​ಗಳ ಅಗತ್ಯವಿದೆ ಎಂದು ಡಾ.ದೇವಿ ಶೆಟ್ಟಿ ಹೇಳಿದರು. ಕೋವಿಡ್​ ವಾರ್ಡ್‌ಗಳಲ್ಲಿ ಅಂತಿಮ ವರ್ಷದ ವೈದ್ಯಕೀಯ ಮತ್ತು ಶುಶ್ರೂಷಾ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುವುದರಿಂದ ತಕ್ಷಣದ ಅಗತ್ಯವನ್ನು ಸ್ವಲ್ಪ ಮಟ್ಟಿಗೆ ಪೂರೈಸಬಹುದು.

ಆದರೆ, ಮುಂಬರುವ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿವಾರಿಸಲು ಕೇಂದ್ರ ಸರ್ಕಾರವು ಈ ವಿಷಯಗಳ ಬಗ್ಗೆ ತುರ್ತಾಗಿ ಗಮನ ಹರಿಸಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.