ಅಮೆರಿಕದ ಚಿಂತಕರ ಚಾವಡಿಯ ಇತ್ತೀಚಿನ ಅಧ್ಯಯನದ ಪ್ರಕಾರ, ಹೆಂಡತಿ ಯಾವಾಗಲೂ ತನ್ನ ಪತಿಗೆ ವಿಧೇಯಳಾಗಬೇಕು ಮತ್ತು ಸಾಂಪ್ರದಾಯಿಕ ಲಿಂಗ ವ್ಯವಸ್ಥೆಯನ್ನು ಬೆಂಬಲಿಸಬೇಕು ಎಂಬ ಕಲ್ಪನೆಯನ್ನು ಬಹುಪಾಲು ಭಾರತೀಯರು ಸಂಪೂರ್ಣವಾಗಿ ಅಥವಾ ಹೆಚ್ಚಾಗಿ ಒಪ್ಪುತ್ತಾರೆ. ಆದರೆ, ಇದೇ ವೇಳೆ ಮಹಿಳೆಯರೂ ಸಹ ಪುರುಷರಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎನ್ನುತ್ತದೆ.
ಬುಧವಾರ ಬಿಡುಗಡೆಯಾದ ಪ್ಯೂ(PEW) ಸಂಶೋಧನಾ ಕೇಂದ್ರದ ಹೊಸ ವರದಿ ಪ್ರಕಾರ, ಭಾರತೀಯರು ಮನೆಯಲ್ಲಿ ಮತ್ತು ಸಮಾಜದಲ್ಲಿ ಗಂಡು-ಹೆಣ್ಣು ಎಂಬ ಪಾತ್ರಗಳನ್ನು ಹೇಗೆ ನೋಡುತ್ತಾರೆ ಎಂಬುದನ್ನು ಕಂಡುಕೊಳ್ಳಲಾಗಿದೆ. ವರದಿಯು ಕೋವಿಡ್‌ಗೆ ಮುನ್ನ ಅಂದರೆ 2019ರ ಕೊನೆಯಲ್ಲಿ ಮತ್ತು 2020ರ ಆರಂಭದ ನಡುವೆ 29,999 ಭಾರತೀಯ ವಯಸ್ಕರ ಮುಖಾಮುಖಿ ಸಮೀಕ್ಷೆಯನ್ನು ಆಧರಿಸಿದೆ.
ಭಾರತೀಯ ವಯಸ್ಕರು ಬಹುಮಟ್ಟಿಗೆ ಸಾರ್ವತ್ರಿಕವಾಗಿ ಮಹಿಳೆಯರಿಗೆ ಪುರುಷರಂತೆ ಸಮಾನವಾದ ಹಕ್ಕುಗಳು ಇರಬೇಕು ಎಂದು ಹೇಳುತ್ತಾರೆ, ಇದು 10 ಜನರಲ್ಲಿ 8 ಜನರ ಅಭಿಪ್ರಾಯ.
ಉದ್ಯೋಗ ವಿಷಯಕ್ಕೆ ಬಂದಾಗ ಮಹಿಳೆಯರಿಗಿಂತ ಪುರುಷರಿಗೆ ಉದ್ಯೋಗದಲ್ಲಿ ಹೆಚ್ಚಿನ ಹಕ್ಕುಗಳು ಇರಬೇಕು ಎಂಬ ಕಲ್ಪನೆಯನ್ನು ಶೇಕಡಾ 80ರಷ್ಟು ಜನ ಪ್ರತಿಪಾದಿಸುತ್ತಾರೆ.
ಹತ್ತರಲ್ಲಿ ಸುಮಾರು ಒಂಬತ್ತು ಭಾರತೀಯರು ಹೆಂಡತಿ ಯಾವಾಗಲೂ ತನ್ನ ಗಂಡನಿಗೆ ವಿಧೇಯಳಾಗಿರಬೇಕು ಎಂಬ ಕಲ್ಪನೆಯನ್ನು ಸಂಪೂರ್ಣವಾಗಿ ಪ್ರತಿಪಾದಿಸುತ್ತಾರೆ. ಈ ಭಾವನೆಗೆ ಸಂಪೂರ್ಣವಾಗಿ 64% ಜನರು ಒಪ್ಪಿಗೆ ಸೂಚಿಸಿದ್ದಾರೆ.
ಹೆಂಡತಿಯರು ಸಹ ಇದಕ್ಕೆ ವಿರುದ್ಧ ಏನಿಲ್ಲ. ಈ ನಿಯವನ್ನು ಪಾಲಿಸುತ್ತಾರೆ. ಪುರುಷರಷ್ಟು ಈ ವಿಷಯಕ್ಕೆ ಒಪ್ಪಿಗೆ ಸೂಚಿಸದೇ ಇದ್ದರೂ ಈ ಭಾವನೆಯೊಂದಿಗೆ ಸಂಪೂರ್ಣ ಒಪ್ಪಿಗೆಯನ್ನು ಬಹುಪಾಲು ಮಹಿಳೆಯರು ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೇರಿದಂತೆ ಭಾರತದ ಪ್ರಮುಖ ಮಹಿಳಾ ರಾಜಕೀಯ ವ್ಯಕ್ತಿಗಳನ್ನು ಉಲ್ಲೇಖಿಸಿ, ಭಾರತೀಯರು ಮಹಿಳೆಯರನ್ನು ವಿಶಾಲವಾಗಿ ಸ್ವೀಕರಿಸುತ್ತಾರೆ ಎಂದು ವರದಿ ಹೇಳಿದೆ.
ಸಮೀಕ್ಷೆಯ ಫಲಿತಾಂಶಗಳಲ್ಲಿ ಅದರಲ್ಲೂ ರಾಜಕೀಯದಲ್ಲಿ ಮಹಿಳೆಯರ ಪಾತ್ರವನ್ನು ಕಂಡುಕೊಳ್ಳಲಾಗಿದೆ. ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಉತ್ತಮ ರಾಜಕೀಯ ನಾಯಕರಾಗುತ್ತಾರೆ ಎಂಬ ಬಗ್ಗೆ 55% ಒಪ್ಪಿಗೆ ಇದ್ದರೆ ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ಅಂದರೆ 14% ಉತ್ತಮ ನಾಯಕರಾಗುತ್ತಾರೆ ಎಂದು ಕಂಡುಬಂದಿದೆ.
ಹೆಚ್ಚಿನ ಭಾರತೀಯರು ಪುರುಷರು ಮತ್ತು ಮಹಿಳೆಯರು ಕೆಲವು ಕೌಟುಂಬಿಕ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು ಎಂದು ಹೇಳುತ್ತಿದ್ದರೂ ಅನೇಕರು ಇನ್ನೂ ಸಾಂಪ್ರದಾಯಿಕ ಲಿಂಗ ಪಾತ್ರಗಳನ್ನು ಬೆಂಬಲಿಸುತ್ತಾರೆ ಎಂದು ವರದಿಯು ಉಲ್ಲೇಖಿಸಿದೆ.
ಮಕ್ಕಳ ವಿಷಯಕ್ಕೆ ಬಂದರೆ, ಒಂದು ಕುಟುಂಬಕ್ಕೆ ಕನಿಷ್ಠ ಒಬ್ಬ ಮಗ ಇರಬೇಕು ಎಂದು 94% ಜನರು ಅಂದುಕೊಂಡಿದ್ದಾರೆ ಹಾಗೆ ಮಗಳು ಸಹ ಬೇಕು ಎಂದು 90% ಅಂದುಕೊಳ್ಳುತ್ತಾರೆ.
ಹೆಚ್ಚಿನ ಭಾರತೀಯರು (63%) ಗಂಡು ಮಕ್ಕಳು ಪ್ರಾಥಮಿಕವಾಗಿ ಪೋಷಕರ ಕೊನೆಯ ವಿಧಿಗಳಿಗೆ ಅಥವಾ ಸಮಾಧಿ ಆಚರಣೆಗಳಿಗೆ ಇರಬೇಕು ಎಂದು ಹೇಳುತ್ತಾರೆ. ಆದಾಗ್ಯೂ ಈ ನಿಯಮಗಳು ಧಾರ್ಮಿಕ ವಿಷಯಕ್ಕೆ ಬಂದರೆ ಗಮನಾರ್ಹವಾಗಿ ಭಿನ್ನವಾಗಿವೆ.
ಮುಸ್ಲಿಮರು (74%), ಜೈನರು (67%) ಮತ್ತು ಹಿಂದೂಗಳು (63%) ಮಕ್ಕಳು ಅಂತ್ಯಕ್ರಿಯೆಯ ಆಚರಣೆಗಳಿಗೆ ಪ್ರಾಥಮಿಕವಾಗಿ ಜವಾಬ್ದಾರರಾಗಿರಬೇಕು ಎಂದು ಹೇಳುತ್ತಾರೆ. ಆದರೆ, ಸಿಖ್ಖರು (29%), ಕ್ರಿಶ್ಚಿಯನ್ನರು (44%) ಮತ್ತು ಬೌದ್ಧರು (46%) ಇದನ್ನು ಕಡಿಮೆ ಪ್ರಮಾಣದಲ್ಲಿ ನಿರೀಕ್ಷಿಸುತ್ತಾರೆ. ತಂದೆ-ತಾಯಿಯ ಅಂತಿಮ ಸಂಸ್ಕಾರಕ್ಕೆ ಗಂಡು ಮತ್ತು ಹೆಣ್ಣು ಇಬ್ಬರೂ ಜವಾಬ್ದಾರರಾಗಿರಬೇಕು ಎಂದು ಈ ಕೆಲ ಧರ್ಮಗಳಲ್ಲಿನ ಜನರು ಹೇಳುತ್ತಾರೆ.
ಇತರ ಭಾರತೀಯರಿಗಿಂತ ಮುಸ್ಲಿಮರು ಕುಟುಂಬಗಳಲ್ಲಿ ಸಾಂಪ್ರದಾಯಿಕ ಲಿಂಗ ವ್ಯವಸ್ಥೆಯನ್ನು ಬೆಂಬಲಿಸುವ ಸಾಧ್ಯತೆಯಿದೆ. ಆದರೆ, ಸಿಖ್ಖರು ಸಾಮಾನ್ಯವಾಗಿ ಈ ರೀತಿಯ ಅಭಿಪ್ರಾಯಗಳನ್ನು ಹೆಚ್ಚಾಗಿ ಹೊಂದಿಲ್ಲ.